ಪದ್ಯಸಪ್ತಾಹ ೩೫೬: ಪದ್ಯಪೂರಣ ಕನ್ನಡ ಪದ್ಯಗಳು Add comments Apr 302019 ಕೆಳಗಿನ ಪಾದಾಂತ್ಯಕ್ಕೆ ಹೊಂದುವಂತೆ ಪದ್ಯ ರಚಿಸಿರಿ “ತೆಂಗು ತೊಂಗಿತು ಮಾವಿನೊಳ್” 4 Responses to “ಪದ್ಯಸಪ್ತಾಹ ೩೫೬: ಪದ್ಯಪೂರಣ” ಹಾದಿರಂಪ says: April 30, 2019 at 11:03 am (ನವಣೆ ಬೆಳೆದ ಹೊಲ) ನೀವಾರಭೂಮಿಯಂಚೊಳಗೆಂತೊ ನಿಬಿಡದಿಂ ತಾವಿದ್ದವೆನಿತೊ ಮರ ತೆಂಗ-ಮಾವ| ಕಾವುಕಳಚಿಕೊಳುತ್ತೆ ತೆಂಗ ಗೊನೆಯೊಂದಾಗ ಮಾವ ಟೊಂಗೆಯೊಳು ತೊಂಗಿತ್ತು ತೆಂಗು|| Reply ಭಾಲ says: April 30, 2019 at 11:52 pm ಬಂಗಾಳ ಕೊಲ್ಲಿಯಿ೦ ಬೀಸಲ್ ನುಂಗಿ ನೊಣೆವ ಗಾಳಿಯಯ್ I ಭಂಗಿಸಿ ನೂ೦ಕಿಯಟ್ಟಲ್ ಚೆ೦- ದೆ೦ಗು ತೊಂಗಿತು ಮಾವಿನೊಳ್ II Reply ಅನಂತಕೃಷ್ಣ says: May 1, 2019 at 6:14 pm ಚೋರನೇರುತೆ ನಾರಿಕೇಳದ ವೃಕ್ಷಮಂ ಬೆಳದಿಂಗಳೊಳ್ ನೂರು ಕಾಯ್ಗಳ ಗೊಂಚಲಂ ತರಿದಿಳಿದ ವೇಳೆಯೊಳಾಗಳೇ ಊರಿನೊಡೆಯನೆ ದಾರಿಯೊಳಗೆದುರಾಗಿರಲ್ ನಡುಗತ್ತಲೊಳ್ ಏರೆ ಕಳ್ಳನೆ ಮಾವ ಮರಮಂ, ತೆಂಗು ತೊಂಗಿತು ಮಾವಿನೊಳ್ Reply Usha says: May 4, 2019 at 10:53 am ಸಿಂಗರಿಸಿ ಕರಿಬೇವು ಬೆಲ್ಲ ಬೆರೆಸೊಗ್ಗರಿಸು- ತಿಂಗಿನೊಡೆ ತೆಂಗ ತೇಲಿಸಿ ಸಾರಿನೊಳ್ | ಸಂಗಕೆನೆ ಹಸಿಕಾರ ಕಡುಹುಳಿಯನರೆದ ಪ್ರ- ಸಂಗದೊಳ್ ತೆಂಗು ತೊಂಗಿತು ಮಾವಿನೊಳ್ !! ಇಂದು ನಮ್ಮ ಮನೆಯಲ್ಲಿ ತಿಳಿಸಾರು – ಮಾವಿನಕಾಯಿ ಚಟ್ನಿ ವಾಸನೆ ಬಂತೇ !? Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
(ನವಣೆ ಬೆಳೆದ ಹೊಲ) ನೀವಾರಭೂಮಿಯಂಚೊಳಗೆಂತೊ ನಿಬಿಡದಿಂ
ತಾವಿದ್ದವೆನಿತೊ ಮರ ತೆಂಗ-ಮಾವ|
ಕಾವುಕಳಚಿಕೊಳುತ್ತೆ ತೆಂಗ ಗೊನೆಯೊಂದಾಗ
ಮಾವ ಟೊಂಗೆಯೊಳು ತೊಂಗಿತ್ತು ತೆಂಗು||
ಬಂಗಾಳ ಕೊಲ್ಲಿಯಿ೦ ಬೀಸಲ್
ನುಂಗಿ ನೊಣೆವ ಗಾಳಿಯಯ್ I
ಭಂಗಿಸಿ ನೂ೦ಕಿಯಟ್ಟಲ್ ಚೆ೦-
ದೆ೦ಗು ತೊಂಗಿತು ಮಾವಿನೊಳ್ II
ಚೋರನೇರುತೆ ನಾರಿಕೇಳದ ವೃಕ್ಷಮಂ ಬೆಳದಿಂಗಳೊಳ್
ನೂರು ಕಾಯ್ಗಳ ಗೊಂಚಲಂ ತರಿದಿಳಿದ ವೇಳೆಯೊಳಾಗಳೇ
ಊರಿನೊಡೆಯನೆ ದಾರಿಯೊಳಗೆದುರಾಗಿರಲ್ ನಡುಗತ್ತಲೊಳ್
ಏರೆ ಕಳ್ಳನೆ ಮಾವ ಮರಮಂ, ತೆಂಗು ತೊಂಗಿತು ಮಾವಿನೊಳ್
ಸಿಂಗರಿಸಿ ಕರಿಬೇವು ಬೆಲ್ಲ ಬೆರೆಸೊಗ್ಗರಿಸು-
ತಿಂಗಿನೊಡೆ ತೆಂಗ ತೇಲಿಸಿ ಸಾರಿನೊಳ್ |
ಸಂಗಕೆನೆ ಹಸಿಕಾರ ಕಡುಹುಳಿಯನರೆದ ಪ್ರ-
ಸಂಗದೊಳ್ ತೆಂಗು ತೊಂಗಿತು ಮಾವಿನೊಳ್ !!
ಇಂದು ನಮ್ಮ ಮನೆಯಲ್ಲಿ ತಿಳಿಸಾರು – ಮಾವಿನಕಾಯಿ ಚಟ್ನಿ
ವಾಸನೆ ಬಂತೇ !?