ಪದ್ಯಸಪ್ತಾಹ ೩೨೦: ಸಮಸ್ಯಾಪೂರಣ ಸಮಸ್ಯಾಪೂರಣ Add comments Aug 142018 ೧. ತನಗುದಿಸೆ ಸ್ತನಮೊಪ್ಪುಗುಂ ಗಡೀತಂ ೨. ನೀರಕ್ಷೀರವಿವೇಕದಿಂದುಳಿದುದಾ ಹಂಸಂ ಪ್ರಶಂಸಾಸ್ಪದಂ 32 Responses to “ಪದ್ಯಸಪ್ತಾಹ ೩೨೦: ಸಮಸ್ಯಾಪೂರಣ” Usha says: August 16, 2018 at 1:31 pm ನನೆಗುದಿಗೊಂಡದೊ ದಂಡದೇಹಕಂತುಂ ಹನುಮನವೋಲವನಾರುಕಟ್ಟಪೊಂದಲ್ ಅನವರತಂಗುಡೆ ಸಾಮುಸಾಯಸಂ ಮೇಣ್ ತನುಗುದಿಸೆ ಸ್ತನಮೊಪ್ಪುಗುಂ ಗಡೀತಂ !! ದಂಡದೇಹ = ಕಡ್ಡಿ / ಸಣಕಲು ದೇಹ ಆರುಕಟ್ಟು = ಸಿಕ್ಸ್ ಪ್ಯಾಕ್ (ಮೆನ್ಸ್ ಸಿಕ್ಸ್ ಪ್ಯಾಕ್ ಲುಕ್ಸ್ ಬಗೆಗಿನ ಪದ್ಯ !!) ಯಾವ ಛಂದಸ್ಸು ? ತಿಳಿಯಲಿಲ್ಲ Reply ಅನಂತಕೃಷ್ಣ says: August 16, 2018 at 4:41 pm ಪುಷ್ಪಿತಾಗ್ರ ಅನ್ಸುತ್ತೆ madam..http://padyapaana.com/?page_id=898 ನನನನನನನಾ ನನಾನನಾನಾ | ನನನನನಾನನ ನಾನನಾನನಾನಾ | Reply Usha says: August 16, 2018 at 5:50 pm ಧನ್ಯವಾದಗಳು ಅನಂತ, ಹಾಗಾದರೆ ಛಂದಸ್ಸು ತಪ್ಪಿದೆ , ತಿದ್ದಿದ ಪದ್ಯ : ನನೆಗುದಿಗೊಳೆ ದಂಡದೇಹಮೆಂದುಂ ಹನುಮನವೋಲವನಾರುಕಟ್ಟಪೊಂದಲ್ ಅನುಸರಿಸಿರೆ ಸಾಮುಸಾಯಸಂ ಮೇಣ್ ತನಗುದಿಸೆ ಸ್ತನಮೊಪ್ಪುಗುಂ ಗಡೀತಂ !! Reply ಹಾದಿರಂಪ says: August 16, 2018 at 6:15 pm ಸಖತ್ ಕಲ್ಪನೆ. ಹೀಗಲ್ದೆ ಇವ್ರ್ ಕೊಟ್ಟಿರೋಹಾಗೇ ಹ್ಯಾಗ್ ಮಾಡೋದ್ರೀ? Reply Usha says: August 17, 2018 at 6:24 pm ಧನ್ಯವಾದಗಳು ಪ್ರಸಾದ್ ಸರ್ , ಇನ್ನೂ ಐದು ರೀತಿಯಲ್ಲಿ ಸಾಧ್ಯವಿದೆ ?!! Reply ಮಂಜ says: August 16, 2018 at 9:24 pm ಮನದೊಳು ಬಳೆಯಲ್ಕೆ ಗಂಡಿಗಂ ಪೆ ಣ್ತನಮನೆ ಕೊಳ್ವ ವಿಚಿತ್ರಮೆಂಬ ಭಾವಂ ತನುವನೆ ಬದಲಿಪ್ಪ ತಂತ್ರದಿಂದಂ ತನಗುದಿಸೆ ಸ್ತನಮೊಪ್ಪುವಂ ಗಡೀತಂ // Reply ಹಾದಿರಂಪ says: August 16, 2018 at 10:07 pm ಇದೂ ಸಖತ್ ಕಲ್ಪನೆ. ಉಷಾರವರಿಗಿಂತ ತುಸು ಹೆಚ್ಚಿಗೆ ಧೈರ್ಯವಹಿಸಿದ್ದೀಯೆ; ಗಂಡಾಯ್ತು, ನಸ್ತ್ರೀನಪುಂಸಕವಾಯ್ತು. ಇನ್ನು ಪೂರ್ಣಧೈರ್ಯವನ್ನು ಯಾರು ತಾಳುತ್ತಾರೆಯೋ ನೋಡೋಣ. Reply Usha says: August 17, 2018 at 6:28 pm ಸೊಗಸಾದ ಪೂರಣ ಮಂಜು , ಇದು ಲಿಂಗ ಪರಿವರ್ತನೆ ಬಗ್ಗೆ ಅಲ್ಲವೇ? Reply ಅನಂತಕೃಷ್ಣ says: August 16, 2018 at 11:23 pm ತುಂಬ ಚನ್ನಾಗಿದೆ 🙂 Reply ಮಂಜ says: August 17, 2018 at 6:36 pm ಮೆಚ್ಚುಗೆಗೆ ಎಲ್ಲರಿಗೂ ಧನ್ಯವಾದಗಳು. ಹೌದು ಉಷಾ ಮೇಡಂ, ಇದು transgenderಗಳ ಬಗ್ಗೆಯೇ Reply ಹಾದಿರಂಪ says: August 18, 2018 at 5:44 pm L, G, Bಗಳ ಬಗೆಗೂ ಒಂದೊಂದು ಪದ್ಯವು ಬರಲಿ! Reply ಮಂಜ says: August 22, 2018 at 10:26 pm ಬ್ಯಾಡಾ ಸಾರ್ ಹಾದಿರಂಪ says: August 16, 2018 at 10:05 pm ನಾರೀಸಂಘಶರೆಂತೊ ತಾವೆನಗಮೀವರ್ ಗಟ್ಟಿಪಾಲಂ ಗಡಾ ಆರೋ ನೂರರೊಳೊರ್ವರಾ ಪಯದೆ ನೀರಂ ಸೇರಿಸುತ್ತಿಕ್ಕುವರ್| ಭೂರಿಕ್ಷೀರವದಿಂದು ಪ್ರಾಪ್ತಮಿರೆ ಕಷ್ಟಂ ಸ್ವಂತಕೇಕೆನ್ನುತುಂ ನೀರಕ್ಷೀರವಿವೇಕದಿಂದುಳಿದುದಾ ಹಂಸಂ, ಪ್ರಶಂಸಾಸ್ಪದಂ|| (ನಾರೀಸಂಘಶ=Many a woman; ..ದಿಂದುಳಿದುದು=Stayed away from) Reply Usha says: August 17, 2018 at 6:34 pm “ನೀರಕ್ಷೀರ…” ಸಮಸ್ಯೆಯಂ ಕಳೆದುದೀ ಹಂಸಂ (ರಂಪಂ) ಪ್ರಶಂಸಾಸ್ಪದಂ !! Reply ಹಾದಿರಂಪ says: August 17, 2018 at 10:18 pm _/\_ Reply ಹಾದಿರಂಪ says: August 16, 2018 at 10:37 pm ಜನನಗುಡುತೆ ಕಂದಗೊಬ್ಬಗಂ ತಾಯ್ “ತನಗುದಿಸೆ ಸ್ತನಮೊಪ್ಪುವಂ ಗಡೀತಂ| ಪೊನಲ ಸವಿದು ವಜ್ರದೇಹಿಯಾದಾ- ಗನಿಬರು ಮೆಚ್ಚುವರಲ್ತೆ”ಲೆನ್ನುತೆಂಬಳ್|| (ಉದಿಸೆ = ಹಾಲನ್ನು ಉಕ್ಕಿಸೆ) Reply Usha says: August 18, 2018 at 7:55 am ಇದು ಪೂರ್ಣ ಧೈರ್ಯದ ಪೂರಣ !! ಅಭಿನಂದನೆಗಳು ಪ್ರಸಾದ್ ಸರ್ . Reply ಹಾದಿರಂಪ says: August 18, 2018 at 4:37 pm _/\_ Reply ಅನಂತಕೃಷ್ಣ says: August 16, 2018 at 11:19 pm ತನನನತನತೋಂ ತಧೀಂಕಿಟತಧೀಂ ಎನುತಲೆ ಯಕ್ಷರ ನಾಟ್ಯವಾಡೆ ಮುನ್ನಂ ವನಿತೆಯರುಡುಪಂ ತೊಡಲ್ಕದಾಗಳ್ ತನಗುದಿಸೆ ಸ್ತನಮೊಪ್ಪುವಂ ಗಡೀತಂ Reply ಹಾದಿರಂಪ says: August 17, 2018 at 12:15 pm ಖನಖನಬಳೆತೊಟ್ಟೊಡೇನನೆನ್ನಂ ಮಿನುಗಿರೆ ಕ್ಷೌರದೆ ಕೆನ್ನೆಯೇನನೆನ್ನಂ! ತನಗುದಿಸಿರೆ ವೇಣಿಯೇನನೆನ್ನಂ ತನಗುದಿಸೆ ಸ್ತನಮೊಪ್ಪಮೇನು ಮಾತ್ರಂ?? Reply Usha says: August 18, 2018 at 7:57 am ಇದು “ನಸ್ರೀ .. ” ಪೂರಣ !! Reply ಅನಂತಕೃಷ್ಣ says: August 18, 2018 at 7:32 pm ಖನಮೆನುತಿಹ ಕಂಕಣಂಗಳಂ ಮೇಣ್, ಮಿನುಗಿದ ಕ್ಷೌರದ ಕೆನ್ನೆಗೆಂಪಿನೊಳ್ಪಂ ತನಗುದಿಸಿದ ವೇಣಿಯಂದದೊಟ್ಟೆಂ ದೆನಿಸಿದುದೆಲ್ಲಮನೊಪ್ಪುವಂ ಗಡೀತಂ 🙂 Reply Usha says: August 17, 2018 at 7:05 pm ಚೆನ್ನಾಗಿದೆ ಅನಂತ . ಇದೇ ಕಲ್ಪನೆಯ ಪದ್ಯ ( ನಿನ್ನ ಪದ್ಯ ನೋಡುವುದಕ್ಕೆ ಮೊದಲು ರಚಿಸಿದ್ದು !!) ತನು ನಯಮಿಹ ಲಜ್ಜೆಗಾಯ್ವವಂ ತಾಂ ಬಿನದಿಸೆ ಕಾಣ್ ಪರಸಂಗವೊಂದರೊಳ್ ಪೆ- ಣ್ತನವ ನಟಿಸೆ ವೇಷ ತೊಟ್ಟುದಾಗಲ್ ತನಗುದಿಸೆ ಸ್ತನಮೊಪ್ಪುಗುಂ ಗಡೀತಂ !! ಕೋಮಲ ಶರೀರದ , ನಾಚಿಕೆ ಸ್ವಭಾವದವ ಸ್ತ್ರೀ ವೇಷ ಧರಿಸಿದ ಪ್ರಸಂಗ (~ ಪರ ಸಂಗ ) Reply ಅನಂತಕೃಷ್ಣ says: August 18, 2018 at 7:35 pm ಚನ್ನಾಗಿದೆ ಮೇಡಂ..ಒಪ್ಪುಗುಂ ಅನ್ನುವುದಕ್ಕಿಂತ ಒಪ್ಪುವಂ ಅಂದ್ರೇನೇ “ಗಡೀತಂ” ಶಬ್ದದೊಡನೆ ಹೊಂದಿಕೊಳ್ಳುತದೆ ಅನ್ಸುತ್ತೆ Reply ಮಂಜ says: August 17, 2018 at 6:35 pm ಮನಸಿಜಶರಕಂ ಮಹೇಶ್ವರಂಗಂ ಮನದೊಳು ಮೂಡಿರಲಳ್ತಿಯೆಂಬ ಭಾವಂ ತನುವಿನೊಳರೆಯಂ ಭವಾನಿಗಿತ್ತಂ; ತನಗುದಿಸೆ ಸ್ತನಮೊಪ್ಪುವಂ ಗಡೀತಂ// ಹೀಗೂ ಮಾಡಬಹುದು ಹಾದಿರಂಪರೇ @ your comment on first post Reply ಹಾದಿರಂಪ says: August 17, 2018 at 10:20 pm clap clap ಚೆನ್ನಾಗಿದೆ Reply Usha says: August 18, 2018 at 12:58 pm “ಅರ್ಧನಾರೀಶ್ವರ ” ಕಲ್ಪನೆಯ ಪೂರಣ ಸೊಗಸಾಗಿದೆ !! ಮುನುಕುಲಮನೆ ಕಾಯ್ವ ಕಾಯಕಕ್ಕಂ ಗನತರ ತಾಂ ಶಿವ , ಶಕ್ತಿ ಭಾವದಿಂದಲ್ ತನುವೊಡೆದರೆಪೆಣ್ಣರೂವುವೊಂದಲ್ ತನಗುದಿಸೆ ಸ್ತನಮೊಪ್ಪುಗುಂ ಗಡೀತಂ !! Reply ಮಂಜ says: August 22, 2018 at 10:43 pm ಧನ್ಯವಾದಗಳು. ಪದ್ಯ ಚೆನ್ನಾಗಿದೆ ಮೇಡಂ… ಶಕ್ತಿಭಾವದಿಂದಂ ಆಗಬೇಕು.. ಅದು ಘನತರವೇ? Reply ಅನಂತಕೃಷ್ಣ says: August 18, 2018 at 7:40 pm ಇದು ಹಿಂದಿನದ್ದಕ್ಕಿಂತಲೂ ಚನ್ನಾಗಿದೆ..ನಿನ್ನ ಪದ್ಯದಿಂದಲೇ ಪ್ರೇರಿತನಾಗಿ ಭಸ್ಮಾಸುರ ಮೋಹಿನಿಯರ ಬಗೆಗೆ ಅವಸರದಲ್ಲಿ ಬರೆದ, ಅನ್ವಯಕ್ಲೇಶವಿರುವ ಪದ್ಯ ಅನಿಮಿಷರೊರೆಯಲ್ಕುಪೇಂದ್ರನಾಗಳ್ ವನಿತೆಯ ಪಾಂಗಿನಿನೆತ್ತೆ ಮೋಹರೂಪಂ ಕುಣಿಯುತೆ ತೊಡೆಯಲ್ ಸುರಾರಿಯಂ ತಾಂ ತನಗುದಿಸೆಸ್ತನಮೊಪ್ಪುವಂ ಗಡೀತಂ Reply ಮಂಜ says: August 22, 2018 at 10:28 pm ಎಲ್ಲರಿಗೂ ಧನ್ಯವಾದಗಳು. super verse @ಅನಂತಣ್ಣ..ಸುರಾರಿಯನೇ ಆಗಬೇಕು, Reply ಅನಂತಕೃಷ್ಣ says: August 25, 2018 at 9:41 pm ಧನ್ಯವಾದಗಳು_/\_.. ತೇಪೆ ಹಾಕಿದ್ದೇನೆ. Reply Usha says: August 19, 2018 at 11:59 am ಜನಜನಿತಮದಿಂತು ಲೋಕದುಜ್ಜೀ- ವನ ಪರಿಯೊಳ್ ಭುವಿ-ಬಾನ ಸಾಮರಸ್ಯo ! ತನಿಗೆದರದೊ ಬೆಟ್ಟದೋಲ್ ಮುಗಿಲ್ಗಳ್ , ತನಗುದಿಸೆ ಸ್ತನಮೊಪ್ಪುವಂ ಗಡೀತಂ !! ಬೆಟ್ಟಗಳು ಭೂಮಿಯ ಸ್ತನಗಳು – ಎಂಬ ಕವಿಸಮಯ ( ಲಲಿತಾ ಸಹಸ್ರನಾಮದ ” ಕಾಮೇಶ್ವರ ಪ್ರೇಮರತ್ನಮಣಿಪ್ರತಿಪಣಸ್ತನೀ ” ಸಾಲಿನಿಂದ ಪ್ರೇರಿತವಾದ ಪದ್ಯ !!) Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ನನೆಗುದಿಗೊಂಡದೊ ದಂಡದೇಹಕಂತುಂ
ಹನುಮನವೋಲವನಾರುಕಟ್ಟಪೊಂದಲ್
ಅನವರತಂಗುಡೆ ಸಾಮುಸಾಯಸಂ ಮೇಣ್
ತನುಗುದಿಸೆ ಸ್ತನಮೊಪ್ಪುಗುಂ ಗಡೀತಂ !!
ದಂಡದೇಹ = ಕಡ್ಡಿ / ಸಣಕಲು ದೇಹ
ಆರುಕಟ್ಟು = ಸಿಕ್ಸ್ ಪ್ಯಾಕ್
(ಮೆನ್ಸ್ ಸಿಕ್ಸ್ ಪ್ಯಾಕ್ ಲುಕ್ಸ್ ಬಗೆಗಿನ ಪದ್ಯ !!)
ಯಾವ ಛಂದಸ್ಸು ? ತಿಳಿಯಲಿಲ್ಲ
ಪುಷ್ಪಿತಾಗ್ರ ಅನ್ಸುತ್ತೆ madam..http://padyapaana.com/?page_id=898
ನನನನನನನಾ ನನಾನನಾನಾ |
ನನನನನಾನನ ನಾನನಾನನಾನಾ |
ಧನ್ಯವಾದಗಳು ಅನಂತ, ಹಾಗಾದರೆ ಛಂದಸ್ಸು ತಪ್ಪಿದೆ , ತಿದ್ದಿದ ಪದ್ಯ :
ನನೆಗುದಿಗೊಳೆ ದಂಡದೇಹಮೆಂದುಂ
ಹನುಮನವೋಲವನಾರುಕಟ್ಟಪೊಂದಲ್
ಅನುಸರಿಸಿರೆ ಸಾಮುಸಾಯಸಂ ಮೇಣ್
ತನಗುದಿಸೆ ಸ್ತನಮೊಪ್ಪುಗುಂ ಗಡೀತಂ !!
ಸಖತ್ ಕಲ್ಪನೆ. ಹೀಗಲ್ದೆ ಇವ್ರ್ ಕೊಟ್ಟಿರೋಹಾಗೇ ಹ್ಯಾಗ್ ಮಾಡೋದ್ರೀ?
ಧನ್ಯವಾದಗಳು ಪ್ರಸಾದ್ ಸರ್ , ಇನ್ನೂ ಐದು ರೀತಿಯಲ್ಲಿ ಸಾಧ್ಯವಿದೆ ?!!
ಮನದೊಳು ಬಳೆಯಲ್ಕೆ ಗಂಡಿಗಂ ಪೆ
ಣ್ತನಮನೆ ಕೊಳ್ವ ವಿಚಿತ್ರಮೆಂಬ ಭಾವಂ
ತನುವನೆ ಬದಲಿಪ್ಪ ತಂತ್ರದಿಂದಂ
ತನಗುದಿಸೆ ಸ್ತನಮೊಪ್ಪುವಂ ಗಡೀತಂ //
ಇದೂ ಸಖತ್ ಕಲ್ಪನೆ. ಉಷಾರವರಿಗಿಂತ ತುಸು ಹೆಚ್ಚಿಗೆ ಧೈರ್ಯವಹಿಸಿದ್ದೀಯೆ; ಗಂಡಾಯ್ತು, ನಸ್ತ್ರೀನಪುಂಸಕವಾಯ್ತು. ಇನ್ನು ಪೂರ್ಣಧೈರ್ಯವನ್ನು ಯಾರು ತಾಳುತ್ತಾರೆಯೋ ನೋಡೋಣ.
ಸೊಗಸಾದ ಪೂರಣ ಮಂಜು , ಇದು ಲಿಂಗ ಪರಿವರ್ತನೆ ಬಗ್ಗೆ ಅಲ್ಲವೇ?
ತುಂಬ ಚನ್ನಾಗಿದೆ 🙂
ಮೆಚ್ಚುಗೆಗೆ ಎಲ್ಲರಿಗೂ ಧನ್ಯವಾದಗಳು. ಹೌದು ಉಷಾ ಮೇಡಂ, ಇದು transgenderಗಳ ಬಗ್ಗೆಯೇ
L, G, Bಗಳ ಬಗೆಗೂ ಒಂದೊಂದು ಪದ್ಯವು ಬರಲಿ!
ಬ್ಯಾಡಾ ಸಾರ್
ನಾರೀಸಂಘಶರೆಂತೊ ತಾವೆನಗಮೀವರ್ ಗಟ್ಟಿಪಾಲಂ ಗಡಾ
ಆರೋ ನೂರರೊಳೊರ್ವರಾ ಪಯದೆ ನೀರಂ ಸೇರಿಸುತ್ತಿಕ್ಕುವರ್|
ಭೂರಿಕ್ಷೀರವದಿಂದು ಪ್ರಾಪ್ತಮಿರೆ ಕಷ್ಟಂ ಸ್ವಂತಕೇಕೆನ್ನುತುಂ
ನೀರಕ್ಷೀರವಿವೇಕದಿಂದುಳಿದುದಾ ಹಂಸಂ, ಪ್ರಶಂಸಾಸ್ಪದಂ||
(ನಾರೀಸಂಘಶ=Many a woman; ..ದಿಂದುಳಿದುದು=Stayed away from)
“ನೀರಕ್ಷೀರ…” ಸಮಸ್ಯೆಯಂ ಕಳೆದುದೀ ಹಂಸಂ (ರಂಪಂ) ಪ್ರಶಂಸಾಸ್ಪದಂ !!
_/\_
ಜನನಗುಡುತೆ ಕಂದಗೊಬ್ಬಗಂ ತಾಯ್
“ತನಗುದಿಸೆ ಸ್ತನಮೊಪ್ಪುವಂ ಗಡೀತಂ|
ಪೊನಲ ಸವಿದು ವಜ್ರದೇಹಿಯಾದಾ-
ಗನಿಬರು ಮೆಚ್ಚುವರಲ್ತೆ”ಲೆನ್ನುತೆಂಬಳ್||
(ಉದಿಸೆ = ಹಾಲನ್ನು ಉಕ್ಕಿಸೆ)
ಇದು ಪೂರ್ಣ ಧೈರ್ಯದ ಪೂರಣ !! ಅಭಿನಂದನೆಗಳು ಪ್ರಸಾದ್ ಸರ್ .
_/\_
ತನನನತನತೋಂ ತಧೀಂಕಿಟತಧೀಂ
ಎನುತಲೆ ಯಕ್ಷರ ನಾಟ್ಯವಾಡೆ ಮುನ್ನಂ
ವನಿತೆಯರುಡುಪಂ ತೊಡಲ್ಕದಾಗಳ್
ತನಗುದಿಸೆ ಸ್ತನಮೊಪ್ಪುವಂ ಗಡೀತಂ
ಖನಖನಬಳೆತೊಟ್ಟೊಡೇನನೆನ್ನಂ
ಮಿನುಗಿರೆ ಕ್ಷೌರದೆ ಕೆನ್ನೆಯೇನನೆನ್ನಂ!
ತನಗುದಿಸಿರೆ ವೇಣಿಯೇನನೆನ್ನಂ
ತನಗುದಿಸೆ ಸ್ತನಮೊಪ್ಪಮೇನು ಮಾತ್ರಂ??
ಇದು “ನಸ್ರೀ .. ” ಪೂರಣ !!
ಖನಮೆನುತಿಹ ಕಂಕಣಂಗಳಂ ಮೇಣ್,
ಮಿನುಗಿದ ಕ್ಷೌರದ ಕೆನ್ನೆಗೆಂಪಿನೊಳ್ಪಂ
ತನಗುದಿಸಿದ ವೇಣಿಯಂದದೊಟ್ಟೆಂ
ದೆನಿಸಿದುದೆಲ್ಲಮನೊಪ್ಪುವಂ ಗಡೀತಂ 🙂
ಚೆನ್ನಾಗಿದೆ ಅನಂತ . ಇದೇ ಕಲ್ಪನೆಯ ಪದ್ಯ ( ನಿನ್ನ ಪದ್ಯ ನೋಡುವುದಕ್ಕೆ ಮೊದಲು ರಚಿಸಿದ್ದು !!)
ತನು ನಯಮಿಹ ಲಜ್ಜೆಗಾಯ್ವವಂ ತಾಂ
ಬಿನದಿಸೆ ಕಾಣ್ ಪರಸಂಗವೊಂದರೊಳ್ ಪೆ-
ಣ್ತನವ ನಟಿಸೆ ವೇಷ ತೊಟ್ಟುದಾಗಲ್
ತನಗುದಿಸೆ ಸ್ತನಮೊಪ್ಪುಗುಂ ಗಡೀತಂ !!
ಕೋಮಲ ಶರೀರದ , ನಾಚಿಕೆ ಸ್ವಭಾವದವ ಸ್ತ್ರೀ ವೇಷ ಧರಿಸಿದ ಪ್ರಸಂಗ (~ ಪರ ಸಂಗ )
ಚನ್ನಾಗಿದೆ ಮೇಡಂ..ಒಪ್ಪುಗುಂ ಅನ್ನುವುದಕ್ಕಿಂತ ಒಪ್ಪುವಂ ಅಂದ್ರೇನೇ “ಗಡೀತಂ” ಶಬ್ದದೊಡನೆ ಹೊಂದಿಕೊಳ್ಳುತದೆ ಅನ್ಸುತ್ತೆ
ಮನಸಿಜಶರಕಂ ಮಹೇಶ್ವರಂಗಂ
ಮನದೊಳು ಮೂಡಿರಲಳ್ತಿಯೆಂಬ ಭಾವಂ
ತನುವಿನೊಳರೆಯಂ ಭವಾನಿಗಿತ್ತಂ;
ತನಗುದಿಸೆ ಸ್ತನಮೊಪ್ಪುವಂ ಗಡೀತಂ//
ಹೀಗೂ ಮಾಡಬಹುದು ಹಾದಿರಂಪರೇ @ your comment on first post
clap clap ಚೆನ್ನಾಗಿದೆ
“ಅರ್ಧನಾರೀಶ್ವರ ” ಕಲ್ಪನೆಯ ಪೂರಣ ಸೊಗಸಾಗಿದೆ !!
ಮುನುಕುಲಮನೆ ಕಾಯ್ವ ಕಾಯಕಕ್ಕಂ
ಗನತರ ತಾಂ ಶಿವ , ಶಕ್ತಿ ಭಾವದಿಂದಲ್
ತನುವೊಡೆದರೆಪೆಣ್ಣರೂವುವೊಂದಲ್
ತನಗುದಿಸೆ ಸ್ತನಮೊಪ್ಪುಗುಂ ಗಡೀತಂ !!
ಧನ್ಯವಾದಗಳು. ಪದ್ಯ ಚೆನ್ನಾಗಿದೆ ಮೇಡಂ… ಶಕ್ತಿಭಾವದಿಂದಂ ಆಗಬೇಕು.. ಅದು ಘನತರವೇ?
ಇದು ಹಿಂದಿನದ್ದಕ್ಕಿಂತಲೂ ಚನ್ನಾಗಿದೆ..ನಿನ್ನ ಪದ್ಯದಿಂದಲೇ ಪ್ರೇರಿತನಾಗಿ ಭಸ್ಮಾಸುರ ಮೋಹಿನಿಯರ ಬಗೆಗೆ ಅವಸರದಲ್ಲಿ ಬರೆದ, ಅನ್ವಯಕ್ಲೇಶವಿರುವ ಪದ್ಯ
ಅನಿಮಿಷರೊರೆಯಲ್ಕುಪೇಂದ್ರನಾಗಳ್
ವನಿತೆಯ ಪಾಂಗಿನಿನೆತ್ತೆ ಮೋಹರೂಪಂ
ಕುಣಿಯುತೆ ತೊಡೆಯಲ್ ಸುರಾರಿಯಂ ತಾಂ
ತನಗುದಿಸೆಸ್ತನಮೊಪ್ಪುವಂ ಗಡೀತಂ
ಎಲ್ಲರಿಗೂ ಧನ್ಯವಾದಗಳು. super verse @ಅನಂತಣ್ಣ..ಸುರಾರಿಯನೇ ಆಗಬೇಕು,
ಧನ್ಯವಾದಗಳು_/\_.. ತೇಪೆ ಹಾಕಿದ್ದೇನೆ.
ಜನಜನಿತಮದಿಂತು ಲೋಕದುಜ್ಜೀ-
ವನ ಪರಿಯೊಳ್ ಭುವಿ-ಬಾನ ಸಾಮರಸ್ಯo !
ತನಿಗೆದರದೊ ಬೆಟ್ಟದೋಲ್ ಮುಗಿಲ್ಗಳ್ ,
ತನಗುದಿಸೆ ಸ್ತನಮೊಪ್ಪುವಂ ಗಡೀತಂ !!
ಬೆಟ್ಟಗಳು ಭೂಮಿಯ ಸ್ತನಗಳು – ಎಂಬ ಕವಿಸಮಯ
( ಲಲಿತಾ ಸಹಸ್ರನಾಮದ ” ಕಾಮೇಶ್ವರ ಪ್ರೇಮರತ್ನಮಣಿಪ್ರತಿಪಣಸ್ತನೀ ” ಸಾಲಿನಿಂದ ಪ್ರೇರಿತವಾದ ಪದ್ಯ !!)