Apr 302019
 

ಕೆಳಗಿನ ಪಾದಾಂತ್ಯಕ್ಕೆ ಹೊಂದುವಂತೆ ಪದ್ಯ ರಚಿಸಿರಿ

“ತೆಂಗು ತೊಂಗಿತು ಮಾವಿನೊಳ್”

  4 Responses to “ಪದ್ಯಸಪ್ತಾಹ ೩೫೬: ಪದ್ಯಪೂರಣ”

  1. (ನವಣೆ ಬೆಳೆದ ಹೊಲ) ನೀವಾರಭೂಮಿಯಂಚೊಳಗೆಂತೊ ನಿಬಿಡದಿಂ
    ತಾವಿದ್ದವೆನಿತೊ ಮರ ತೆಂಗ-ಮಾವ|
    ಕಾವುಕಳಚಿಕೊಳುತ್ತೆ ತೆಂಗ ಗೊನೆಯೊಂದಾಗ
    ಮಾವ ಟೊಂಗೆಯೊಳು ತೊಂಗಿತ್ತು ತೆಂಗು||

  2. ಬಂಗಾಳ ಕೊಲ್ಲಿಯಿ೦ ಬೀಸಲ್
    ನುಂಗಿ ನೊಣೆವ ಗಾಳಿಯಯ್ I
    ಭಂಗಿಸಿ ನೂ೦ಕಿಯಟ್ಟಲ್ ಚೆ೦-
    ದೆ೦ಗು ತೊಂಗಿತು ಮಾವಿನೊಳ್ II

  3. ಚೋರನೇರುತೆ ನಾರಿಕೇಳದ ವೃಕ್ಷಮಂ ಬೆಳದಿಂಗಳೊಳ್
    ನೂರು ಕಾಯ್ಗಳ ಗೊಂಚಲಂ ತರಿದಿಳಿದ ವೇಳೆಯೊಳಾಗಳೇ
    ಊರಿನೊಡೆಯನೆ ದಾರಿಯೊಳಗೆದುರಾಗಿರಲ್ ನಡುಗತ್ತಲೊಳ್
    ಏರೆ ಕಳ್ಳನೆ ಮಾವ ಮರಮಂ, ತೆಂಗು ತೊಂಗಿತು ಮಾವಿನೊಳ್

  4. ಸಿಂಗರಿಸಿ ಕರಿಬೇವು ಬೆಲ್ಲ ಬೆರೆಸೊಗ್ಗರಿಸು-
    ತಿಂಗಿನೊಡೆ ತೆಂಗ ತೇಲಿಸಿ ಸಾರಿನೊಳ್ |
    ಸಂಗಕೆನೆ ಹಸಿಕಾರ ಕಡುಹುಳಿಯನರೆದ ಪ್ರ-
    ಸಂಗದೊಳ್ ತೆಂಗು ತೊಂಗಿತು ಮಾವಿನೊಳ್ !!

    ಇಂದು ನಮ್ಮ ಮನೆಯಲ್ಲಿ ತಿಳಿಸಾರು – ಮಾವಿನಕಾಯಿ ಚಟ್ನಿ
    ವಾಸನೆ ಬಂತೇ !?

Leave a Reply to ಅನಂತಕೃಷ್ಣ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)