Aug 142018
 

೧. ತನಗುದಿಸೆ ಸ್ತನಮೊಪ್ಪುಗುಂ ಗಡೀತಂ

೨. ನೀರಕ್ಷೀರವಿವೇಕದಿಂದುಳಿದುದಾ ಹಂಸಂ ಪ್ರಶಂಸಾಸ್ಪದಂ

  32 Responses to “ಪದ್ಯಸಪ್ತಾಹ ೩೨೦: ಸಮಸ್ಯಾಪೂರಣ”

  1. ನನೆಗುದಿಗೊಂಡದೊ ದಂಡದೇಹಕಂತುಂ
    ಹನುಮನವೋಲವನಾರುಕಟ್ಟಪೊಂದಲ್
    ಅನವರತಂಗುಡೆ ಸಾಮುಸಾಯಸಂ ಮೇಣ್
    ತನುಗುದಿಸೆ ಸ್ತನಮೊಪ್ಪುಗುಂ ಗಡೀತಂ !!

    ದಂಡದೇಹ = ಕಡ್ಡಿ / ಸಣಕಲು ದೇಹ
    ಆರುಕಟ್ಟು = ಸಿಕ್ಸ್ ಪ್ಯಾಕ್

    (ಮೆನ್ಸ್ ಸಿಕ್ಸ್ ಪ್ಯಾಕ್ ಲುಕ್ಸ್ ಬಗೆಗಿನ ಪದ್ಯ !!)
    ಯಾವ ಛಂದಸ್ಸು ? ತಿಳಿಯಲಿಲ್ಲ

    • ಪುಷ್ಪಿತಾಗ್ರ ಅನ್ಸುತ್ತೆ madam..http://padyapaana.com/?page_id=898
      ನನನನನನನಾ ನನಾನನಾನಾ |

      ನನನನನಾನನ ನಾನನಾನನಾನಾ |

    • ಧನ್ಯವಾದಗಳು ಅನಂತ, ಹಾಗಾದರೆ ಛಂದಸ್ಸು ತಪ್ಪಿದೆ , ತಿದ್ದಿದ ಪದ್ಯ :

      ನನೆಗುದಿಗೊಳೆ ದಂಡದೇಹಮೆಂದುಂ
      ಹನುಮನವೋಲವನಾರುಕಟ್ಟಪೊಂದಲ್
      ಅನುಸರಿಸಿರೆ ಸಾಮುಸಾಯಸಂ ಮೇಣ್
      ತನಗುದಿಸೆ ಸ್ತನಮೊಪ್ಪುಗುಂ ಗಡೀತಂ !!

    • ಸಖತ್ ಕಲ್ಪನೆ. ಹೀಗಲ್ದೆ ಇವ್ರ್ ಕೊಟ್ಟಿರೋಹಾಗೇ ಹ್ಯಾಗ್ ಮಾಡೋದ್ರೀ?

      • ಧನ್ಯವಾದಗಳು ಪ್ರಸಾದ್ ಸರ್ , ಇನ್ನೂ ಐದು ರೀತಿಯಲ್ಲಿ ಸಾಧ್ಯವಿದೆ ?!!

  2. ಮನದೊಳು ಬಳೆಯಲ್ಕೆ ಗಂಡಿಗಂ ಪೆ
    ಣ್ತನಮನೆ ಕೊಳ್ವ ವಿಚಿತ್ರಮೆಂಬ ಭಾವಂ
    ತನುವನೆ ಬದಲಿಪ್ಪ ತಂತ್ರದಿಂದಂ
    ತನಗುದಿಸೆ ಸ್ತನಮೊಪ್ಪುವಂ ಗಡೀತಂ //

    • ಇದೂ ಸಖತ್ ಕಲ್ಪನೆ. ಉಷಾರವರಿಗಿಂತ ತುಸು ಹೆಚ್ಚಿಗೆ ಧೈರ್ಯವಹಿಸಿದ್ದೀಯೆ; ಗಂಡಾಯ್ತು, ನಸ್ತ್ರೀನಪುಂಸಕವಾಯ್ತು. ಇನ್ನು ಪೂರ್ಣಧೈರ್ಯವನ್ನು ಯಾರು ತಾಳುತ್ತಾರೆಯೋ ನೋಡೋಣ.

      • ಸೊಗಸಾದ ಪೂರಣ ಮಂಜು , ಇದು ಲಿಂಗ ಪರಿವರ್ತನೆ ಬಗ್ಗೆ ಅಲ್ಲವೇ?

    • ತುಂಬ ಚನ್ನಾಗಿದೆ 🙂

  3. ನಾರೀಸಂಘಶರೆಂತೊ ತಾವೆನಗಮೀವರ್ ಗಟ್ಟಿಪಾಲಂ ಗಡಾ
    ಆರೋ ನೂರರೊಳೊರ್ವರಾ ಪಯದೆ ನೀರಂ ಸೇರಿಸುತ್ತಿಕ್ಕುವರ್|
    ಭೂರಿಕ್ಷೀರವದಿಂದು ಪ್ರಾಪ್ತಮಿರೆ ಕಷ್ಟಂ ಸ್ವಂತಕೇಕೆನ್ನುತುಂ
    ನೀರಕ್ಷೀರವಿವೇಕದಿಂದುಳಿದುದಾ ಹಂಸಂ, ಪ್ರಶಂಸಾಸ್ಪದಂ||
    (ನಾರೀಸಂಘಶ=Many a woman; ..ದಿಂದುಳಿದುದು=Stayed away from)

  4. ಜನನಗುಡುತೆ ಕಂದಗೊಬ್ಬಗಂ ತಾಯ್
    “ತನಗುದಿಸೆ ಸ್ತನಮೊಪ್ಪುವಂ ಗಡೀತಂ|
    ಪೊನಲ ಸವಿದು ವಜ್ರದೇಹಿಯಾದಾ-
    ಗನಿಬರು ಮೆಚ್ಚುವರಲ್ತೆ”ಲೆನ್ನುತೆಂಬಳ್||
    (ಉದಿಸೆ = ಹಾಲನ್ನು ಉಕ್ಕಿಸೆ)

  5. ತನನನತನತೋಂ ತಧೀಂಕಿಟತಧೀಂ
    ಎನುತಲೆ ಯಕ್ಷರ ನಾಟ್ಯವಾಡೆ ಮುನ್ನಂ
    ವನಿತೆಯರುಡುಪಂ ತೊಡಲ್ಕದಾಗಳ್
    ತನಗುದಿಸೆ ಸ್ತನಮೊಪ್ಪುವಂ ಗಡೀತಂ

    • ಖನಖನಬಳೆತೊಟ್ಟೊಡೇನನೆನ್ನಂ
      ಮಿನುಗಿರೆ ಕ್ಷೌರದೆ ಕೆನ್ನೆಯೇನನೆನ್ನಂ!
      ತನಗುದಿಸಿರೆ ವೇಣಿಯೇನನೆನ್ನಂ
      ತನಗುದಿಸೆ ಸ್ತನಮೊಪ್ಪಮೇನು ಮಾತ್ರಂ??

      • ಇದು “ನಸ್ರೀ .. ” ಪೂರಣ !!

      • ಖನಮೆನುತಿಹ ಕಂಕಣಂಗಳಂ ಮೇಣ್,
        ಮಿನುಗಿದ ಕ್ಷೌರದ ಕೆನ್ನೆಗೆಂಪಿನೊಳ್ಪಂ
        ತನಗುದಿಸಿದ ವೇಣಿಯಂದದೊಟ್ಟೆಂ
        ದೆನಿಸಿದುದೆಲ್ಲಮನೊಪ್ಪುವಂ ಗಡೀತಂ 🙂

    • ಚೆನ್ನಾಗಿದೆ ಅನಂತ . ಇದೇ ಕಲ್ಪನೆಯ ಪದ್ಯ ( ನಿನ್ನ ಪದ್ಯ ನೋಡುವುದಕ್ಕೆ ಮೊದಲು ರಚಿಸಿದ್ದು !!)

      ತನು ನಯಮಿಹ ಲಜ್ಜೆಗಾಯ್ವವಂ ತಾಂ
      ಬಿನದಿಸೆ ಕಾಣ್ ಪರಸಂಗವೊಂದರೊಳ್ ಪೆ-
      ಣ್ತನವ ನಟಿಸೆ ವೇಷ ತೊಟ್ಟುದಾಗಲ್
      ತನಗುದಿಸೆ ಸ್ತನಮೊಪ್ಪುಗುಂ ಗಡೀತಂ !!

      ಕೋಮಲ ಶರೀರದ , ನಾಚಿಕೆ ಸ್ವಭಾವದವ ಸ್ತ್ರೀ ವೇಷ ಧರಿಸಿದ ಪ್ರಸಂಗ (~ ಪರ ಸಂಗ )

      • ಚನ್ನಾಗಿದೆ ಮೇಡಂ..ಒಪ್ಪುಗುಂ ಅನ್ನುವುದಕ್ಕಿಂತ ಒಪ್ಪುವಂ ಅಂದ್ರೇನೇ “ಗಡೀತಂ” ಶಬ್ದದೊಡನೆ ಹೊಂದಿಕೊಳ್ಳುತದೆ ಅನ್ಸುತ್ತೆ

  6. ಮನಸಿಜಶರಕಂ ಮಹೇಶ್ವರಂಗಂ
    ಮನದೊಳು ಮೂಡಿರಲಳ್ತಿಯೆಂಬ ಭಾವಂ
    ತನುವಿನೊಳರೆಯಂ ಭವಾನಿಗಿತ್ತಂ;
    ತನಗುದಿಸೆ ಸ್ತನಮೊಪ್ಪುವಂ ಗಡೀತಂ//
    ಹೀಗೂ ಮಾಡಬಹುದು ಹಾದಿರಂಪರೇ @ your comment on first post

    • clap clap ಚೆನ್ನಾಗಿದೆ

    • “ಅರ್ಧನಾರೀಶ್ವರ ” ಕಲ್ಪನೆಯ ಪೂರಣ ಸೊಗಸಾಗಿದೆ !!

      ಮುನುಕುಲಮನೆ ಕಾಯ್ವ ಕಾಯಕಕ್ಕಂ
      ಗನತರ ತಾಂ ಶಿವ , ಶಕ್ತಿ ಭಾವದಿಂದಲ್
      ತನುವೊಡೆದರೆಪೆಣ್ಣರೂವುವೊಂದಲ್
      ತನಗುದಿಸೆ ಸ್ತನಮೊಪ್ಪುಗುಂ ಗಡೀತಂ !!

      • ಧನ್ಯವಾದಗಳು. ಪದ್ಯ ಚೆನ್ನಾಗಿದೆ ಮೇಡಂ… ಶಕ್ತಿಭಾವದಿಂದಂ ಆಗಬೇಕು.. ಅದು ಘನತರವೇ?

    • ಇದು ಹಿಂದಿನದ್ದಕ್ಕಿಂತಲೂ ಚನ್ನಾಗಿದೆ..ನಿನ್ನ ಪದ್ಯದಿಂದಲೇ ಪ್ರೇರಿತನಾಗಿ ಭಸ್ಮಾಸುರ ಮೋಹಿನಿಯರ ಬಗೆಗೆ ಅವಸರದಲ್ಲಿ ಬರೆದ, ಅನ್ವಯಕ್ಲೇಶವಿರುವ ಪದ್ಯ

      ಅನಿಮಿಷರೊರೆಯಲ್ಕುಪೇಂದ್ರನಾಗಳ್
      ವನಿತೆಯ ಪಾಂಗಿನಿನೆತ್ತೆ ಮೋಹರೂಪಂ
      ಕುಣಿಯುತೆ ತೊಡೆಯಲ್ ಸುರಾರಿಯಂ ತಾಂ
      ತನಗುದಿಸೆಸ್ತನಮೊಪ್ಪುವಂ ಗಡೀತಂ

      • ಎಲ್ಲರಿಗೂ ಧನ್ಯವಾದಗಳು. super verse @ಅನಂತಣ್ಣ..ಸುರಾರಿಯನೇ ಆಗಬೇಕು,

  7. ಜನಜನಿತಮದಿಂತು ಲೋಕದುಜ್ಜೀ-
    ವನ ಪರಿಯೊಳ್ ಭುವಿ-ಬಾನ ಸಾಮರಸ್ಯo !
    ತನಿಗೆದರದೊ ಬೆಟ್ಟದೋಲ್ ಮುಗಿಲ್ಗಳ್ ,
    ತನಗುದಿಸೆ ಸ್ತನಮೊಪ್ಪುವಂ ಗಡೀತಂ !!

    ಬೆಟ್ಟಗಳು ಭೂಮಿಯ ಸ್ತನಗಳು – ಎಂಬ ಕವಿಸಮಯ
    ( ಲಲಿತಾ ಸಹಸ್ರನಾಮದ ” ಕಾಮೇಶ್ವರ ಪ್ರೇಮರತ್ನಮಣಿಪ್ರತಿಪಣಸ್ತನೀ ” ಸಾಲಿನಿಂದ ಪ್ರೇರಿತವಾದ ಪದ್ಯ !!)

Leave a Reply to ಮಂಜ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)