Feb 182019
ವಸಂತತಿಲಕದ ಸಮಸ್ಯೆಯನ್ನು ಪರಿಹರಿಸಿ:
ಮಾಗಿರ್ಪ ಪಣ್ಣೆ ಪಸುಗಾಯೆನಿಸಿರ್ಪುದಲ್ತೇ
ಕಂದ ಪದ್ಯದ ಸಮಸ್ಯೆಯನ್ನು ಪರಿಹರಿಸಿ:
ಅಶ್ವಂ ಸುಳಿಯದಿರೆ ಸುಗ್ಗಿ ವೆಗ್ಗಳಮೆಂತೈ
ವಸಂತತಿಲಕದ ಸಮಸ್ಯೆಯನ್ನು ಪರಿಹರಿಸಿ:
ಮಾಗಿರ್ಪ ಪಣ್ಣೆ ಪಸುಗಾಯೆನಿಸಿರ್ಪುದಲ್ತೇ
ಕಂದ ಪದ್ಯದ ಸಮಸ್ಯೆಯನ್ನು ಪರಿಹರಿಸಿ:
ಅಶ್ವಂ ಸುಳಿಯದಿರೆ ಸುಗ್ಗಿ ವೆಗ್ಗಳಮೆಂತೈ
ವಿಶ್ವಾಸದೆ ಗುರು ನುಡಿದನಿ-
ದೈಶ್ವರ್ಯಮದೊಲಿದ ರೀತಿಯಾದಿಪ್ರಾಸ೦ I
ನಿಶ್ವಸಿಸುತೆ; ”ಚರಣದೊಳೊ೦-
ದಶ್ವ೦ ಸುಳಿಯದಿರೆ ಸುಗ್ಗಿ ವೆಗ್ಗಳಮೆಂತೈ?” II
ಕನ್ನಡದ ಭಾಷಾಶಿಕ್ಷಕರು ಛ೦ದಸ್ಸಿನ ಬಗ್ಗೆ ಪಾಠ ಮಾಡುತ್ತಾ ಹಯಪ್ರಾಸವನ್ನು ತಿಳಿಸುವಾಗ — ”ಹಯಪ್ರಾಸವಿಲ್ಲದೆ ಕನ್ನಡದ ಕಾವ್ಯ (ಅಧ್ಯಾಹಾರ )ಕ್ಕೆ ಸುಗ್ಗಿಯ ಸಂಭ್ರಮವೆಲ್ಲಿ ?” ಎಂದು ನುಡಿದರಂತೆ
Chennagide Bhalare…
ಒಪ್ಪುವೆ. ಈ ಪದ್ಯವು ಹಯಪ್ರಾಸದಲ್ಲಿದೆ ಎಂದು ಭಾಗ್ಯಲಕ್ಷ್ಮಿಯವರು ಹೇಳಿಲ್ಲ ಸರಿಯೆ, ಆದರೆ ’ಅಶ್ವ’ ಎಂಬುದು ಶರಭಪ್ರಾಸದಲ್ಲಿರುವುದು ಸೋಜಿಗ!
ಅಶ್ವ=ಸೂರ್ಯನ ಏಳು ಕುದುರೆಗಳು/ಕಿರಣಗಳು
ವಿಶ್ವದೆ ’ಸೂತೇ (ಇತಿ) ಸೂರ್ಯಂ’:
ಆಶ್ವಸ್ತರ್ ನಾಂಗಳಿಂತುಮಲ್ಲಮೆ ಪೇಳೈ|
(Munificent) ದಾಶ್ವಂ ಕೃಷಿಕರ್ಗೆಲ್ಲ-
ರ್ಗಶ್ವಂ ಸುಳಿಯದಿರೆ ಸುಗ್ಗಿ ವೆಗ್ಗಳಮೆಂತೈ||
Idea super!
_/|\_
ಈಗಾಯ್ತುಮೀ ಮಗುವಿಗಂ ನವವರ್ಷಗಳ್ ಕೇಳ್
ಪೋಗುತ್ತುಮಿನ್ನಿನಿತುವರ್ಷವು ಮಾಗುವಳ್ ತಾಂ|
ಆಗೀಕೆಯೆನ್ನಿಸುವಳೈ ಪಿರಿಯಳ್, ಯವಿಷ್ಠ್ಯಽ-
ಮಾಗಿರ್ಪ ಪಣ್ಣೆ ಪಸುಗಾಯೆನಿಸಿರ್ಪುದಲ್ತೇ||
(ಯವಿಷ್ಠ್ಯ=youngest. Pardon me for using a superlative degree adjective)
ಏಗಿರ್ದರೆಂತೊ ತಿಳಿಯೆವ್ ಕವಿ ರಾಗಣೇಶರ್
ವಾಗರ್ಥತರ್ಕದಿಶೆಯೊಳ್ ರಸದೆಲ್ಲ ಮಾರ್ಗಂ
ಸಾಗಿರ್ಪರಿಂಗೆ ಸಮರೇಂ ಕವಿಪಟ್ಟಭದ್ರರ್
ಮಾಗಿರ್ಪ ಪಣ್ಣೆ ಪಸುಗಾಯೆನಿಸಿರ್ಪುದಲ್ತೇ||
ಗಣೇಶರ ಎದುರಲ್ಲಿ ಕವಿಪಟ್ಟಭದ್ರರ್ ಸಮರೇ? ಇವರ ಪಕ್ವತೆಯೆದುರಿಗೆ ಹಣ್ಚೇ ಪಸುಗಾಯಿ. ಇನ್ನು ಉಳಿದವರೆಷ್ಟು – ಎನ್ನುವ ಭಾವ ತರಲು ಪ್ರಯತ್ನ.
*ವಾಗರ್ಥತರ್ಕದಿಶೆಯೊಳ್ ರಸಮಾರ್ಗದೆಂದುಂ. (೨ನೇ ಸಾಲು ಬದಲಿಸಬೇಕು)
ಪೋಗಿರ್ಪ ಪಲ್ಲು ಬರಿಬೊಚ್ಚನೆ ಬಾಯ್ ತೊದಲ್ದುಂ
ಬಾಗಿರ್ಪ ಬೆನ್ನು ತಡಕಾಡುತೆ ಕಾಲೆಡರ್ದುಂ
ಆಗಿರ್ಪನಿಂತು ಮುದಿಪೊಳ್ ಶಿಶುವೋಲ್ ಮನುಷ್ಯಂ
ಮಾಗಿರ್ಪ ಪಣ್ಣೆ ಪಸುಗಾಯೆನಿಸಿರ್ಪುದಲ್ತೇ !!
ವೃದ್ಧಾಪ್ಯದಲ್ಲಿ ಮನುಜ ಮತ್ತೆ ಎಳೆಮಗುವಿನಂತಾಗುವ ಪ್ರಕ್ರಿಯೆಯ ಪೂರಣ
ನಶ್ವರಮದೆಂದೆನಿಸುದೀ
ವಿಶ್ವದೆ ಸಂಭ್ರಮದ ಸಾಮರಸ್ಯಂ ನಿಚ್ಚಂ |
ವಿಶ್ವಸನದ ಕುಣಿತಕೆ ಕೀ-
ಲಶ್ವಂ ಸುಳಿಯದಿರೆ ಸುಗ್ಗಿ ವೆಗ್ಗಳಮೆಂತೈ ||
*ಕೀಲ್+ಅಶ್ವಂ = ಕೀಲಶ್ವಂ (ಕೀಲುಕುದುರೆ)
ಸುಗ್ಗಿಯ ಸಂಭ್ರಮದಲ್ಲಿ “ಕೀಲುಕುದುರೆ”ಕುಣಿತ ತರುವ ಪ್ರಯತ್ನ !!
( ಕೀಲು/ಅಶ್ವ – ಎಂದಾಗ ಸುಗ್ಗಿಯ ಕಾಲದ ಬಂಡಿಯಕೀಲು/ಕಣಜ ಎಲ್ಲ ನೆನಪಾದುವು !!)
ಕಲ್ಪನೆ ಚೆನ್ನಾಗಿದೆ. ಆದರೆ ಕೀಲಶ್ವ ಎಂದು ಕೀಲಕವನ್ನು ಬಳಸಲಾಗದು. ಅರಿಸಮಾಸವಾಗುತ್ತದೆ.
ಧನ್ಯವಾದಗಳು ಮಂಜು. “ಕೀಲ್” ಸಂಸ್ಕೃತ ಪದ ಅಲ್ಲವೇ?
ಕೀಲ + ಅಶ್ವ = “ಕೀಲಾಶ್ವ” ಕೀಲಕ ಸರಿಯಾಗುದೇ?
ಕೀಲ್ ಎಂಬುದು ಕನ್ನಡದ ಶಬ್ದವೇ. ಕೀಲಾಶ್ವ ಎಂದು ಮಾಡಿದರೂ ಸಮಾಸ ಹಾಗೆಯೇ ಉಳಿದಿರುತ್ತದಲ್ಲ. ಈ ಕೆಳಗೆ ನೀವು ತಿದ್ದಿರುವುದು ಸರಿಹೋಗುತ್ತದೆ.
“ಕೀಲ” – ಸಂಸ್ಕೃತ ಪದವೆಂದಿದೆ(ನಿಘಂಟಿನಲ್ಲಿ)
ಓಹ್! ಹೌದೇ!? ಹಾಗಿದ್ದರೆ ಸರಿ
ಚೆನ್ನಾಗಿದೆ.. ವಿಶ್ವಸಿಪ ಕೀಲಿನ ಕುಣಿತದಶ್ವಂ … (ವಿಶ್ವಸಿಪ = ಸ್ನೇಹ ತೋರುವ) ಎಂದು ಮಾಡಬಹುದೇನೊ?
ಧನ್ಯವಾದಗಳು ರವೀಂದ್ರ ,
ತಿದ್ದಿದ ಪದ್ಯ :
ನಶ್ವರಮದೆಂದೆನಿಸುದೀ
ವಿಶ್ವದೆ ಸಂಭ್ರಮದ ಸಾಮರಸ್ಯಂ ನಿಚ್ಚಂ |
ವಿಶ್ವಸಿಪ ಕೀಲದ ಕುಣಿತ-
ದಶ್ವಂ ಸುಳಿಯದಿರೆ ಸುಗ್ಗಿ ವೆಗ್ಗಳಮೆಂತೈ ||
ವಿಶ್ವಾಧಾರಂ ಚೈತ್ರಕೆ
ಶಾಶ್ವತಭೂಷಣದದೇವನತಿಶಯತಾಪಂ
ವಿಶ್ವಸನೀಯನೆನಲ್ ಹರಿ
ದಶ್ವಂ ಸುಳಿಯದಿರೆ ಸುಗ್ಗಿ ವೆಗ್ಗಳಮೆಂತಯ್//
ಹರಿದಶ್ವ-ಸೂರ್ಯ
ಹಾದಿರಂಪರ ಪರಿಹಾರದಂತೆಯೇ ಇದೆ. ಸೂರ್ಯನಿರದೇ ಬೇಸಗೆಯಾಗುವುದಿಲ್ಲವಷ್ಟೇ.
ಮಂಜುನಾಥಂ ಸುಳಿಯದಿರೆ ಸುಗ್ಗಿ ವೆಗ್ಗಳಮೆಂತಯ್ 🙂 ಚೆನ್ನಾಗಿದೆ!
ಯಾಕೆ ಸೂರ್ಯ ಸುಳಿಯುವುದಿಲ್ಲ ಎಂದು ತಿಳಿಸಿದರೆ, ಇನ್ನೂ ಔಚಿತ್ಯಪೂರ್ಣವಾಗುತ್ತದೆ. ಉದಾ:ಅವಿವೇಕದ ತಮಸ್ಸು ಆದರಣೀಯವಾದಾಗ ಜ್ಞಾನಸೂರ್ಯ ಸುಳಿಯದಾಗ ಸುಗ್ಗಿ ವೆಗ್ಗಳಮೆಂತಯ್…
ಧನ್ಯವಾದಗಳು. ಸುಗ್ಗಿ ಅಂದರೆ ವಸಂತರ್ತುವಲ್ಲವೇ? ಆ ಕಾಲದಲ್ಲಿ ಸೂರ್ಯನಿರದಿದ್ದರೆ ಹೇಗೆ ಎಂಬ ಅರ್ಥದಲ್ಲಿ ಬರೆದದ್ದು.
ಶಾಶ್ವತಕೋಕಿಲಗಾನಮೆ
ಹೇಷಾರವಮಾಗೆ ಮೊರೆವಳಿ ಪುಟದ್ವನಿಯಾ
ಗೆ ಶ್ವಾಸದೆಲರಿನ ವಸಂ-
ತಾಶ್ವಂ ಸುಳಿಯದಿರೆ ಸುಗ್ಗಿ ವೆಗ್ಗಳಮೆಂತಯ್||
ವಸಂತನೇ ಅಶ್ವ, ಕೋಗಿಲೆ ಗಾನವೇ ಅದರ ಕೆನೆತ, ಮೊರೆವ ದುಂಬಿ (ಅಳಿ) ಗಳೇ ಅದರ ಗೊರಸಿನ ದ್ವನಿ, ಎಲರೆ ಅದರ ಶ್ವಾಸ .. (ಪಂಪನ ವಸಂತಗಜ ವರ್ಣನೆಯಿಂದ ಪ್ರೇರಿತನಾಗಿ ಬರೆದದ್ದು.)
ಶಾಶ್ವತಕೋಕಿಲಗಾನದ
ಹೇಷಾರವದಿಂದೆಗರ್ಚಿ ತೆಕ್ಕನೆ ಪಾಯ್ದುಂ|
ವಿಶ್ವವ ಗೆಲುತೆಸೆವ ವಸಂ-
ತಾಶ್ವಂ ಸುಳಿಯದಿರೆ ಸುಗ್ಗಿ ವೆಗ್ಗಳಮೆಂತಯ್||
ಈಲ್ಲಿ ವಸಂತಾಶ್ವ ವಿಶ್ವವನ್ನು ಗೆಲ್ಲುತ್ತಾ ಬರುತ್ತಿದೆ – ಎಂಬರ್ಥದಲ್ಲಿ ಅದು ಯುದ್ಧಾಶ್ವ ಅಥವಾ ಅಶ್ವಮೇಧಾಶ್ವ ಎಂಬ ಸೂಚನೆಯಿದೆ.
ತುಂಬಾ ಚೆನ್ನಾಗಿದೆ. ಎರಡನೆಯ ಪಾದದಲ್ಲಿ ಪ್ರಾಸ ತಪ್ಪಿದೆ.
ಧನ್ಯವಾದಗಳು. ಪ್ರಾಸದ ಬಗ್ಗೆ ಸ್ವಲ್ಪ ಅಡ್ಜಸ್ಟ್ ಮಾಡಿ 🙂
ವಸಂತಾಶ್ವಂ ಎಂದಂತೆ, ಕೋಕಿಲಗಾನಹೇಷಾರವ, ಅಲಿರವಖುರಸ್ವನ, ಶ್ವಾಸಪವನ ಎಂಬಂಥ ರೀತಿಯಲ್ಲಿ ಸಮಾಸವಾಗಿಸಿದರೆ ರೂಪಕವು ಮತ್ತೂ ಸೊಗಯಿಸುತ್ತದೆ.
ಆಹಾ! ಸಮಾಸಪದಗಳು ಚೆನ್ನಾಗಿವೆ. ಧನ್ಯವಾದಗಳು. ಪ್ರಯತ್ನಿಸುತ್ತೇನೆ.