Aug 272018
 

  8 Responses to “ಪದ್ಯಸಪ್ತಾಹ ೩೨೨: ಚಿತ್ರಕ್ಕೆ ಪದ್ಯ”

  1. ನೋಡು ಬಾ ನೀನಾರೆ, ಮನೆ ತಮ್ಮದೆಲ್ಲೆಂದು
    ನೋಡಲಿಲ್ಲವು ನಿನ್ನ ಹಿರಿಯರೇಕೋ|
    ಬೀಡ ನೀನೈನಾತಿತಾವಿನೊಳು ಮಾಡಾಗ
    ಈಡಾಗದೊಲದು ದೈವಾಮರ್ಷಕಂ||

  2. ಮಡುಗಟ್ಟಿರೆ ನೆಲೆ ನೆರೆಯಿಂ
    ಕೊಡವರ್ ಕೊಡಪಾನದೋಲ್ ಮುಳುಂಕಲ್, ಸಾಸಂ
    ಬಿಡುತುಂ ಸಾಸಂಬಡುದಂ
    ಗಡ ಕಾಣ್, “ಪಾತಾಳಗರಡಿ”ಯಂ ಪಿಡಿದೇರಲ್ !!

    ಕೊಡವರ ಸಾಹಸ ಗಾಥೆ !!

  3. ಕ್ಷಮೆಯೊಳ್ ಧರಿತ್ರಿಯೇ ಮೊದಲಪ್ಪಳಾದೊಡೇಂ
    ಕಮಲಾಕ್ಷಿ ರುಧಿರಾಕ್ಷಿಯಾಗದಿರಳೇಂ?
    ಕಮನೀಯಳಾಗಿರ್ಪ ಧರಣಿಯೊಡಲಂ ಬಗೆಯೆ
    ಧಮನಿಯಿಂ ನೆತ್ತರದು ಚಿಮ್ಮಿ ಬರದೇಂ?

    • ಬಹಳವೇ ಚೆನ್ನಾಗಿದೆ, ಆದರೆ ಚಿತ್ರದ ಮುಖ್ಯಾಂಶವೇ ಇಲ್ಲವಲ್ಲ!

      • ಧನ್ಯವಾದಗಳು_/\_..ಕೆಳಗಿನ ಪದ್ಯಕ್ಕೇ ಇದನ್ನೂ ಸೇರಿಸಿ ಬರೆದದ್ದು..ಆದರೆ ಎರಡೂ ಪದ್ಯಗಳು ಒಟ್ಟಿಗೆ ಹೊಂದಿಕೊಳ್ಳಲಾರವು ಅನಿಸಿದ್ದರಿಂದ ಇದನ್ನು ಬೇರೆಯಾಗಿ post ಮಾಡಿದೆ

  4. ತಿಮಿರಾಂಧಕಾರಮಂಬೊಲ್ವ ಜಲರಾಶಿಯಿಂ
    ದೆಮಗಿತ್ತು ರಕ್ಷೆಯಂ ಪೊರೆದರಾರೈ?
    ಯಮನ ಪಾಶಂ ಬರುವುದೆನುತೆ ಭಯದಿಂ ನಡುಗೆ
    ಸಮಯದೊಳೆ ಪೊರೆವ ಪಾಶಮನಿತ್ತರಾರ್?

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)