Apr 222019
 

೧. ಕಲಬೆರಕೆ

೨. ಹಿರಿಯರ ಆಶೀರ್ವಾದ

೩. ವನಸುಮ

  3 Responses to “ಪದ್ಯಸಪ್ತಾಹ ೩೫೫:ವರ್ಣನೆ”

  1. ಬೇರೆಲ್ಲ ಸಮಯದೊಳು ಪಿರಿತನದ ಪರಿವೆಯದು
    ಗೈರಹುದು ಪಿರಿಯರೊಳ್, ನುಡಿವರೇನೇನೋ|
    ತೋರಲವರಿಂಗವರ ಸ್ಥಾನವ ಮಣಿಯೆ ಜವಾ-
    ಬ್ದಾರಿಯಿಂದಾಶೀರ್ವದಿಪರೆಳೆಯರಂ||

  2. ಮಾಲಿನೀ||
    ಕಲಬೆರಕೆಯುಮಲ್ಲಂ ನೋಡೆ ಸಾರ್ವತ್ರಿಕಂ ತಾಂ
    ತಿಲ-ಯವ-ಮಧು-ಗೋಧೂಮಂಗಳೊಳ್ ರೇಶ್ಮೆಯೊಳ್ ಮೇಣ್|
    ಪಲವು ಪರಿಯೊಳಿದ್ದೇಂ, ಮಾತ್ರಮೀ ಒಂದರೊಳ್ ತಾಂ
    ಸಲೆ ಗರಲದೆ ಕಾಣೆಂ ಮುನ್ನಮಿಂದುಂ ಗಡೆಂದುಂ||

  3. ವನಸುಮ:
    ಬಿಟ್ಟ ಪೂವನೆಲ್ಲ ಕಿತ್ತು ಫಲವು ಪುಟ್ಟದಂತೆ ಗೈವ
    ಖೊಟ್ಟೆಮನುಜನಲ್ಲಿರುವೆಡವಟ್ಟಿದೇನಿದೋ|
    ಬಿಟ್ಟು ಪೂವನೆಲ್ಲ ಅಲ್ಲೆ ದಳಗಳುದುರಿ ಹಣ್ಣವಾಗೆ
    ಹೊಟ್ಟೆತುಂಬ ಉಂಬ ಮಿಗಮೆ ಮಿಗೆ ವಿವೇಕಿಯೈ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)