Oct 072018
 

  5 Responses to “ಪದ್ಯಸಪ್ತಾಹ ೩೨೮: ಚಿತ್ರಕ್ಕೆ ಪದ್ಯ”

  1. ಕರಮಧುಕರಂಗಳಿಂದೀ-
    -ವರಮುಖಮಂ ಮುತ್ತಲೆಂದು ಬಂದಿರಲೀಗಳ್
    ಸರಸತೆಯಿಂದರಳುತೆ ಕೇ-
    -ಸರಮಂ ಮೇಲೆತ್ತಿ ನೀಳ್ದ ಸೊಬಗೇನೆಂಬೆಂ

    • ಆಹಾ! ಚಿತ್ರದಂತೆಯೇ ತುಂಬ ಸೊಗಸಾದ ಕಲ್ಪನೆ ಹಾಗು ಪದ್ಯ!!

  2. ಅಡಗಿಹುದು ಗರ್ಭಮದು ಬದ್ಧಕೋನಾಸನದೆ
    ತೊಡೆ ಸಪ್ತವರ್ಣಮಯ ತಾಯತನಕಂ
    ನಡೆಯೆ ಮಾಸಾನುಮಾಸದ ಕರನ್ಯಾಸದೊಳು
    ಎಡದೊಂಟಿ ಹಸ್ತದಿನೆ ಸುಪ್ತ ಬಲವುಂ !!

    ಕರನ್ಯಾಸದೆ ನವಮಾಸ “ಗರ್ಭ”ದ ವರ್ಣನೆ !!

    • ಅರ್ಥವಾಗಲಿಲ್ಲ 🙂 ಕಠೋಪನಿಷತ್ತಿನ ಯಾವುದೋ ಒಂದು ಯಾಗದ ವಿವರಣೆಯ ಮಂತ್ರ ಓದಿದಂತಾಯಿತು!

  3. ನೀಲಕಂಠ, ಇದು ಉ(ಪನಿ)ಷತ್ ವಾಕ್ಯ ಅಷ್ಟೇ !!
    ಚಿತ್ರದಲ್ಲಿನ ನೃತ್ಯಭಂಗಿಗೆ ಗರ್ಭಾವಸ್ಥೆಯನ್ನು ಹೋಲಿಸಿ ಬರೆದ ಪದ್ಯ. ವರ್ಣಮಯ ಕರಗಳ ” ಜೋಡಣೆ ಕ್ರಮ” ಮತ್ತು ಅವುಗಳ “ಸಂಖ್ಯೆ” ಆಧಾರಿತ ಚೌಪದಿ . ತಿಂಗಳಿಗೆ ಒಬ್ಬರಂತೆ ಒಂಬತ್ತು ತಾಯಂದಿರ (ನವಮಾತೃಕೆಯರ) ಒಂಬತ್ತು ಜೊತೆ ಕರಗಳ ವಿನ್ಯಾಸ – ಮಧ್ಯದಲ್ಲಿ ಮೊದಲತಿಂಗಳ ಗರ್ಭ ಸ್ಥಾಪನೆ ಒಂದು ಜೊತೆ ಕರದೆ ಸಂದ ಕೋನಾಕಾರದಲ್ಲಿ – ಸುತ್ತಲೂ ಏಳು ತಿಂಗಳ (ಮಾಸಾನುಮಾಸದ) ಆರೈಕೆ – ಏಳು ಜೊತೆ ಕರಗಳಲ್ಲಿ , ಒಂಬತ್ತನೇ ತಿಂಗಳ ಪೂರ್ಣತೆಗೆ ಎಡದಲ್ಲಿರುವ “ಒಂಟಿ” ಹಸ್ತದ ಜೊತೆಗೆ ಸುಪ್ತ ಬಲಹಸ್ತವಿರುವುದು ಎಂಬ ಆಶಯ !!
    ಪದ ಜೋಡಣೆಯಲ್ಲಿ ಫಲಿಸಲಿಲ್ಲವೇನೋ ?!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)