Jul 162018
 

  7 Responses to “ಪದ್ಯಸಪ್ತಾಹ ೩೧೬: ಚಿತ್ರಕ್ಕೆ ಪದ್ಯ”

  1. ಜೀವಾತ್ಮವೆಂಬಂತೊರು ಪಕ್ಕಿತಾಂ ಗಡಾ
    ತೀವಿರ್ಪ ಜೇಂಗಟ್ಟಿಯನಿಂತು ನೆಚ್ಚಿರಲ್
    ಭಾವ ಪ್ರಕಾರಂಗಳೆ ಮುತ್ತೆ ಜೇನವೋಲ್
    ಜೀವಾಳಮಿಂತೈ ಸವಿಗಾಣೆ ಜೀವಿತಂ ।।

    “ಜೀವಾತ್ಮ”ಎಂಬ ಒಂಟಿ ಹಕ್ಕಿಯ ಜೀವಿತದ ಮರ್ಮದ ಕಲ್ಪನೆ !!

  2. ಕರಿಗಾಳ ತೆನೆಯದೆಂದೆನು –
    ತೆರಗುತೆ ಪಕ್ಕಿಯದೊ ಜೇನಹುಟ್ಟಂ ಚೆಲ್ಲಾ-
    ಡಿರೆ, ಚೀರ್ದೊಡೆ ಪುಳುಗಳ್ ಗಡ
    ಭರದಾತ್ಮಾಹುತಿಯ ದಾಳಿಯೋಲ್ ಕಂಡುದ ಕಾಣ್ !!

  3. ಮೆಳ್ಳಗಣ್ಣಲಿ ಕಂಡು ಮಳ್ಳುಪಕ್ಕಿಯು ಕುಕ್ಕೆ
    ಮುಳ್ಳು ಮುಚ್ಚಿsದ ಹಣ್ಣಿsಗೆ | ಹುಳುಹಾರಿ
    ಬೆಳ್ಳsನೆ ಹೂವೆಂದು ಮುತ್ತಾವ !!

    • A case of mutual misunderstanding – good imagination. /ಹೂವೆಂದು/ ವಿಷ್ಣುಗಣವಾಯಿತು. /ಬೆಳ್ಳಽನಽ/ಲರೆನು/ತ್ತೆರಗ್ಯಾವಽ/ ಎಂದು ಸವರಬಹುದು.

      • ಧನ್ಯವಾದಗಳು ಪ್ರಸಾದ್ ಸರ್ ,
        ತಿದ್ದಿದ ಪದ್ಯ :

        ಮೆಳ್ಳಗಣ್ಣಲಿ ಕಂಡು ಮಳ್ಳುಪಕ್ಕಿಯು ಕುಕ್ಕೆ
        ಮುಳ್ಳು ಮುತ್ತಿ sದ ಹಣ್ಣಿsಗೆ | ಹುಳುಹಾರಿ
        ಬೆಳ್ಳsನಲರೆನುತೆರಗಾವ !!

  4. ವ್ಯತ್ಯಯಂ ತಾನಿನಿತೆ: ಜತನದಿಂ ಮಾನವನು
    ಪ್ರತ್ಯೇಕದಿಂ ಕೊಳುವ* ಜೇನ(honey)-ಗೂಡ(wax)|
    ಅತ್ಯಾತುರವು ಖಗಕೆ, ಸೇವಿಪುದದೆಲ್ಲವನು
    ಹತ್ಯೆಗೈಯುತೆ (ಜೇನ್)ನೊಣವನ್-ಅಂಡವನ್ನುಂ(Larvae)||
    *ಕೊಳುವ – Harvest ಎಂಬರ್ಥದಲ್ಲಿ

  5. ಪರದೇಶಿ ಪಕ್ಕಿ ಬೆಳು ಗಡ
    ಹರಿಹಾಯುತೆ ಭರತಖಂಡಮೆಂ ಜೇಂಗೊಡಕಂ
    ಪರಿಮುತ್ತುಗೊಳುತಿರಲ್ಕದ
    ಬರಿ ಕೆಲಬರುಮಿಂತು ಹೋರ್ದು ಕಾಲ್ಗೆಡಿಸುದ ಕಾಣ್ !!

    ಪರಿಮುತ್ತುಗೊಳ್ = ದಾಳಿಮಾಡು
    ಕಾಲ್ಗೆ ಡಿಸು = ಉರುಳಿಸು

    (ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸೇನಾನಿಗಳ ನೆನೆದು )

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)