The lotus neither stops short of the surface of the water nor grows too tall only to end up wilting. It ideally grows just about enough to emerge from the water surface. People deem all water bodies as Ganga and worship them, but it is the lotuses that decorate the ponds.
ಮಂದಾಕ್ರಾಂತಾ||
ಎಂದುಂ ನೀರೊಳ್ ಸ್ಥಗಿತಗೊಳೆಯೌ ನೀಂ ತಿರೋಧಾನಕೆಂಬೆಂ
ದುಂದೈ ನೀರಿಂದೆರಡುಮೊಳ ಮೇಲೇಳ್ವುದುಂ, ಸೊಂಟಕೂನಂ|
ಚಂದಂ ನೀಂ ತೇಲಿರಿಸಿದೊಲು ನಿಂದಿರ್ಪೆಯೌ ಸ್ಮೇರದಿಂದಂ
ವಂದಿಪ್ಪರ್ ಗಂಗೆಗೆ ಜನರು ನೀಂ ಸಿಂಗರಂ ಗೈದೆಯೆಂತೋ||
ಚೆನ್ನಾಗಿದೆ. ಎರಡನೇ ಸಾಲಿನ ತಾತ್ಪರ್ಯ ತಿಳಿಯಲಿಲ್ಲ. ವೃತ್ತ-ಕಂದಗಳಲ್ಲಿ ಆದಷ್ಟರ ಮಟ್ಟಿಗೆ ವೊಲ್/ಅಂತೆ ಗಳನ್ನು ಉಪಮಾವಾಚಕವಾಗಿ ಬಳಸುವುದೊಳ್ಳೆಯದು. ಒಲ್ ಎಂಬುದು ನಡುಗನ್ನಡವಾಗುತ್ತದೆ. ಹಾಗೆಯೇ ಗೌದೆ ಅನ್ನೋದು ಗೆಯ್ದೆ ಎಂದಾಗಬೇಕಿತ್ತೇ?
ವನಪ್ರೋದ್ಭೂತ- ವನಜ/ಕಮಲ
ವನಪ್ರೋದ್ಭೂತಾರಣ್ಯ- ಕಮಲವನ
ಜನಕ್ಕೆ ಸಂತೋಷವನ್ನು ಕೊಡುವ ಗುಣ ಇವುಗಳಲ್ಲಿದ್ದರೂ ಕೂಡ ಈ ಕಮಲವನದಲ್ಲಿ ದುಂಬಿಗಳು ಕಾಣಲೊಲ್ಲವು. ಕಮಲವನಭೂಷಾ ಮಧುಕರಃ ಎಂಬ ಕವಿವಾಣಿಯೇ ಇದೆ(ಭರ್ತೃಹರಿ). ಹಾಗಾಗಿ ಅತ್ತಲೂ ಕೂಡ ಮನಸ್ಸು ಕೊಟ್ಟು ಪರೋಪಕಾರದಿಂದ ಈ ಪಂಕೇರುಹಗಳು ಪ್ರಸಿದ್ಧಿ ಪಡೆಯುವಂತಾಗಲಿ.
ಧನ್ಯವಾದಗಳು _/\_ಆನೆ ಎಂದರೆ ಬಲಶಾಲಿಗಳಲ್ಲದವರನ್ನು ಬಲಶಾಲಿಗಳೆಂದಂತೆ ಆಗುತ್ತದೆಂದು ಬರೆದಿರಲಿಲ್ಲ(ಚೀನಾವನ್ನು ಮಾತ್ರ ಆನೆ ಅನ್ನಬಹುದಷ್ಟೇ)..ಹಸ್ತಿಯ ಎರಡನೇ ಅರ್ಥ ನೀನು ಶ್ಲೇಷೆಯೆಂದು ಹೇಳಿದ ಮೇಲೇ ತಿಳಿದದ್ದು:-)..ತಿದ್ದಿದ ಪದ್ಯ
ಪಂಕಮಂ ಮುಚ್ಚಿರ್ಪ ಪಾರದರ್ಶಕಭೇದ-(ಭೇದ=variety)
ದಂಕಿತದ(Branded) ಒಳವಸ್ತ್ರವಹುದು ಜಲವು|
ಸಂಕೀರ್ಣವಿನ್ಯಾಸವಸ್ತ್ರವಾ ಪರ್ಣಗಳ-
ಲಂಕಾರದಿಂದೆಸೆವ ಹೂವೆ ಮೊಗವು||
The lotus neither stops short of the surface of the water nor grows too tall only to end up wilting. It ideally grows just about enough to emerge from the water surface. People deem all water bodies as Ganga and worship them, but it is the lotuses that decorate the ponds.
ಮಂದಾಕ್ರಾಂತಾ||
ಎಂದುಂ ನೀರೊಳ್ ಸ್ಥಗಿತಗೊಳೆಯೌ ನೀಂ ತಿರೋಧಾನಕೆಂಬೆಂ
ದುಂದೈ ನೀರಿಂದೆರಡುಮೊಳ ಮೇಲೇಳ್ವುದುಂ, ಸೊಂಟಕೂನಂ|
ಚಂದಂ ನೀಂ ತೇಲಿರಿಸಿದೊಲು ನಿಂದಿರ್ಪೆಯೌ ಸ್ಮೇರದಿಂದಂ
ವಂದಿಪ್ಪರ್ ಗಂಗೆಗೆ ಜನರು ನೀಂ ಸಿಂಗರಂ ಗೈದೆಯೆಂತೋ||
ಚೆನ್ನಾಗಿದೆ. ಎರಡನೇ ಸಾಲಿನ ತಾತ್ಪರ್ಯ ತಿಳಿಯಲಿಲ್ಲ. ವೃತ್ತ-ಕಂದಗಳಲ್ಲಿ ಆದಷ್ಟರ ಮಟ್ಟಿಗೆ ವೊಲ್/ಅಂತೆ ಗಳನ್ನು ಉಪಮಾವಾಚಕವಾಗಿ ಬಳಸುವುದೊಳ್ಳೆಯದು. ಒಲ್ ಎಂಬುದು ನಡುಗನ್ನಡವಾಗುತ್ತದೆ. ಹಾಗೆಯೇ ಗೌದೆ ಅನ್ನೋದು ಗೆಯ್ದೆ ಎಂದಾಗಬೇಕಿತ್ತೇ?
ನೀರಿನಿಂದ ಮೇಲಕ್ಕೆ ಎರಡು ಮೊಳದಷ್ಟು ಬೆಳೆಯುವುದೂ ತರವಲ್ಲ; ಆಧಾರವಿಲ್ಲದೆ ಮುರಿದುಬೀಳುತ್ತದೆ. ಕಾಗುಣಿತದೋಷವನ್ನು ತಿದ್ದಿದ್ದೇನೆ. ’ವೊಲ್’ ತಿದ್ದುವೆ. ಧನ್ಯವಾದ.
ಜನಕ್ಕಂ ಸಂತೋಷಂಗುಡುವ ಗುಣಮಿರ್ಕಾದೊಡನದೇಂ
ವನಪ್ರೋದ್ಭೂತಾರಣ್ಯದೊಳಳಿಕುಲಂ ತೋರದಕಟಾ!
ಮನೀಷ್ಯೋಕ್ತಂ ವಾಕ್ಯಂ “ಕಮಲವನಭೂಷಾ ಮಧುಕರಃ”
ಮನಂಗುಟ್ಟತ್ತಲ್ ನೀಂ ನೆಗಳ್ಗುಮುಪಕಾರೋದ್ಯಮದಿನೇ|
ವನಪ್ರೋದ್ಭೂತ- ವನಜ/ಕಮಲ
ವನಪ್ರೋದ್ಭೂತಾರಣ್ಯ- ಕಮಲವನ
ಜನಕ್ಕೆ ಸಂತೋಷವನ್ನು ಕೊಡುವ ಗುಣ ಇವುಗಳಲ್ಲಿದ್ದರೂ ಕೂಡ ಈ ಕಮಲವನದಲ್ಲಿ ದುಂಬಿಗಳು ಕಾಣಲೊಲ್ಲವು. ಕಮಲವನಭೂಷಾ ಮಧುಕರಃ ಎಂಬ ಕವಿವಾಣಿಯೇ ಇದೆ(ಭರ್ತೃಹರಿ). ಹಾಗಾಗಿ ಅತ್ತಲೂ ಕೂಡ ಮನಸ್ಸು ಕೊಟ್ಟು ಪರೋಪಕಾರದಿಂದ ಈ ಪಂಕೇರುಹಗಳು ಪ್ರಸಿದ್ಧಿ ಪಡೆಯುವಂತಾಗಲಿ.
ಮೊದಲನೇಯ ಸಾಲನ್ನು ಹೀಗೆ ತಿದ್ದಿದೆ:
ಜನಕ್ಕಂ ಸಂತೋಷಂಗುಡುವ ಗುಣಮಿರ್ಕುಂ ಬಗೆವೊಡೀ
ಅರಳೆ ನರೇಂದ್ರಭಾನುಕರಚುಂಬಿತಮಾಗುತುಮಂಬುಜಂಗಳೀ
ಮೆರೆವ ವಿಶಾಲಭಾರತಸರೋವರದೊಳ್ ಜನಮೀನಯುಕ್ತದೊಳ್
ತರಿವ ಕರಂಗಳಿಲ್ಲದಿರೆ ಪೀಡಿಪ ಮಕ್ಷಿಕರೋಡೆ ದೂರಕಂ
ಧರಣಿಗೆ ಜಾನಮೆಂಬ ಮಕರಂದಮನೀಯಲದೆಂತುಟಂದಮೋ
ನರೇಂದ್ರನೆಂಬ ಸೂರ್ಯನ ಕಿರಣಗಳಿಂದ ಉದ್ದೀಪಿತವಾಗಿ ಜನರೇ ಮೀನುಗಳಂತಿರುವ ಭಾರತವೆಂಬ ಸರೋವರದಲ್ಲಿ ಎಲ್ಲೆಡೆಯೂ ಕಮಲಗಳು ಅರಳಿ,ಅವುಗಳನ್ನು ಕೀಳುವ ‘ಕೈ’ ಗಳು ಇಲ್ಲವಾಗಿ, ಪೀಡಿಸುವ ನೊಣಗಳು ಸೂರ್ಯನ ಬಿಸಿಲನ್ನು ತಾಳದೆ ಓಡುವಂತಾಗಿ, ಅರಳಿದ ಕಮಲಗಳ ಮಕರಂದವು ಸಮಸ್ತ ಭೂಮಂಡಲಕ್ಕೆ ಸಿಗುವಂತಾದರೆ ಎಷ್ಟು ಅಂದ ಎನ್ನುವ ಪ್ರಯತ್ನ
’ಧೂಪ’ಕ್ಕೆ ಬಿಸಿಲು ಎಂಬರ್ಥವಿರುವುದು ಹಿಂದಿಯಲ್ಲಿ; ಸಂಸ್ಕೃತದಲ್ಲಲ್ಲ. ಹೂವುಗಳ ಮಕರಂದವನ್ನು ಪರಿಷ್ಕರಿಸಿ ನಮಗೆ ತಲುಪಿಸಲು (ಜೇನು)ನೊಣಗಳು ಬೇಕಲ್ಲವೆ?
ಧನ್ಯವಾದಗಳು..ಧೂಪದಿಂ ಅನ್ನುವುದನ್ನು ದೂರಕಂ ಅಂತ ತಿದ್ದಿದ್ದೇನೆ..ಪೀಡಿಪ ಮಕ್ಷಿಕರ್ ಎಂದಿದ್ದೇನಲ್ಲ..ಇತಿಮಿತಿಯಲ್ಲಿ ಮಕರಂದವನ್ನು ಹೀರುವವರು ಇಲ್ಲೇ ಇರಲಿ..ಇನ್ನೂ ತಕರಾರಿದ್ದರೆ ಮಕ್ಷಿಕರ ವಿಷಯವೇ ಬೇಡ..ಧೂರ್ತರುಮೋಡೆ ಅನ್ನೋಣ
ಚೆನ್ನಾಗಿದೆ. ಧೂರ್ತರು ಅನ್ನುವುದಕ್ಕಿಂತ ಹಸ್ತಿಗಳೋಡೆ ದೂರಕಂ ಎಂದಾಗಿಸಿದರೆ ಸೂಕ್ತವೆನಿಸುತ್ತದೆ. ಆನೆಗಳು ಸರೋವರಗಳಿಗೆ ನುಗ್ಗಿ ಕಮಲಗಳನ್ನು ಕೀಳುವುದು ಪ್ರಸಿದ್ಧವಷ್ಟೇ. ಹಸ್ತಿ ಎಂಬುದು ಶ್ಲೇಷೆಯೂ ಆಗಬಲ್ಲದು 🙂
ಧನ್ಯವಾದಗಳು _/\_ಆನೆ ಎಂದರೆ ಬಲಶಾಲಿಗಳಲ್ಲದವರನ್ನು ಬಲಶಾಲಿಗಳೆಂದಂತೆ ಆಗುತ್ತದೆಂದು ಬರೆದಿರಲಿಲ್ಲ(ಚೀನಾವನ್ನು ಮಾತ್ರ ಆನೆ ಅನ್ನಬಹುದಷ್ಟೇ)..ಹಸ್ತಿಯ ಎರಡನೇ ಅರ್ಥ ನೀನು ಶ್ಲೇಷೆಯೆಂದು ಹೇಳಿದ ಮೇಲೇ ತಿಳಿದದ್ದು:-)..ತಿದ್ದಿದ ಪದ್ಯ
ಅರಳೆ ನರೇಂದ್ರಭಾನುಕರಚುಂಬಿತಮಾಗುತುಮಂಬುಜಂಗಳೀ
ಮೆರೆವ ವಿಶಾಲಭಾರತಸರೋವರದೊಳ್ ಜನಮೀನಯುಕ್ತದೊಳ್
ತರಿವ ಕರಂಗಳಿಲ್ಲದಿರೆ ಪೀಡಿಪ ಹಸ್ತಿಗಳೋಡೆ ದೂರಕಂ
ಧರಣಿಗೆ ಜಾನಮೆಂಬ ಮಕರಂದಮನೀಯಲದೆಂತುಟಂದಮೋ
ಬೆರೆಯದಸಂಗದೆ ಮೇಲ್ ತಾ-
ವರೆಯೆಲೆಯೋಲ್ ತೇಲುತಿರ್ಪಸಂತರ ಸಂಘಂ
ತಿರೆಯೊಳ್ ಬ್ರಹ್ಮಾನಂದಮ-
ನರಳಿದ ಹೃತ್ಕುಮುದಪರಿಯೊಳುಂ ಬೀರುದ ಕಾಣ್ !!