A rudimentary economics theory for creating employment: Dig holes and fill them up! Earlier only a length of un-stitched cloth was worn by both genders, the ಚೀರ. In due course, the ಚೀರ was cut up and sewed up again to form an apparel! This is also economics.
ಮಾಲಿನೀ|| ಹೊಲಿಗೆಯದಿದೆಗೋ ಕೇಳ್ ಪೂರ್ಣಮೀಮಾಂಸೆಯಂ ನೀಂ
ಸುಲಭದೆನಿತೊ ಚೀರಂ(un-stitched) ಗಂಡು-ಪೆಣ್ಗಳ್ಗಮಂದು(then)|
ಫಲಿತವಹುದು ವಸ್ತ್ರಂ(stitched) ಭಾಗಗೊಂಡಂದು ಚೀರಂ
ಕಲಿತೊಡಿದುವೆ ತಾನೇ ಅರ್ಥಶಾಸ್ತ್ರಂ ಗಡಲ್ತೆ||
ವೀರಯೋಧನಿಗೆ ವೈರಿಯ ನೆಲದಲ್ಲಿ ತಾಯ್ನಾಡಿನ ಬಗ್ಗೆ ಸೆಳೆತ —–
ಧೂಳನ್ನು ತುಳಿದು ಧೂಳನ್ನೇಯೆರಚಿ ನನಗೆ
ಧೂಳಿ೦ದಲೇ ಸ್ನಾನ ತಾಯ್ನಾಡಿನಲ್ಲಿ I
ಧೂಳಲ್ಲಿ ಕಣಕಣದ ಪರಿಮಳವ ಹುಡುಕುತ್ತ
ಧೂಳಲ್ಲು ಬರೆವೆ ನಾ ”ಜಯಭಾರತ ”II
ಸಂದರ್ಭೋಚಿತವಾಗಿದೆ. ಆದರೆ “ವೀರಯೋಧನಿಗೆ ವೈರಿಯ ನೆಲದಲ್ಲಿ ತಾಯ್ನಾಡಿನ ಬಗ್ಗೆ ಸೆಳೆತ ” ಪದ್ಯದಲ್ಲೇ ಹುದುಗಿಸಿದರೆ ಇನ್ನೂ ಉತ್ತಮ.
ಇತಿಹಾಸ:
ವರುಷಂಗಳೆ ಪೇರಂಕೆವೊ
ಲಿರಲಿತಿಹಾಸಾ! ಬೆದರ್ವರೋ ಬಾಲರ್ಕಳ್/
ಪರರಂ ಕೊಸರಿಪುದೇ ತಾ
ನುರುಸಂಖ್ಯಾವಾನಕಾರ್ಯಮಲ್ತೆಯಜಸ್ರಂ//
ಹೊಲಿಗೆ:
ಆನುತ್ತೆ ಗುಣಮನೆ ಬಟ್ಟೆಯ ಪುಗೆ ನೀನು
ಮಾನಕ್ಕೆ ನೆರವಾಗಿ ಬರ್ಪೆ/
ಮಾನವರುದ್ಧಾರಕವತರಿಸುತೆ ಬರ್ಪ
ನಾ ನೆಗಳ್ದ ಪಾಂಗಿದು ಪೊಲಿಗೆ//
ಚೆನ್ನಾದ ಹಳೆಗನ್ನಡ. “ನಾ ನೆಗಳ್ದ ಪಾಂಗಿದು ಪೊಲಿಗೆ//” ಇಲ್ಲಿ ಛಂದಸ್ಸು ತಪ್ಪಿದೆಯಾ?
ನೆಗಳ್ದ ಶಿಥಿಲದ್ವಿತ್ವ
ಇದು ಸಾಂಗತ್ಯ ಅಲ್ಲವೇ?
ನಾ ನೆಗ| ಳ್ದ ಪಾಂಗಿ|ದು ಪೊಲಿಗೆ// ಎಂದಾಗುತ್ತದೆ.
ತಿದ್ದಿದ ಪದ್ಯ:
ಆನುತ್ತೆ ಗುಣಮನೆ ಬಟ್ಟೆಯ ಪುಗೆ ನೀನು
ಮಾನಕ್ಕೆ ನೆರವಾಗಿ ಬರ್ಪೆ
ಮಾನವರುದ್ಧಾರಕವತರಿಸುತೆ ಬರ್ಪ
ದಾನವರಿಪುನೀತಿಯಿದುವೇ
Reg. stitch, watch this for 12 seconds from 3.00: https://www.youtube.com/watch?v=Ds7tjPXQ_0o
A rudimentary economics theory for creating employment: Dig holes and fill them up! Earlier only a length of un-stitched cloth was worn by both genders, the ಚೀರ. In due course, the ಚೀರ was cut up and sewed up again to form an apparel! This is also economics.
ಮಾಲಿನೀ|| ಹೊಲಿಗೆಯದಿದೆಗೋ ಕೇಳ್ ಪೂರ್ಣಮೀಮಾಂಸೆಯಂ ನೀಂ
ಸುಲಭದೆನಿತೊ ಚೀರಂ(un-stitched) ಗಂಡು-ಪೆಣ್ಗಳ್ಗಮಂದು(then)|
ಫಲಿತವಹುದು ವಸ್ತ್ರಂ(stitched) ಭಾಗಗೊಂಡಂದು ಚೀರಂ
ಕಲಿತೊಡಿದುವೆ ತಾನೇ ಅರ್ಥಶಾಸ್ತ್ರಂ ಗಡಲ್ತೆ||
welcome to ಮಾಲಿನೀ. I will also give a try!
ಮರೆಯಾಗಿಹ ಮನೆತನಗಳ
ಮರೆಯದುಳಿದಳಿವಿನ ಕಥನ ಜನ್ಮಾಂತರದೊಳ್ |
ಅರಿವಿನನುಭವಮಿದು ನರಗೆ
ಮರುಕಳಿಸುತಿರುವಿತಿಹಾಸ ಕಾಲಾಂತರದೊಳ್ ||
History repeats!!
chennagide. LaghugaLu jaasti aagide.
ಲಗು ಬಗೆಯ ಮೆಚ್ಚಿದ್ದಕ್ಕೆ ಧನ್ಯವಾದಗಳು ರವೀಂದ್ರ!!
ಹಮ್.. ಲಘು ಜಾಸ್ತಿಯಾಯ್ತು ಎಂದು complaint ಮಾಡಿದ್ದು. 🙂
ಒರೆವಳ್ ಗಾಥೆಯ ಕಲ್ಲಿನೊಂದು ತುಣುಕಿಂ ಕಲ್ಲೆರ್ದೆಯುಂ ಕಂಪಿಪೋಲ್
ತೆರೆವಳ್ ಮಾಸಿದ ಮೊಂಡುಗತ್ತಿಯೊದವಿಂ ರಾಜ್ಯೋದಯಾಂತ್ಯಂಗಳಂ
ಪೊರೆವಳ್ ನಾಣ್ಯನಗಣ್ಯಮೊಂದ ಪಿಡಿದುಂ ಸಂಸ್ಕಾರದೌನ್ನತ್ಯಮಂ
ನರಮಾತ್ರಂಗಿತಿಹಾಸದೇವಿಯೊಲಿಯಲ್ ಕಾಲಾಕ್ಷಿಯುಜ್ಜೀವಿಪಳ್||
ಒಂದು ಕಲ್ಲಿನಿಂದ,ಮೊಂಡುಗತ್ತಿಯಿಂದ, ಹಳೆ ನಾಣ್ಯದಿಂದ, ಇತಿಹಾಸವನ್ನು ಪುನರ್ಸೃಷ್ಠಿಸುವಳೀಕೆ ಒಲಿದರೆ, ಕಾಲದ ಕಣ್ಣನ್ನು ಬೆಳಗುತ್ತಾಳೆ.
Beautiful!
Thanks Manjunath
Lovely.
Thanks Ram
Thanks Ram..