Aug 062018
 

  14 Responses to “ಪದ್ಯಸಪ್ತಾಹ ೩೧೯: ಚಿತ್ರಕ್ಕೆ ಪದ್ಯ”

  1. ನಲಿವಿನೊಳ್ ನೆಲೆನಿಂತ ಯತಿಯೊಡಂ ತೊಟ್ಟು ತಾಂ
    ಪುಲಿಮೊಗಂ, ಕರಿಪಟ್ಟೆ ಕಾವಿಯಂ ಕಾಣ್
    ಒಲಿದೊಲಿಸಿಕೊಳುತಲುಂ ತಲೆದಡವುತಿಂತಿರಲ್
    ಕಲಿಮಹಿಮೆ ಗುರುಹಿರಿಮೆ ಮೆಟ್ಟಿ(ಚ್ಚಿ)ದುದೆ ಮೇಣ್ ?!

    ಹುಲಿವೇಷದ “ಕಲಿ”ಯ ಕಲ್ಪನೆ !

  2. ಓದಬೇಡಿ. ಲೆಖ್ಖಕ್ಕಿರಲಿ ಎಂದು ರಚಿಸಿದೆ; ಆಟಕ್ಕಿಲ್ಲ!
    “ಎನ್ನ ಒಡಹುಟ್ಟನುಜ ನೀನೈ
    ನಿನ್ನ ಕೊಂದೇನನ್ನು ಪಡೆವೆನು?”
    ಎನ್ನುತುಂ ಪುಲಿ ಮೂಸಿ ಮುಂಡವ
    (Kannada)ಕನ್ನುಡಿಯ ಪೇಳ್ದುದವನೊಳ್|

    • ಪದ್ಯವೇ ಪರಮಾತ್ಮನೆಂಬ ಹಾದಿರಂಪರ ಕಥೆ ಇದು !!

      • ’ಪದ್ಯವು ಪರಮಾತ್ಮನಿಗೇ ಪ್ರೀತಿ! ದೇವರೇ ಗತಿ!’ hhahhahha.

    • ಒಡಹುಟ್ಟನುಜ ಅರಿಸಮಾಸ ಅಲ್ವೆ?
      ಇವತ್ತಿನ ಲೌಕಿಕನ್ಯಾಯದ ಉಪನ್ಯಾಸದಿಂದ inspire ಆಗಿ “ಓದಿದ ಪಾಪ ಮೂದಲಿಸಿಯೇ ಪರಿಹಾರ” ಅಂತ ಗಾದೆ ಕಂಡುಹಿಡಿದಿದ್ದೇನೆ. ಮೊದಲ ಪ್ರಯೋಗ ನಿಮ್ಮ ಮೇಲೆಯೇ 😉

      • hhahhahha. ತುಂಬ ಚೆನ್ನಾಗಿದೆ ಹೊಸಗಾದೆ. ’ಒಡಹುಟ್ಟಕ್ಕ’ ಎಂಬುದು ಸಂಧಿಯಾದರೆ, ’ಒಡಹುಟ್ಟನುಜ’ವೂ ಸಂಧಿಯೇ.

  3. ನರಶಿರದೊಳ್ ಪುಟ್ಟಿದ ಸಾ-
    -ಸಿರ ಯೋಚನೆಗಳ್ ಕುರೂಪಿಶಾರ್ದೂಲದವೊಲ್
    ತ್ವರೆಯಿಂ ಬಳೆಯುತೆ ತಿಂದಿರ-
    -ಲರಿವಂ,ಜನರವಕೆ ದಾಸರಾಗುವರೇಕೈ?

    ಮನುಷ್ಯನ ತಲೆಯಲ್ಲಿ ಹುಟ್ಟಿದ ದುಷ್ಟಯೋಚನೆಗಳು(ವ್ಯಾಘ್ರರೂಪ ತಾಳಿ) ಅವನ ಬುದ್ಧಿಯನ್ನೇ ತಿನ್ನಲಾರಂಭಿಸಿದರೂ ಎಚ್ಚೆತ್ತುಕೊಳ್ಳದೆ ಅವಕ್ಕೇ ದಾಸನಾಗುತ್ತಾನೆ ಎನ್ನುವ ಪ್ರಯತ್ನ

  4. ಕುಟ್ಟಿಯಾಸೆಯ ಬೆಟ್ಟವನೆ ತಾ
    ನೆಟ್ಟಿ ತನುಮನವೆಲ್ಲ ಪರದಲಿ
    ಗಟ್ಟಿಯಾದನು ಗೂಢಮನಸಿನ ಕೋಣೆಕೋಣೆಯಲಿ
    ಸುಟ್ಟು ಭಯಗಳ ಬಟ್ಟೆ ತಪದ-
    ಲ್ಲಟ್ಟಿ ಬೂದಿಯ ದಿಟ್ಟತನದಲಿ
    ಕೊಟ್ಟ ತಲೆಯನೆ ಹುಲಿಯಬಾಯಿಗೆ ನಗುತ ಸನ್ಯಾಸಿ

    • ಪದ್ಯಪಾನಕ್ಕೆ ಸ್ವಾಗತ..ಪದ್ಯದ ಪದಪದ್ಧತಿ ಇಷ್ಟವಾಯ್ತು..ಭಾವ ಪೂರ್ತಿಯಾಗಿ ತಿಳಿಯಲಿಲ್ಲ..ದಯವಿಟ್ಟು ತಾತ್ಪರ್ಯವನ್ನೂ ತಿಳಿಸಿ

    • ಪದ್ಯಪಾನಕ್ಕೆ ಸ್ವಾಗತ . ಅನವದ್ಯ ಭಾಮಿನಿ ಷಟ್ಪದಿ !! ಅಭಿನಂದನೆಗಳು . ದಯವಿಟ್ಟು ನಿಮ್ಮ ಪರಿಚಯ ಮಾಡಿಕೊಡಿ . ಇದು ನಿಮ್ಮ ಮೊದಲ ಪ್ರಯತ್ನವೇ ? ನಿಮ್ಮಿಂದ ಮತ್ತೂ ಪದ್ಯಗಳ ನಿರೀಕ್ಷೆಯಲ್ಲಿ – ಉಷಾ

    • ಪದ್ಯಪಾನಕ್ಕೆ ಸ್ವಾಗತ. ’ಬಟ್ಟೆ ತಪದಲ್ಲಟ್ಟಿ ಬೂದಿಯ’ ಎಂಬುದನ್ನು ಹೊರತುಪಡಿಸಿ ಪದ್ಯವು ಸ್ಪಷ್ಟವಿದೆ. ತನುಮನವೆಲ್ಲ=ತನುಮನವು+ಎಲ್ಲ ಎಂದಾಗುತ್ತದೆ. ತನುಮನವನೆಲ್ಲ ಎಂಬುದು ತಮ್ಮ ಆಶಯವಲ್ಲವೆ? ಸರಿಪಡಿಸಬೇಕು.

  5. ಜ್ಞಾನವಿರದ‌ ವೇಷಧಾರಿ
    ಜನರೇ ಸಾಧುವೆನಿಸಿ ಹೀನ ಕಾರ್ಯವ ಗೈವ
    ದಿನದೊಳ್ ಜಾಣ ಹುಲಿಯದು
    ಜ್ಞಾನವಿಹುದೆ ಎಂದು ಮೂಸಿ ನೋಡಿತು ಶಿರವನು

    • ಕಲ್ಪನೆ ಚೆನ್ನಾಗಿದೆ. ಆದರೆ ಕಂದದ ಲಕ್ಷಣಗಳು ಪಾಲಿತವಾಗಿಲ್ಲ. ದಯವಿಟ್ಟು ಅವನ್ನು ಇಲ್ಲಿ ಗಮನಿಸಿಕೊಂಡು ನಿಮ್ಮ ಪದ್ಯವನ್ನು ಸವರಿಸಿ: http://padyapaana.com/?page_id=438 ಹಾಗೆಯೇ ಮಾತ್ರಾಛಂದಸ್ಸಿನ ಲಕ್ಷಣಗಳನ್ನೂ ನೋಡಿಕೊಳ್ಳಿ ಇದೇ ವ್ಯೋಮಪತ್ರದಲ್ಲಿ ಮೇಲೆ Learn Prosodyಯಲ್ಲಿ ಎಲ್ಲ ಇವೆ. ಪದ್ಯಪಾನಕ್ಕೆ ಸ್ವಾಗತ.

  6. ಖಂಡಿತ ಸರ್. ಧನ್ಯವಾದಗಳು. ನನಗೆ ಛಂದಸ್ಸಿನ ಸರಿಯಾನ ಜ್ಞಾನವಿಲ್ಲ, ಇದು ನನ್ನ ಮೊದಲ ಪ್ರಯತ್ನ. ನಿಮ್ಮೆಲ್ಲರ ಸಲಹೆಗಳ ಅವಶ್ಯವಿದೆ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)