Jul 252018
 

೧. ಕಂದಪದ್ಯದ ಸಮಸ್ಯೆಯ ಸಾಲನ್ನು ಪರಿಹರಿಸಿ
ಎಳೆಯರ ಪಿರಿತನವ ಕಂಡು ಸುಯ್ದರ್ ಮುದಿಯರ್

೨. ಉತ್ಪಲಮಾಲೆಯ ಸಮಸ್ಯೆಯ ಸಾಲನ್ನು ಪರಿಹರಿಸಿ:
ಗೋವಿನ ರೋಷಕಂ ಬೆದರ್ದ ಸಿಂಗಮನೀಕ್ಷಿಪುದಲ್ತೆ ಸಂತತಂ

  19 Responses to “ಪದ್ಯಸಪ್ತಾಹ ೩೧೭: ಸಮಸ್ಯಾಪೂರಣ”

 1. ತಳೆದು ವಿರಕ್ತಿಯನಿವರೊಳ್
  ಬಳೆಯುತೆ ದೂರದೊಳಿರಲ್ಕೆ ಪುತ್ರರ್, ನಲವಿಂ
  ಬಳಿಸಾರ್ದುಮೊಮ್ಮರಿರಲಾ
  ಎಳೆಯರ ಪಿರಿತನವ ಕಂಡು ಸುಯ್ದರ್ ಮುದಿಯರ್

  ಸುಯ್ದರ್=ನಿಟ್ಟುಸಿರಿಟ್ಟರು ಅಂದುಕೊಂಡು ಬರೆದದ್ದು

 2. ಇದೇನಿದು ಶುಕ್ರವಾರ ಬೋಣಿಯಾಗುವ ಹಾಗಾಯ್ತಲ್ಲ 🙁

  ಎಲ್ಲಿ ಮಲಗಿಹಿರಿ ಪದ್ಯಪಾನಿಗಳೆ ನಿದ್ದೆಯಿಂದಲೇಳಿ
  ಸೊಲ್ಲಮಳೆ ಸುರಿಸಿ,ಪದ್ಯಪಾನದೀ ಕೊಳದೊಳಾಡಿ ತೇಲಿ
  ಮಲ್ಲೆ ಪೂವಿನೊಲು ಕಂಪ ಬೀರುತಿಹ ಪದ್ಯತತಿಯನೊರೆದು
  ನಿಲ್ಲಿ ನಿತ್ಯವೂ ಜನರ ಮನಕೆ ಸಲುವಂಥ ಕಬ್ಬ ಬರೆದು

  • ಮಾಸ-ವರ್ಷಪರ್ಯಂತದೊಳಗಮಾಲಸ್ಯದಿಂದಲಿದ್ದು
   ಮೂಸಿನೋಡದೆಲೆ ಪದ್ಯಪಾನವಂ ದೂರವುಳಿವರಿರಲೈ|
   ತಾಸೊಳರ್ಧವನು ಕಳೆದ ವಾರದೊಳ್ ಕೊಡದೆ ಪೋದ ನೀಂ ಚಿ-
   ತೈಸದಿರ್ಪರಂ ತರವೆ ಹಳಿವುದುಂ ಬಂದ ಚಣದೊಳಿಂದುಂ||

 3. ಬೆಳೆದಿರ್ಪ ಬೆಂಗಳೂರೊಳ್ ,
  ಅಳವಡಿಸಿರ್ಪ ಪುರ ಸಾರಿಗೆಯೊಳಾಸನವಂ
  ಕಳಕಳಿಯಿಂದಿತ್ತಿರ್ಪೊಡೆ
  ಎಳೆಯರ ಪಿರಿತನವ ಕಂಡು ಸುಯ್ದರ್ ಮುದಿಯರ್ !!

  BTS ಬಸ್ಸಲ್ಲಿ ಬಾಲಕರು ಸೀಟ್ ಬಿಟ್ಟುಕೊಟ್ಟಾಗ ನೆಮ್ಮದಿಯ
  ಉಸಿರುಬಿಟ್ಟ ವೃದ್ಧರ ಕಲ್ಪನೆ !!

 4. (ಪದ್ಯಸಪ್ತಾಹ-೩೧೭ರ ಕಂದಪದ್ಯ ಸಮಸ್ಯಾಪೂರಣಕ್ಕೆ ನನ್ನದೊಂದು ಪ್ರಯತ್ನ.)
  ಗೆಳೆಯರ್ ಕುಣಿದಾಡುತಿರಲ್,
  ಗುಳಿಯೊಳ್ಬಿದ್ದಿರ್ಪೆಳೆಗರುಮೊಂದಂ ನೋಡಲ್!
  ಎಳೆಯುತೆ ಮೇಲಕದಂಬೊರೆ
  ದೆಳೆಯರ ಪಿರಿತನವ ಕಂಡು ಸುಯ್ದರ್ ಮುದಿಯರ್!
  [ಗೆಳೆಯರ ಗುಂಪೊಂದು ಆಟವಾಡುತ್ತಿರುವಾಗ,ಗುಣಿಗೆ ಬಿದ್ದಿದ್ದ ಎಳೆಗರುವೊಂದನ್ನು ನೋಡಿ,ಹೇಗೋ ಅದನ್ನು ಮೇಲೆತ್ತಿದುದನ್ನು ಕಂಡು,ಅಲ್ಲಿದ್ದ ವೃದ್ಧರು ನಿಟ್ಟುಸಿರು ಬಿಟ್ಟು ಸಮಾಧಾನಗೊಂಡರು-ಎಂದು ನನ್ನ ಭಾವ.
  ಛಂದೋಬದ್ಧ ಪದ್ಯಗಳಿಗೂ, ವಿಶೇಷವಾಗಿ, ಹಳಗನ್ನಡ ಕ್ಕೂ ನಾನು ತೀರಾ ಹೊಸಬ.ಬಹುಶ: ಇದು ನನ್ನ ಮೊದಲ ಪ್ರಯತ್ನವೇ
  ]

  • ಕಲ್ಪನೆ-ಭಾಷೆಗಳೆಲ್ಲ ಚೆನ್ನಿವೆ. ಸಮಪಾದದ ಮಧ್ಯಗಣವು ಸರ್ವಲಘುಗಣವಾದರೆ ಮೊದಲನೆಯ ಅಕ್ಷರದ ನಂತರ ಯತಿಯಿರಬೇಕು (ಮೊದಲನೆಯ ಅಕ್ಷರಕ್ಕೆ ಪದವು ಮುಗಿಯಬೇಕು – http://padyapaana.com/?page_id=438). ನನ್ನಂಥ ಅದೆಷ್ಟೋ ಜನರ ಮೊದಲ ಪದ್ಯಕ್ಕಿಂತ ನೂರ್ಪಟ್ಟು ಚೆನ್ನಿದೆ. ಧನ್ಯವಾದಗಳು.

   • ಅಮೂಲ್ಯವಾದ ತಮ್ಮ ಸೂಚನೆಗಳಿಗೆ ಅನಂತ ಧನ್ಯವಾದಗಳು ಸರ್
    ಆ ಒಂದು ಯತಿಯ ವಿಷಯ ಸೋದಾಹರಣವಾಗಿ ತಿಳಿಸಿಕೊಟ್ಟರೆ, ಇನ್ನಷ್ಟು ಸ್ಪಷ್ಟವಾಗುತ್ತದೆ ಎಂದು ನನ್ನ ಮನವಿ.
    ನಮಸ್ಕಾರಗಳು,ಸರ್

    • ಸಂಖ್ಯೆ ೭ರಲ್ಲಿನ ನನ್ನ ಪದ್ಯವನ್ನು ನೋಡಿ

    • ನಿಮ್ಮ ಪದ್ಯಗಳೆರಡೂ ಇಷ್ಟವಾದುವು.ನೀವು ನೋಡಿಲ್ಲವೆಂದಾದಲ್ಲಿ ಈ ಕೆಳಗಿನ video ಸಹಾಯಕವಾಗಬಲ್ಲುದು
     https://youtu.be/vNISYzVY_98

 5. ಯುವಜನರು ತಾವೇ ಸಂಗಾತಿಯನ್ನು ಕಂಡುಕೊಳ್ಳುವ ಈ ಕಾಲದಲ್ಲಿ, ’ನನ್ನ ಹಿತದೃಷ್ಟಿಯಿಂದ ಪಾಲಕರು ನೋಡಿದ್ದೇ ನನಗೆ ಒಳಿತು’ ಎಂತೆಂಬೆಳೆಯರ…
  ಕೆಳೆಯಂ ಬಾಳಿಂಗಿಂದುಂ
  ಗಳಿಸಿಕೊಳುತ್ತಿರ್ದಿರಲ್ ಕಿರಿಯರೇ, “ಎಮಗೇಂ|
  ಒಳಿತೆಂದಗ್ರರರಿವರೆಂ-” (ಅಗ್ರರ್ = ಹಿರಿಯರು)
  ಬೆಳೆಯರ ಪಿರಿತನವ ಕಂಡು ಸುಯ್ದರ್ ಮುದಿಯರ್||

 6. ನಾಯಿಯನ್ನು ಮುಳುಗುವುದರಿಂದ ಕಾಪಾಡಿ…
  ಮುಳುಗುತ್ತಿರ್ಪ ಶ್ವಾನವ-
  ನೆಳೆಯುತ್ತುಸುಕಿಂ ಬದುಂಕಿಪಪ್ರಕ್ರಿಯೆಯೊಳ್|
  ಸೆಳೆತಕ್ಕೊಳಗೊಳ್ಳುತೆ ಸ-
  ತ್ತೆಳೆಯರ ಪಿರಿತನವ ಕಂಡು ಸುಯ್ದರ್ ಮುದಿಯರ್||

 7. ಅಳಿಯಲ್ ಬಿಡೆವೈ, ಪ್ರಾಣವ-
  ನುಳಿಸುಗೆ ನೀಡುವೆವು ವಿಪದವೆರಗಿರ್ಪದುವೇ| (ವಿಪದ=Accident)
  ಘಳಿಗೆಯೊಳಸ್ರಮನೆನುತೆಂ- (ಅಸ್ರ=ರಕ್ತ)
  ದೆಳೆಯರ ಪಿರಿತನವ ಕಂಡು ಸುಯ್ದರ್ ಮುದಿಯರ್||
  (ಅದುವೇ ಘಳಿಗೆಯೊಳ್ – ಆ ತತ್ಕ್ಷಣವೇ)

 8. Being a bird, the Flamingo can easily shake free of a lion’s attack. It can therefore afford to scoff at the latter!
  ಸಾವಿಗಮಾವುಮೀಚಣಮೆ ಈಡಿದೊ ಸಿಂಹವು ಮುಂದೊಳಿರ್ದಿರಲ್
  ಕಾವರುಮಾರುಮಿಲ್ಲವುಮೆನುತ್ತೆ ನಡುಂಗಿರೆ ಪ್ರಾಣಿಸಂಚಯಂ|
  ತೀವಿಹ ಬಾನಿಗೇರುತಲಿ ಸಿಂಹವ ಹಂಗಿಸುತಿರ್ದಿರಲ್ ಫ್ಲೆಮಿಂ-
  ಗೋವಿನ ರೋಷಕಂ ಬೆದರ್ದ ಸಿಂಗಮನೀಕ್ಷಿಪುದಲ್ತೆ ಸಂತತಂ||
  (ಬೆದರ್ದ = ವಿಹ್ವಲಗೊಂಡ)

  • ಉತ್ಪಲಮಾಲಾ ವೃತ್ತದ ಮಾತ್ರಾವಿನ್ಯಾಸ
   “ನಾನನ ನಾನನಾ ನನನ ನಾನನ ನಾನನ ನಾನನಾನನಾ” ಅಲ್ಲವೇ ?

   • ಹೌದು. ಸಮಸ್ಯಾಪಾದವನ್ನು ಸರಿಯಾಗಿಯೇ ಕೊಟ್ಟಿದ್ದಾರೆ – ಬೆದರ್ದ ಶಿಥಿಲದ್ವಿತ್ವ. ನಾನು ಇದನ್ನು ಗಮನಿಸಿಕೊಳ್ಳದೆ ಹೋದೆ. ತಿದ್ದಿರುವೆ.

 9. ಸೇವಿಪೆನೆಂದು ತಾಂ ಕರುಳಕಂದನ ಮೇಲೆರಗಲ್ ಮಹಾಮೃಗಂ
  ನೋವಿನೊಳತ್ತೊಡಂ ತರಳತಂತುಭನಾಗುತುಮಾಕುಲಾಹೃತಂ
  ದೇವಗಣಂಗಳೇ ತನುವಿನಿಂ ಸಿಡಿದಂತೆವೊಲಾಡಿದಾಗಳಾ
  ಗೋವಿನ ಕೋಪಕಂ ಬೆದರ್ದ ಸಿಂಗಮನೀಕ್ಷಿಪುದಲ್ತೆ ಸಂತತಂ

  ಕರುವಿನ ಮೇಲೆರಗಿದ ಸಿಂಹದ ಮೇಲೆ ಜೀವದ ಹಂಗು ತೊರೆದು ಕೋಪದಿಂದ ಹಸುವೆರಗಿದಾಗ

 10. ಕಾವನ ಜಾತ್ರೆಯೊಳ್ ಗಳಿಸೆ ತಾಂ ಧನಮಂ ಬರೆ ಸರ್ಕಸಾಡಿಪರ್
  ತೀವುತೆ ಡೇರೆಯೊಳ್ ಜನರ ಗುಂಪದು ಕೇಕೆಯೊಡಂ ಬೆರಂಗಿನಿಂ /
  ದೋವುತುಮಿರ್ಪುದೈ ದಡಿಯನಾಡಿಪನಾ ತರಬೇತುದಾರನಾ
  ಗೋವಿನ ರೋಷಕಂ ಬೆದರ್ದ ಸಿಂಗಮನೀಕ್ಷಿಪುದಲ್ತೆ ಸಂತತಂ//
  ಗೋ =ಮಾತು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)