Mar 052019
 

  2 Responses to “ಪದ್ಯಸಪ್ತಾಹ ೩೪೯: ಚಿತ್ರಕ್ಕೆ ಪದ್ಯ”

  1. ಮೇಗಳಲ್ಲಿಲ್ಲ ಸರಿ ಗಂಗೆಯುಂ ಬಗಲೊಳುಮೆ
    ಸಾಗಬೇಕಿನ್ನಿನಿತು ವರ್ಷವದಕೆ|
    ಹೀಗೆಲ್ಲ ಚಿತ್ರಿಪಾಗಳ್ ಸಾಜ ದೋಷಗಳು
    ಈಗಲೇ ಸುಡುಗಣ್ಣು ಹಣೆಯೊಳೇಕೋ!!

  2. ಬಾಲಶಿವನಿಗೆ ವಿನೋದವಾಗಿ !!

    (ಹುಲಿ ಚರ್ಮದ ಮೇಲೆ ಮಲಗಿರುವ ಬಾಲಶಿವ ಆಲದೆಲೆಯ ಮೇಲೆ ಮಲಗಿರುವ ಕೃಷ್ಣನಂತೆ ಕಂಡ ಕಲ್ಪನೆಯಲ್ಲಿ)

    ಬೆಚ್ಚಗಿನ ತೊಗಲದಟ್ಟದ ಮೇಲೆ ಪವಡಿಸುತೆ
    ಮುಚ್ಚಿ ತೋರಿಹೆ ಹರಿಯವೋಲ್ ಲೀಲೆ ಹರನೆ |
    ಮೆಚ್ಚಿರುವೆನನುರೂಪದುಟ್ಟುಡುಗೆ ಪರಿಯ ಮೇಣ್
    ಕಚ್ಚೆ ಹೀರುದುವೆಂತೊ “ಉಚ್ಚೆ”ಯೆಂದರಿಯೆ !!

    ಅಚ್ಚರಿಯು ತನುತುಂಬೆ ರುದ್ರಾಕ್ಷಮಚ್ಚಿಗೊಳೆ
    ಹಚ್ಚಿರುವ ಬೂದಿಗೆರೆ ಹಣೆಗಣ್ಣ ಬರೆಯೆ |
    ಎಚ್ಚರವೊ ಚೂಪಲಗ ಬಳಿಯುರಗದಲುಗು ಸರಿ
    ಕಚ್ಚಿ ಸೀಪೀಯೆ ವಿಷ ಬೆರಳಿಂದೆ ಮರುಳೆ !!

    * ಅನುರೂಪದುಟ್ಟುಡುಗೆ = ಮ್ಯಾಚಿಂಗ್ ಹೈಪರ್
    ಅಚ್ಚಿಗೊಳ್ = ಕಂಗೊಳಿಸು

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)