Beautiful armpits!
ಈಗಷ್ಟೆ ಕೂರ್ಮಂ ಪ್ರಸಾಧನಗೃಹಕ್ಕಂತೆ(Beauty Parlour)
ಪೋಗಿಬಂದಿಹುದು ಕಾಣಾ ಬೆಡಗನುಂ|
ಹೇಗೆ ತಾನೆತ್ತಿಹುದು ಆಹ! ಕತ್ರೀನಳೊಲು
ತೂಗುತ್ತೆ ತೋಳ್ಗಳನ್ನುಲ್ಲಾಸದಿಂ||
(https://www.youtube.com/watch?v=0yTHb2n8ugA)
I am not exactly looking forward to any value addition on this theme by fellow padyapaani-s!
ಮಂದಗಮನಮಂ ಪೊಂದಿರೆ
ನೊಂದು, ನಭದೆ ಪಾರ್ದು ಪಕ್ಕಿಯಂತಾಗಲ್, ಬಲ್- |
ಚಂದದ ಕನಸಂ ಕಂಡ-
ತ್ತಿಂದಿರೆಯಾಣ್ಮನವತಾರಮಾದೀ ಕೂರ್ಮಮ್ ||
ಚೆನ್ನಾಗಿದೆ, ಹೇಗಿದೆ ನಿಮ್ಮ ಹೊಸಮನೆ 🙂
ಧನ್ಯವಾದಗಳು. ಹೊಸಮನೆ ಚೆನ್ನಾಗಿದೆ. ನಿಮ್ಮನ್ನು ಕಾಣಲಿಲ್ಲವಲ್ಲ?
ಅವರು ನಾಲ್ಕನೆಯ ಮಹಡಿಯ ತಾರಸಿಯಲ್ಲಿದ್ದರು, ನೀವು ನೆಲಮಾಳಿಗೆಯಲ್ಲಿದ್ದಿರಿ. ಸಂಪರ್ಕವಾಗಲಿಲ್ಲ ಅಷ್ಟೆ 🙂
ಹೌದು. 🙂
ಪುಕ್ಕಮುಳಿದ ಕೊಕ್ಕನುಳಿದ
ಪಕ್ಕಿಯ ಪಾಂಗಿಂದೆ ನಭಕೆ ಕಚ್ಛಪನೆಸೆಗಲ್
ಪುಕ್ಕತನದ ಕವಚಮುಳಿದು
ತಕ್ಕುದು ಬಾನ್ ರೆಂಕೆಗೈಗೆನುತೆ ಮೆರೆದಪನಯ್
ಕವಚಮುಳಿದು – ಕವಚದಿಂದಾಚೆ ಬಂದು
ಬುವಿಯೊಽಳುಽ ಮಾತ್ರಽಮೆಽ ನಡೆಯಽಬಲ್ಲನುಮಾಗಽಸದೆ ಮಾತ್ರಽಮುಸಿರಾಡಽಬಲ್ಲಽ ಮನುಜಂ
ನೀರೊಽಳುಽ ಮೇಣಿಂದೆಽ ಬುವಿಯೊಽಳುಽಮುಸಿರಾಡಽಬಲ್ಲಽದುಽ ಆಮೆಽಯುಽಮಾವಽಗಂ ಕೇಳ್|
ಈಜಿರ್ದೊಽಡೇನಾತಽನಾಗಾಗಽ ಶಿರವನ್ನುಽ ಮೇಲಕ್ಕೆತ್ತಲುಬೇಕುಽ ಉಚ್ಛ್ವಾಸಽಕಂ
ಈಜೇನುಽ ನಡೆಯೇನುಽ ವೈಶಿಷ್ಟ್ಯಽಮೇನಿಲ್ಲಂ ಕೂರ್ಮಽದೊಽಳೊಂದೇನೆಽ ಕೇಳೀರ್ಗಽಳುಂ||
ಮಾಧ್ಯಽಮಗಳಽನೇಕಂಗಽಳೊಽಳಂಗೆಽ ಬಾೞ್ವಽ
ಸಾಮರ್ಥ್ಯವಿಹುಽದುಽ ಕೂರ್ಮಂಗೆಽಮದರಿಂದದರಽ|
ಮಿದುಳುಽ ಪರಿಣಽತಽಮಹುದಲ್ತೆಽ ಮನುಜಽರಿಂಗಿಂ
ದೀರ್ಘಾಯುವಿಹುಽದುಽಮದರಿಂದೆಽ ಕಚ್ಛಽಪಂ ಕಾಣ್||
Beautiful armpits!
ಈಗಷ್ಟೆ ಕೂರ್ಮಂ ಪ್ರಸಾಧನಗೃಹಕ್ಕಂತೆ(Beauty Parlour)
ಪೋಗಿಬಂದಿಹುದು ಕಾಣಾ ಬೆಡಗನುಂ|
ಹೇಗೆ ತಾನೆತ್ತಿಹುದು ಆಹ! ಕತ್ರೀನಳೊಲು
ತೂಗುತ್ತೆ ತೋಳ್ಗಳನ್ನುಲ್ಲಾಸದಿಂ||
(https://www.youtube.com/watch?v=0yTHb2n8ugA)
I am not exactly looking forward to any value addition on this theme by fellow padyapaani-s!
ನಾವು ಯಾರೂ ಅತ್ತ ಮೂಸೋದಿಲ್ಲ, ಬಿಡಿ 🙂
ಹ್ಹಹ್ಹಹ್ಹ. ಈಗ ನಿಮ್ಮನ್ನು ಅಲ್ಲಿತನಕ ಸೆಳೆದುಕೊಂಡುಹೋದದ್ದು ಮತ್ತೇನೆನ್ನುವಿರಿ?
“ಪೂರ್ವಜನ್ಮದ ವಾಸನೆ”ಯೇ ಇರಬೇಕು
ಪಲವರೊರೆವಾಮೆ-ಮೊಲದೋಟದಾಟದ ಕತೆಯ
ಬಲು ಜವದ ಕಡು ಜಡದ ಪಂದ್ಯದೊಳು ಕಾಣ್
ಭಲರೆ ! ತೆವಳುತಲೆ ಮೊದಲಾಗಲದಕಂ ತೆಗೆದ
ಗೆಲುಮೊಗದ ನಿಲವಿರುವ ಭಾವಚಿತ್ರಂ!!
ಆಮೆ-ಮೊಲದ ಕಥೆಯ – “ಪಂದ್ಯ ಗೆದ್ದ ಆಮೆಯ ಹೆಮ್ಮೆಯ ಭಾವಚಿತ್ರ” (ನೀಲಿ ಹಿನ್ನಲೆಯಲ್ಲಿ) !! ಎಂಬ ಕಲ್ಪನೆಯಲ್ಲಿ.
#ಕನಸುಗಳೇ_ಹಾಗೆ!#
ಯಾರಾದರೇನದಕೆ ಯಾವ ಭೇದವು ಇರದು,
ತೋರಿಬಿಡುವುದು ಕನಸು, ವೈಚಿತ್ರ್ಯಗಳನು!
ನಾ ರಾಜನಾದಂತೆ ಮೊನ್ನೆ ಕನಸೊಂದರಲಿ,
ಹಾರುತಿದೆಯಾಮೆಯೂ ಹದ್ದಿನಂತೆ!!
✍️ಮಲ್ಲಿಭಾಗವತ…!
ಮಲ್ಲಿಭಾಗವತರಿಗೆ ಮತ್ತೊಮ್ಮೆ ಸ್ವಾಗತ. ಮಗದೊಮ್ಮೆ ಸ್ವಾಗತವಾದದ ಅವಶ್ಯಕತೆಯಾಗದಿರಲಿ. ಸತತವಾಗಿ ಪದ್ಯರಚನೆಯಲ್ಲಿ ತೊಡಗಿಕೊಳ್ಳಿ – ಮಾತ್ರ ವಾರಕ್ಕೊಮ್ಮೆಯಲ್ಲವೆ?
ಇದು ಕಡಲೋ ಬಾಂದಳವೋ
ಇದು ಮಗಿಲೋ ಸೂರ್ಯರಶ್ಮಿ ಮೇಲಾಡುವುದೋ
ಇದು ಕಚ್ಛಪವೋ ಖಗವೋ
ಇದು ಪಾಱಾಟಮೊಯಿದೀಸೊ ದಿಟವೇಂ ಸಟೆಯೇಂ
ಅಂದೇ ಬರೆದದ್ದನ್ನು ಇಂದಿನವರೆಗೂ ಹಾಕದಿದ್ದರೂ ಕೊಂಚವೂ ಮಾಗದಿ ಇದೆ.
ಇದು ಕಾವ್ಯಮೋ ಶಾಸ್ತ್ರಮೋ ಅನುಮಾನಮೋ (Inference) ಸಂದೇಹಮೋ (Doubt)?
ಶಂಕಾಲಂಕಾರವೆನ್ನೋಣವೆ?
ಆಗಬಹುದು. ಆ ಶಬ್ದದಲ್ಲಿ ಶಂಖ ಇದೆ, ಕಾಲು ಇದೆ, ಲಂಕೆ ಇದೆ, ಖಾರ ಇದೆ, ರವೆ ಇದೆ, ನೊಣ ಇದೆ, ನವೆ ಇದೆ! ವಸ್ತುತಃ ನಿಮ್ಮ ಪದ್ಯವು ಸಸಂದೇಹಾಲಂಕಾರದಲ್ಲಿದೆ.