Jul 032018
೧. ಮಾಲಿನೀಛಂದಸ್ಸಿನ ಸಮಸ್ಯೆಯನ್ನು ಪರಿಹರಿಸಿರಿ
ಫಲದೆ ಮೆರೆದ ಕಯ್ಪೇ ಸರ್ವದಾಸ್ವಾದನೀಯಂ
೨. ದೃತವಿಲಂಬಿತದ ಸಮಸ್ಯೆಯಸಾಲನ್ನು ಪೂರ್ಣಮಾಡಿರಿ
ಇರುಳ ನೇಸರನಾತಪದಂತೆ ದಲ್
೧. ಮಾಲಿನೀಛಂದಸ್ಸಿನ ಸಮಸ್ಯೆಯನ್ನು ಪರಿಹರಿಸಿರಿ
ಫಲದೆ ಮೆರೆದ ಕಯ್ಪೇ ಸರ್ವದಾಸ್ವಾದನೀಯಂ
೨. ದೃತವಿಲಂಬಿತದ ಸಮಸ್ಯೆಯಸಾಲನ್ನು ಪೂರ್ಣಮಾಡಿರಿ
ಇರುಳ ನೇಸರನಾತಪದಂತೆ ದಲ್
ಬಲು ಬಗೆಯ ಪರಿಪ್ರಾಸಂಗಳಂ ಪೊಲ್ವ ತ್ರಾಸಂ
ಸಲೆ ಬಗೆಯಲಲಂಕಾರಂ ಗಡಾ ಬಲ್ವೆ ಭಾಸಂ
ನೆಲೆ ನಿಲಿಸೆನೆ ಛಂದೋಬದ್ಧ ಪದ್ಯಂಗಳಂ ಮೇಣ್
ಫಲದೆ ಮೆರೆದ ಕಯ್ಪೇ ಸರ್ವದಾ ಸ್ವಾದನೀಯಂ ||
ಪ್ರಾಸಗಳನ್ನು ಹೊಂದಿಸುವ ತ್ರಾಸ / ಹೆಚ್ಚಾಗಿ ಅಲಂಕಾರವನ್ನು
ತರಲೇ ಬೇಕಾದ ಪ್ರತೀತಿ – ಆದರೂ ಛಂದೋಬದ್ಧ ಪದ್ಯ ರಚನೆ ತರುವ ಆನಂದದ ಬಗೆಗಿನ ಪದ್ಯ !!
ಆಯುರ್ವೇದದ ಪ್ರಕಾರ ಷಡ್ರಸಗಳು: ಮಧು/ಸ್ವಾದು, ಅಮ್ಲ/ಹುಳಿ, ಲವಣ/ಉಪ್ಪು, ಕಟು, ತಿಕ್ತ/ಕಯ್ಪು, ಕಷಾಯ
ಕೆಲವದಿಹವು ನೋಡಲ್ ಸ್ವಾದಗಳ್: ಸ್ವಾದು ಮೇಣಿಂ
ನುಲಿವ ಪುಳಿಯುಂ,+ಉಪ್ಪುಂ, ತಾಂ ಕಷಾಯಂ ಗಡಿನ್ನಾ|
(ಪುದೀನಾ)ಎಲೆಯ ಕಟುವದೆಲ್ಲಂ ಸ್ವಾದ್ಯಮೆಂತೋ ಮಗುಳ್ ಕೇಳ್
(ಹಾಗಲ)ಫಲದೆ ಮೆರೆದ ಕಯ್ಪೇ ಸರ್ವದಾಸ್ವಾದನೀಯಂ||
ವರ> ವರೀಯಾನ್> ಹಿರಿಯ
ಕಿರಿಯ ಮೇಣ್ ವರಸೋದರಭಾವಮುಂ
ದೊರೆಯ ಧಾರ್ಮಿಕಶಾಸನತೋಷಮುಂ|
ನೆರೆಯರೊಳ್ ಬಹುಮೋದಮು ಸೌಖ್ಯಮೈ
ಇರುಳ ನೇಸರನಾತಪದಂತೆ ದಲ್||
ಬರಿದೆ ನೆಚ್ಚುತಲೀಯಿರವಂ ದಿನಂ
ಮರುಳುಗಾಣುವವಂ ನರನೆನ್ನತಾ-
ನರಿಯೆ ಕಣ್ಣೆವೆಯಂ ಮಡಿಚಿರ್ಪುದಿಂ-
ತಿರುಳ ನೇಸರನಾ “ತಪ “ದಂತೆ ದಲ್ !!
ಕಣ್ಣಿಗೆ ಕಂಡದ್ದನ್ನು ನೆಚ್ಚುವ ಮಾನವ , ತಾನಾರೆಂದು ತಿಳಿಯಲು ಕಣ್ಣ ಮುಚ್ಚಿರುವುದು – ದಿನದಲ್ಲಿ ಕಂಗೊಳಿಸುವ ಸೂರ್ಯ ರಾತ್ರಿಯಲ್ಲಿ ಆಚರಿಸುವ ತಪಸ್ಸಿನಂತೆ ಕಂಡ ಕಲ್ಪನೆಯ ಪದ್ಯ
ಚೆನ್ನಾಗಿದೆ ಯಮಕ.
ಧನ್ಯವಾದಗಳು ಪ್ರಸಾದ್ ಸರ್ .
ಉರುಳುತಿಂತುರಿವೀ ಭುವಿತಾಂ ಗಡಾ
ಬೆರಗು ಗುಂಡೊಲು ಹತ್ತುತಲಾರುದುಂ
ಸರದಿಯೊಳ್, ಬೆಳಗಿಂ ಬಗೆ ಬೈಗ ಮೇ –
ಣಿರುಳ ನೇಸರನಾತಪದಂತೆ ದಲ್ ||
ಸುತ್ತುತ್ತಿರುವ on & off bulb ನಂತೆ ಭೂಮಿ ಎಂಬ ಕಲ್ಪನೆ – ಇದು ಬೆಳಗು , ಸಂಜೆ & ರಾತ್ರಿಯ ಸೂರ್ಯನ ಕಾಂತಿಯ ಪ್ರಭಾವವಲ್ಲದೆ ಮತ್ತೇನು ?!
ಕಲಹಮೆನುವ ಕಯ್ಪಂ ನಿತ್ಯಮುಂ ನುಂಗುತುಂ ತಾವ್
ಕಲೆತು ಬದುಕಿ ಬಾಳೊಳ್ ಕಂಡಿರಲ್ ಪ್ರೀತಿಯೆಂಬೀ
ಜಲಜಕುಸುಮಮಂ, ಪಂಕೇಜಮಂ ಕಂಡವೋಲ್ ಆ
ಫಲದೆ ಮೆರೆದ ಕಯ್ಪೇ ಸರ್ವದಾಸ್ವಾದನೀಯಂ
ಸಂಸಾರದ ಕಲಹಗಳನ್ನು ಮೀರಿದಾಗ ಸಿಗುವ ಸಂತೋಷದಲ್ಲಿ ಆ ಕಲಹಗಳೂ ಸವಿನೆನಪುಗಳಾಗುತ್ತವೆ ಅನ್ನುವ ಪ್ರಯತ್ನ