Jul 012019
 

೧. ಹಳೆಯ ಪತ್ರ

೨. ಸುಭದ್ರಾವಿವಾಹದ ಯಾವುದಾದರು ಸಂದರ್ಭವನ್ನಾಧರಿಸಿ ಪದ್ಯ

೩. ಬಾಡಿಗೆಯ ಮನೆ

  7 Responses to “ಪದ್ಯಸಪ್ತಾಹ ೩೬೫: ವರ್ಣನೆ”

  1. ಹಳೆಯ ಪತ್ರ:
    ಪಿಂತಿನ ಭಾವಮದಿರಲೇಂ?
    ಸ್ವಂತಿಕೆಯಂ ಕಳೆವುದೇನದಂಟದೆ ಮನಕಂ?
    ಚಿಂತಿಸೆ ತೆರೆವುದು ಕದಮ-
    ತ್ಯಂತನಿಗೂಢಪ್ರಸಂಗಮುಂ ತೆರೆಗುಂ ದಲ್

    ಹಿಂದಿನ ಭಾವಗಳಾದರೇನು? ಅವು ತಮ್ಮ ಸ್ವಂತಿಕೆಯನ್ನು ಕಳೆದು ಮನವನ್ನು ಮುಟ್ಟದೇ ನಿಲ್ಲುವುದೇ? ಅವುಗಳ ಬಗ್ಗೆ ವಿಚಾರ ಮಾಡಿದಾಗ ಹಿಂದೆ ನಿಗೂಢವಾದ ಎಷ್ಟೋ ವಿಷಯಗಳು ತೆರೆಯುವುದು

  2. ಸುಭದ್ರಾವಿವಾಹ:
    (ಅರ್ಜುನನು ಸಂನ್ಯಾಸಿಯ ವೇಶಧಾರಿಯಾಗಿ ಬಂದಿರುತ್ತಾನಲ್ಲವೇ)
    ಕಣೆಯಾಳ್ ಪಕ್ಕಿಯ ಕಣ್ಣಂ
    ಚಣದೊಳ್ ಭೇದಿಸಿದನಲ್ತೆ ದೃಶ್ಯಾವಳಿಯೊಳ್
    ಪಣವೆತ್ತಿರೆ ಪೆಣ್ಗಂ, ಕಡೆ-
    ಗಣಿಸುವನೇಂ ಕೂರ್ಮೆಯಿರದ ಸನ್ಯಾಸಿಯವೊಲ್

    ಬಾಣದ ಪಟು ಎಂತಹ ದೃಶ್ಯಾವಳಿಗಳಿದ್ದರೂ ಕ್ಷಣದಲ್ಲಿ ಹಕ್ಕಿಯಕಣ್ಣನ್ನು (ಮಾತ್ರ) ಭೇದಿಸಿದನಲ್ಲವೇ? (ಅಂತಹ ಅರ್ಜುನ) (ಈಗ) ಹೆಣ್ಣಿಗೆಂದು ಪಣವೆತ್ತಿರಲು ಒಲವಿರದ ಸಂನ್ಯಾಸಿಯ ಹಾಗೆ ಕಡೆಗಣಿಸುವನೇ?

    • ಅಂದಿಂಗಪರೂಪಂ ಕೇಳ್
      ಹಿಂದಿಂದೋಡುತೆ ವಿವಾಹಮಾಗುವುದಂತುಂ|
      ಇಂದಿಂಗಾದೊಡೆ ಪ್ರಸ್ತುತ-
      ಮೆಂದೆಂ ಸರ್ವರ (secure)ಸುಭದ್ರಪರಿಣಯಕಾರ್ಯಂ||

  3. ಹಳೆಯಽ ಪಽತ್ರವು(ಎಲೆ) ಬಾಡಿಽ ಖಿಳಗೊಂಡಿಽಹುದುಮೆಂತೋ
    ಸುಳಿಸುತ್ತಿಽಕೊಂಡಿರ್ಪುದು ಮೇಣಿಂ|ದಾಗಽದುಽ
    ತಳಿಗೆಽಯಿಂ ಬಡಿಸೆಽ ಚಿತ್ರಾನ್ನಽ|| (ತಳಿಗೆಽಯಿಂ ಬಡಿಸಽಲನ್ನಽವಽ)

    • 😀 ಬಾಳೆಯೆಲೆ ಮಾಡಿಬಿಟ್ಟಿರಾ ಪ್ರಸಾದು! ಚೆನ್ನಾಗಿದೆ

  4. “(ಸ್ವಂತ)ಸ್ವಾಮ್ಯಗೃಹವಿರ್ಪುದಿದು, ನೆಲೆಸಿಹೆವು ಶಾಶ್ವತದೆ,
    ರಮ್ಯವಿದುಮಸ್ಥಾಯಿ ಭಾಟಕಗೃಹಂ(ಬಾಡಿಗೆಮನೆ)|”
    ಗ್ರಾಮ್ಯಮಹುದೀ ಗ್ರಹಿಕೆ, ಶಾಶ್ವತತೆಯನ್ವಿತವು
    ಸಾಮ್ಯದಿಂ ಗೇಹಕೋ ದೇಹಕೋ ಪೇಳ್||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)