When the elders are no more and the nexgen is left to fend for itself…
ಪೆತ್ತರೀವರೆಗಿದ್ದರೆನಗಾಶ್ರಯವನಿತ್ತು
ಮೆತ್ತೆವೊಲ್ ದ್ವೈಧವೆಲ್ಲವ ಪೀರುತುಂ|
ತುತ್ತಾದೆವೈ ವಿಯೋಗಕ್ಕೆಂದು ರೋದಿಪುದೊ
ತತ್ತರಿಪ್ಪುದೊ ನೆಲೆಯು ಕಳಚಿತೆಂದು||
ಮೂರನೆಯ ಪಾದದಲ್ಲಿ ಗಣವಿಭಜನೆಯು ಶ್ರುತ್ಯಹಿತವಾಗಿದೆ. ‘ಪೊಕ್ಕುವುದು ಪದ್ಯವನು ಪೊಸೆವರ ಹೃದಯತಾಣವನು?’ ಎಂದರೆ ಸರಿಯಾದೀತು. ಅಲ್ಲದೆ, ಪೊಕ್ಕು ಮತ್ತೆ ಲಗ್ಗೆ ಶಬ್ದಗಳು ಸಮಾನಾರ್ಥಕಗಳು; ಪುನರುಕ್ತಿ.
೧. ಶ್ರುತಿ ಹಿತವಾಗುವಂತೆ ಮಾಡೋಣ . ಆದರೆ ‘ಪೊಕ್ಕುವುದು ‘ ಎಂಬ ಪ್ರಯೋಗ ಸರಿ ಅಲ್ಲವೆಂದು ನನ್ನ ಅನಿಸಿಕೆ ಪೊಗುವುದು / ಪುಗುವುದು ಎನ್ನಬಹುದು . ಅದು ಪ್ರಾಸಕ್ಕೆ ಹೊಂದಿಕೆಯಾಗದು
೨. ಪೊಗು = ಪ್ರವೇಶಿಸು , ಲಗ್ಗೆ =ಆಕ್ರಮಣ ಮಾಡುವುದು .(ಕೊಟ್ಟ ವಸ್ತು-ವಿಷಯ ಪ್ರವೇಶಿದಾಗ , ಹೃದಯದಲ್ಲಿ ಹಲವು ತರದ ಭಾವನೆಗಳು ಲಗ್ಗೆ ಇಡುತ್ತವೆ ಎಂಬರ್ಥದಲ್ಲಿ ಬಳಸಿರುವುದು. ಉದಾ ; ಕೋಡುಬಳೆಗೂ , ಚಕ್ಕುಲಿಗೂ ಹಲವು ರೀತಿಯಲ್ಲಿ ಜಗಳ ಮಾಡಿಸಬಹುದು .ಯಾವುದೋ ಒಂದನ್ನು ಪೋಣಿಸಿ ಒಂದು ಪದ್ಯವನ್ನು ರಚಿಸುವುದಷ್ಟೆ.
ಧನ್ಯವಾದಗಳು
ಬಕ್ಕ ತಲೆಯವೊಲಿರುವ ನಿನ್ನೀ
ಚಿಕ್ಕ ದೇಹಕಿದುಚಿತವೆನುವೆನೆ ?
ಪೊಕ್ಕು ನೀಮ್ ಕವಿ ಹೃದಯ ತಾಣದೊಳವತರಿಪುದಿಂತು ?
ಬೊಕ್ಕು ಬಾಯಿಯ ಚಪಲಕೆಟುಕದ
ಸೊಕ್ಕಿ ಮುಳ್ಳಿನ ದೇಹವೊಗ್ಗಿದ
ಪಕ್ಕೆಲುಬನೇ ಪೋಲ್ವ ನಿನಗೀ ತಾಣ ತಕ್ಕುದೆ ? ಪೋ !
ಚಕ್ಕುಲಿಯು ಕೋಡುಬಳೆಗೆ ಹೇಳುವುದು – ವನಮಯೂರ/ ಇಂದುನಂದನ||
ಉಪ್ಪು-ಹುಳಿ-ಖಾರಗಳನೆಲ್ಲವನು ಪೊಂದು-
ತ್ತೊಪ್ಪೆನಿಸೆ ಸಾರು-ಹುಳಿ-ತೊವ್ವೆಗಳ ಬಲ್ಪೇಂ?
ಚಪ್ಪರಿಸುವಂತಿರುವೆ ನೀನು ಮೆಣಸಿಂದೈ (Chillies)
ಬೆಪ್ಪೆ, ಬರಿಯುಪ್ಪಿನೊಳೆ ರಂಜಿಸುವೆ ನಾನೈ||
ಚಕ್ಕುಲಿಯು ಕೋಡುಬಳೆಗೆ ಹೇಳುವುದು
ವಸಂತತಿಲಕ|| ವೈರಾಗ್ಯಕುಂ ಮಿತಿಯುಮೊಂದಿಹುದಲ್ತೆ ನೋಡಲ್
ನಾರಿಂದೆ ನೈದಿರುವ ಚೀರವದೊಂದು ಬೇಕೈ|
(ಉಪ್ಪು-ಹುಳಿ-ಖಾರಗಳ ಪೈಕಿ) ದೂರಂ ಗಡಿಟ್ಟೆ ಪುಳಿಯೊಂದನು ಮಾತ್ರ ನೀನೈ
ಖಾರಂ ಗಡೇಕೆನುತೆ ಉಪ್ಪನು ಮಾತ್ರಮಾಂತೆಂ (ನಾಂ)||
When the elders are no more and the nexgen is left to fend for itself…
ಪೆತ್ತರೀವರೆಗಿದ್ದರೆನಗಾಶ್ರಯವನಿತ್ತು
ಮೆತ್ತೆವೊಲ್ ದ್ವೈಧವೆಲ್ಲವ ಪೀರುತುಂ|
ತುತ್ತಾದೆವೈ ವಿಯೋಗಕ್ಕೆಂದು ರೋದಿಪುದೊ
ತತ್ತರಿಪ್ಪುದೊ ನೆಲೆಯು ಕಳಚಿತೆಂದು||
Yellow journalism ಅಲ್ಲ, ಪೀತಪತ್ರಿಕೆ ಮಾತ್ರ
ಬಡತನದ ಮನೆಗಳೊಳು Huggiesಅದೆಲ್ಲಿಯದು
ನಿಡಿದು ಅಂಗಿಯದೊಂದೆ ಚಿಣ್ಣನಿಂಗೆ|
ತೊಡೆಯೆ ಕಕ್ಕವನವನ ದೈನಿಕದ ಕಾಗದದೆ
ಪಿಡಿದುದೈ ಪಾಂಡುವಾ(Jaundice) ಪತ್ರಿಕೆಯನು||
ಆ ಮಾತೆಗೊಂದು ವಿಜ್ಞಾಪನೆ:
ಕೊಂಡೆ ನೀನೆಂತೊ ಆ ಪತ್ರಿಕೆಯ ಚೂರೊಂದ
ಕುಂಡೆಯನ್ನೊರೆಸೆ ನಿನ್ನಯ ಕಂದನ|
ಭಂಡಸಂಪಾದಕೀಯದ ಪುಟವ ಕೊಳ್ಳೆ ತಾಯ್
ಬೋಂಡದವನಿಂಗಿರಲಿ ಮಿಕ್ಕ ಪುಟಗಳ್||
ಚಕ್ಕುಲಿ :-
ಬಕ್ಕ ತಲೆಯವೊಲಿರುವ ನಿನ್ನೀ
ಚಿಕ್ಕ ದೇಹಕಿದುಚಿತವೆನುವೆನೆ ?
ಪೊಕ್ಕು ಪದ್ಯ ಬರೆವವರ ಹೃದಯತಾಣಕಿದು ಲಗ್ಗೆ ?
ಕೋಡುಬಳೆ :-
ಬೊಕ್ಕು ಬಾಯಿಯ ಚಪಲಕೆಟುಕದ
ಸೊಕ್ಕಿ ಮುಳ್ಳಿನ ದೇಹವೊಗ್ಗಿದ
ಪಕ್ಕೆಲುಬನೇ ಪೋಲ್ವ ನಿನಗೀ ತಾಣ ತಕ್ಕುದೇ ? ಪೋ !
ಮೂರನೆಯ ಪಾದದಲ್ಲಿ ಗಣವಿಭಜನೆಯು ಶ್ರುತ್ಯಹಿತವಾಗಿದೆ. ‘ಪೊಕ್ಕುವುದು ಪದ್ಯವನು ಪೊಸೆವರ ಹೃದಯತಾಣವನು?’ ಎಂದರೆ ಸರಿಯಾದೀತು. ಅಲ್ಲದೆ, ಪೊಕ್ಕು ಮತ್ತೆ ಲಗ್ಗೆ ಶಬ್ದಗಳು ಸಮಾನಾರ್ಥಕಗಳು; ಪುನರುಕ್ತಿ.
೧. ಶ್ರುತಿ ಹಿತವಾಗುವಂತೆ ಮಾಡೋಣ . ಆದರೆ ‘ಪೊಕ್ಕುವುದು ‘ ಎಂಬ ಪ್ರಯೋಗ ಸರಿ ಅಲ್ಲವೆಂದು ನನ್ನ ಅನಿಸಿಕೆ ಪೊಗುವುದು / ಪುಗುವುದು ಎನ್ನಬಹುದು . ಅದು ಪ್ರಾಸಕ್ಕೆ ಹೊಂದಿಕೆಯಾಗದು
೨. ಪೊಗು = ಪ್ರವೇಶಿಸು , ಲಗ್ಗೆ =ಆಕ್ರಮಣ ಮಾಡುವುದು .(ಕೊಟ್ಟ ವಸ್ತು-ವಿಷಯ ಪ್ರವೇಶಿದಾಗ , ಹೃದಯದಲ್ಲಿ ಹಲವು ತರದ ಭಾವನೆಗಳು ಲಗ್ಗೆ ಇಡುತ್ತವೆ ಎಂಬರ್ಥದಲ್ಲಿ ಬಳಸಿರುವುದು. ಉದಾ ; ಕೋಡುಬಳೆಗೂ , ಚಕ್ಕುಲಿಗೂ ಹಲವು ರೀತಿಯಲ್ಲಿ ಜಗಳ ಮಾಡಿಸಬಹುದು .ಯಾವುದೋ ಒಂದನ್ನು ಪೋಣಿಸಿ ಒಂದು ಪದ್ಯವನ್ನು ರಚಿಸುವುದಷ್ಟೆ.
ಧನ್ಯವಾದಗಳು
ಬಕ್ಕ ತಲೆಯವೊಲಿರುವ ನಿನ್ನೀ
ಚಿಕ್ಕ ದೇಹಕಿದುಚಿತವೆನುವೆನೆ ?
ಪೊಕ್ಕು ನೀಮ್ ಕವಿ ಹೃದಯ ತಾಣದೊಳವತರಿಪುದಿಂತು ?
ಬೊಕ್ಕು ಬಾಯಿಯ ಚಪಲಕೆಟುಕದ
ಸೊಕ್ಕಿ ಮುಳ್ಳಿನ ದೇಹವೊಗ್ಗಿದ
ಪಕ್ಕೆಲುಬನೇ ಪೋಲ್ವ ನಿನಗೀ ತಾಣ ತಕ್ಕುದೆ ? ಪೋ !
‘ಪೊಕ್ಕುವುದು ‘ ಎಂಬ ಪ್ರಯೋಗ ಸರಿಯಲ್ಲದಿರಬಹುದು. _/\_
”ತಕ್ಕುದೇ ?”– ಎಂಬಲ್ಲಿ ದೀರ್ಘವಿಲ್ಲ . ತಪ್ಪಾಗಿದೆ .ಕ್ಷಮಿಸಿ
ಚಕ್ಕುಲಿ ಹೀಗೆಂದಿತು !!
ಏನೆಂಬೆನೆಮ್ಮಗೀ ಸ-
ಮ್ಮಾನಂ ಜಗದವಳಿಜವಳಿ ಸೋದರರೆಮಗಂ |
ನಾನಗ್ರಜನನುಜನೆ ಬಿಗು-
ಮಾನಂ ಬಿಡು ಬಗೆಯದೆನ್ನ ವೃತ್ತಾಂತಂ ಕಾಣ್ !!
ಚಕ್ಕುಲಿ_ಕೋಡುಬಳೆ (ಎಲ್ಲರ ಮನೆಮನದ ನೆಚ್ಚಿನ ಅವಳಿಜವಳಿ)
ಮೊದಲು ಕರಿವ ಚಕ್ಕುಲಿ – ಅಣ್ಣ / ನಂತರದ ಕೋಡುಬಳೆ – ತಮ್ಮ
ತಮ್ಮನ ದೇನು ಕೋಡು ?!
Should be ಎನ್ನ ವೃತ್ತಾಂ’ತದ’ ಬಗೆಯನ್ನು ಕಾಣ್; not ವೃತ್ತಾಂತವು/ವೃತ್ತಾಂತಂ. ’ಬಿಗುಮಾನಂ ಬಿಡು, ಬಗೆಯನೆನ್ನ ವೃತ್ತಾಂತದ ಕಾಣ್’ ಎಂದು ಸವರಬಹುದು
ಧನ್ಯವಾದಗಳು ಪ್ರಸಾದ್ ಸರ್,
“ನನ್ನ ಬಗೆಗಿನ ವಿವರಣೆಯನ್ನು ಕಾಣು / ಭಾವಿಸದೆ ನನ್ನ ವೃತ್ತ+ಅಂತವನ್ನು ಕಾಣು” ಎಂದಾಗಬೇಕಿದೆ . ವಿಭಕ್ತಿಪಲ್ಲಟ ಒಪ್ಪದೇ!?
ಬಿರಿಯಿತೆ ಭಾರತಾಂಬೆಯುದರಂ ಸೆಲೆ ಸೀಳಿದರಂದು ಕತ್ತಲೊಳ್
ಸೊರಗಿದಳಾಕೆ ಕಂಪಿಸುತೆ ತಾಯ್ನೆಲಮೊಪ್ಪದ ಭಂಡಪುತ್ರರಿಂ|
ಮರೆತಳೆ ಮೌನಮೊಪ್ಪಿದಳೆ ಸೋಲ್ತಳೆ ಕೋಮಲೆ ತಾನ್ ಬಳಲ್ದಳೇ-
ನಿರೆ ನೆಲೆಗಾಣದಂತೆ ಗಡ! ಕಾದಳೆ ಮೇಣವತಾರಿಯಾಗಮಮ್||