Jun 042018
 

  23 Responses to “ಪದ್ಯಸಪ್ತಾಹ ೩೧೦: ಚಿತ್ರಕ್ಕೆ ಪದ್ಯ”

  1. ಸಾಂಗತ್ಯ||
    ತನ್ನ ಕಾವ್ಯಕೆ ತಾನೆ ಕವಿಯೊಬ್ಬ ಮಣಿವಂತೆ
    ಸಂತಸ ಪಡುವುದು ಬಿಟ್ಟು
    ತನ್ನ ಬಿಂಬವ ಕಂಡು ಮುನಿಸಿಕೊಂಡಿಹನೀತ
    ತಿಳಿಯುವುದೆಂತಿದರ ಗುಟ್ಟು!

    • ಚೆನ್ನಾಗಿದೆ ನಂದನರೇ. 2&4ನೇಸಾಲುಗಳಲ್ಲಿಯೂ ಆದಿಪ್ರಾಸವನ್ನ ಪಾಲಿಸಬೇಕು.

    • ಗತಿಸುಭಗತೆಯಿದೆ. ಅಭಿನಂದನೆಗಳು. (ಸಂತಸಬಡುವುದನುಳಿದು)

    • ಧನ್ಯವಾದಗಳು ಸರ್. ಪ್ರಾಸಕ್ಕಾಗಿ ತುಂಬಾ ಯೋಚಿಸಿದೆ. ಹೊಳೆಯಲಿಲ್ಲ ಅದಕ್ಕೆ ಅಂತ್ಯಪ್ರಾಸ ಮಾಡಿದೆ.

    • ಒಟ್ಟು ಇರುವ ಮೂರು ಪ್ರಾಸಗಳ ಪೈಕಿ ’ನ್ನ’ ಮತ್ತು ’೦ತ’ಗಳಿಗೆ ಹೊಂದಿಸಿದ್ದೇನೆ.

      ತನ್ನ ಸೃಷ್ಟಿಗೆ ತಾನೆ ಕಲೆಗಾರ ಮೆರೆವಂತೆ
      ಉನ್ನತಿಯನೇಕೀತ ಪೊಂದಂ|
      ತನ್ನ ಬಿಂಬವ ಕಂಡು ಮುನಿಸಿಕೊಂಡಿರುವನ-
      ದಿನ್ನೆಂತರಿವುದಯ್ಯೊ ಗುಟ್ಟ!!

      ಕಂತಿಯು ಮೆರೆದಂತೆ ತನ್ನ ಕಾವ್ಯಕೆ ತಾನೆ
      ಸಂತಸಬಡುವುದನುಳಿದು|
      ಇಂತೀತ ನಿಜಬಿಂಬಕ್ಕೇತಕ್ಕೊ ಮುನಿದಿರ್ಪ-
      ನೆಂತೀಗಳರಿವೆ ನಾ ಗುಟ್ಟ||

      ’ಳ’ಪ್ರಾಸವನ್ನು ನೀವೇ ಯತ್ನಿಸಿ. (’ಳ’ಪ್ರಾಸಕ್ಕೆ ಬಹಳಶಬ್ದಗಳಿವೆ: ಅಳುತಳುತ, ಅಳೆದಳೆದು, ಇಳಿದಿಳಿದು, ಇಳೆಗಿಳಿದು, ಎಳೆದೆಳೆದು, ಒಳಗೊಳಗೇಽ, ಕಳಕಳಿ, ಕೆಳಗಿಳಿದು, ಗಳಗಳನೆ, ಛಳಿಛಳಿ, ಜುಳುಜುಳು, ತಿಳಿತಿಳಿದು, ತುಳಿತುಳಿದು, ತೆಳುತೆಳುವ, ತೊಳೆತೊಳೆದು, ದಳದಳ, ನಳನಳಿಸು, ಪಿಳಿಪಿಳಿ, ಫಳಫಳ, ಬಿಳಿಬಿಳಿಯ, ಬುಳುಬುಳನೆ, ಸುಳಿಸುಳಿದು, ಸೆಳೆಸೆಳೆದು, ಹಳಹಳಿಸು, ಹಳಿಗಿಳಿದು, ಹುಳಿಯಿಳಿಸು 😀 )

      • ಹಾದಿರಂಪರ ಪ್ರಾಸದ ಪಟ್ಟಿಯ ಸಣ್ಣ ತುಣುಕು ಕಾಣಸಿಕ್ಕಿದ್ದು ನಮ್ಮ ಅದೃಷ್ಟ 😛

        • ಹ್ಹಹ್ಹ. ಇದು ಈಗ ಹೊಸದದ್ದಪ್ಪ. ಆರ್ಕೈವ್ ಅಲ್ಲ.

      • ಧನ್ಯವಾದಗಳು ಸರ್. ಪ್ರಾಸಗಳನ್ನು ಹೀಗೆ ಲಿಸ್ಟ್ ಮಾಡಿಕೊಳ್ಳುವುದು ಒಳ್ಳೆಯ ಉಪಾಯ. ಪ್ರಯತ್ನಿಸುವೆ.

        • ಅಯ್ಯೋ ಬೇಡ. ನನಗಂತೂ ವಯಸ್ಸಾಯಿತೆಂದು ಹಾಗೆ ಮಾಡಿದೆ. ನೀವು ಎಳವೆಯಲ್ಲೇ ಅದಕ್ಕೆ ಬಲಿಬೀಳಬೇಡಿ. ಸಹಜವಾಗಿ ರಚಿಸಲು ತೊಡಗಿಕೊಳ್ಳಿ. ಕ್ರಮೇಣ ಸಿದ್ಧಿಸುತ್ತೆ. ಇದಂತಿರಲಿ, homework ಕೊಟ್ಟಿದ್ದೆನಲ್ಲ ’ಳ’ಪ್ರಾಸಪದ್ದು, ಎಲ್ಲಿಗೆ ಬಂತು? ಅದನ್ನೂ ನಾನೇ ಮಾಡಿದ್ದೇನೆ:
          ಒಳಿತಾದ ನಿಜಕಾವ್ಯದಿಂ ತುಷಿಪ ಕವಿವೊಲು
          ಪುಳಕಗೊಳ್ಳದೆಲೇಕೊ ಪೋರಂ|
          ಒಳಗಣ ಬಿಂಬವ ಕಂಡು ಮುನಿಯಲೀಗ
          ತಿಳಿವುದೆಂತಾಮಿದರ ಗುಟ್ಟ!!

          ಈಗ ಮೂರೂ ಪ್ರಾಸದಿಂದ ನೀವು ವಿಭಿನ್ನವಾಗಿ ಮಾಡಿ!

  2. ಪ್ರಥಮಪಾಠಮಿದಲ್ತೆ ಲೋಕಶಾಲೆಯೊಳಂಗೆ
    ವ್ಯಥೆಗೊಳ್ಳೆ ನೀಮನ್ಯರುಂ ವ್ಯಥಿಪರೈ|
    ಶಿಥಿಲಗೊಳ್ಳದೆ ನೆಡೆಯೆ ದಢಮಾಗಿ ನೀ ನಿನ್ನ
    ಪಥಮನೇ ಅನುಕರಿಪರೆಲ್ಲರಲ್ತೆ||

  3. ಕನ್ನಡಿಯೆದಿರ್ ಬದಿಯೂಳಿಂ –
    ತೆನ್ನವೊಲಿರ್ಪಗೆ ಬೆಸುವಾಗೆ ವೆರಳಂ ವೆರಳಿಂ |
    ಸನ್ನೆಗುಡದಡಗಿದವ್ವೆಯ
    ಮುನ್ನಮೆಣಿಸವ ಮಣಿಸಿರ್ಪ ಕರುಳಂ ವೆರಳೊಳ್ ||

    ಬಿಂಬದಲ್ಲಿ ತನ್ನಂತಿರುವವನ ಬೆರಳಿಗೆ ಬೆರಳನ್ನು ಜೋಡಿಸುವಾಗ , ಮರೆಯಲ್ಲಿ ಅಡಗಿದ್ದ ಅಮ್ಮನನ್ನು ಕನ್ನಡಿಯಲ್ಲಿ ಕಂಡು ಅವಳನ್ನು ಬೆರಳಲ್ಲಿ ಮಣಿಸಿಹನೇ ?

    • ಅಮ್ಮನ ಕರೆಯದಿರೇ, ಗುಮ್ಮಾ ನೀಽಽ, ಅಮ್ಮನ ಕರೆಯದಿರೇ

      • ನನ್ನ “ಕಂದ”ಗೆ ದನಿಯಾದುದಕ್ಕೆ ಧನ್ಯವಾದಗಳು ಪ್ರಸಾದ್ ಸರ್ ,
        ಆದರೆ “ಗುಮ್ಮ” ಪುಲ್ಲಿಂಗ ಅಲ್ಲವೇ ?!!
        (ಪುಟ್ಟ ಕಂದನನ್ನು ಕನ್ನಡಿಯ ಮುಂದೆ ಆಡಲು ಬಿಟ್ಟು ಯಾವ ತಾಯಿ ತಾನೇ ದೂರವಿದ್ದಾಳು ?!)

        • ಹೌದು ಗುಮ್ಮ ಪುಲ್ಲಿಂಗ. ಅದಕ್ಕೇ ಗುಮ್ಮಾ ಎಂದು ಬರೆದಿದ್ದೇನೆ 😉

      • ಕನ್ನಡಿಯಲಾದ “ಎಡಬಲದ ” ಪಾರ್ಶ್ವ ಪಲ್ಲಟ (lateral inversion ) !!

        ಮಮ್ಮು ಉಣ್ಣುವ ಕೈಯನೊಮ್ಮೆ ಪ(ಕ)ಕ್ಕದ ಕೈಲಿ
        ನೆಮ್ಮುsದು ನೀನಿಂತು ತರವೆ ತಿಮ್ಮ !
        ಸುಮ್ಮನಾಡುತಲಿರುವೆ ಹಮ್ಮುಬಿಮ್ಮನು ತೊರೆದು
        ಅಮ್ಮsನ ಕರೆಯ ಬೇಡೆಲವೊ ಗುಮ್ಮ !!

  4. ಮುಳಿವೆಯೇಕೆ ಮಗುವೆ ಮೊಗವದು ನಿನ್ನದೇ
    ಇಳೆಗೆ ಮುದವನೀವ ಚೆಂದನುವಿದೇ
    ಬಳಿಗೆ ಬಾರೋ ಕಂದ ಬಿಟ್ಟು ಕನ್ನಡಿಯನು
    ಅಳುವೆಯೇಕೆ ಹೂರಗೆ ಬಾರನವನು

    • ಮಾತ್ರಾಗಣಿತವು ತಪ್ಪಿದೆ. ಹೀಗೊಂದು ಸವರಣೆ:
      ಮುಳಿಯಲೇತಕೆ ಮಗುವೆ ತನುವಹುದು ನಿನ್ನದೇ
      ಇಳೆಗೆ ಮುದವನ್ನೀವ ಆ ಮೊಗವು ಮೇಣ್|
      ಬಳಿಯೆನ್ನ ನೀ ಸಾರೊ ಬಿಡೆಲವೋ ಕನ್ನಡಿಯ
      ಅಳಲೇಕೆ ಪೊರಮಟ್ಟನವನು ಕೇಳೋ||

      • ಸರ್ ಪದ್ಯ ಆಟವೆಲದಿ ಛಂದಸ್ಸಿನಲ್ಲಿದೆ.

        ಬ್ರಹ್ಮ ಬ್ರಹ್ಮ ಬ್ರಹ್ಮ ವಿಷ್ಣು ವಿಷ್ಣು
        ಮುಳಿವೆ/ಯೇಕೆ/ ಮಗುವೆ/ ಮೊಗವದು/ ನಿನ್ನದೇ
        ಸರಿಯಲ್ಲವೇ?

        ಧನ್ಯವಾದಗಳು.

        • ಸರ್. ಆಟವೆಲದಿಯಲ್ಲಿ & ತೇಟಗೀತಿಯಲ್ಲಿ ಮಾತ್ರೆಗಳ ಲೆಕ್ಕ ಅಲ್ಲವೇ? ಕನ್ನಡದ ಅಂಶಗಣಗಳಂತೆ ಅಲ್ಲ ಎಂದು ನನ್ನ ಅನಿಸಿಕೆ. ತಪ್ಪಿದ್ದರೆ ತಿದ್ದಿ.

      • @ Srihari: ಅಯ್ಯೋ ಕ್ಷಮಿಸಿ. ನಾನು ಅಂಶಛಂದಸ್ಸನ್ನು ಪರಿಗಣಿಸಲೇ ಇಲ್ಲ. ಇದು ಕೆಲವು ಬಾರಿ ಆಗಿದೆ ನನಗೆ. ಇನ್ನು ಜಾಗ್ರತೆಯಿಂದಿರುತ್ತೇನೆ. ನಿಮ್ಮ ಪದ್ಯವು ಸರಿಯಾಗಿದೆ.
        @ Nandan: ಸೀಸಪದ್ಯವೊಂದರಲ್ಲಿ ಮಾತ್ರಾಸೀಸ ಎಂಬೊಂದಿದೆ. ಇದು ಪಂಚಮಾತ್ರವೇ. ಇಲ್ಲಿಯೂ ಗೀತಿಯನ್ನು (ಆಟವೆಲದಿ/ ತೇಟಗೀತಿ) ಅಂಶವಾಗೇ ರಚಿಸಲಾಗುತ್ತದೇನೋ. ಸೀಸರಹಿತ ಗೀತಿಯು ಅಪರೂಪವೇ. ಸಾಂಗತ್ಯ, ತ್ರಿಪದಿ, ಅಕ್ಕರ, ಸಂತುಲಿತಗತಿಗಳೆಲ್ಲ ಶುದ್ಧ ಅಂಶಗಳೇ; ಇವುಗಳ ಮಾತ್ರಾಪ್ರಕಾರಗಳಿಲ್ಲ.

  5. ಸಕಲರೆಲ್ಲರ ದೂರುವಾಗೆಲ್ಲ ನೀಂ ಮನದಿ
    ಮುಕುರವೊಂದಂ ಕಲ್ಪಿಸಿಕೊಳೊ ನಡುವೆ|
    ಚಿಕಿತವೈ! ’ಬ್ರಹ್ಮಾಸ್ಮ್ಯಹಂ’, ’ಸರ್ವಮಿದು ಬೊಮ್ಮ’ –
    ಯುಕುತಿಯಿಂದರಿವೆ ಈ ಉಕ್ತಿಗಳ ನೀಂ||

  6. ಕಂದಗೆ ಕಂದದ ಜೋಡಣೆ !!

    ಕಂದಂ ಕನ್ನಡಿಸಿಹ ಬಗೆ
    ಬಂದಂ , “ಜ”ಗಣ ಸ್ವರೂಪಮಿದು ಬಲ್ ಚಂದಂ
    ತಂದುಕೊಳಲ್ ಬಿಂಬಂ ಭಲ
    ಮೊಂದುದೆಡಂ ಬಲದ ಪಲ್ಲಟಂ ಗಣನೀಯಂ !!

    ತಂದುಕೊಳಲ್ = ಉಂಟುಮಾಡಿಕೊಳ್ಳು
    ಒಂದು = ಹೊಂದಿಕೆಯಾಗು
    (“ಕಂದ “ದಲ್ಲಿ ಜಗಣ(u-u)ವಿರಲಾಗಿ , ಬಿಂಬದಲ್ಲಿ ಉಂಟಾಗುವ ಎಡ -ಬಲದ ಪಲ್ಲಟವು ಒಪ್ಪುವoತಹುದು )

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)