Jul 082019
 

  18 Responses to “ಪದ್ಯಸಪ್ತಾಹ ೩೬೬: ಚಿತ್ರಕ್ಕೆ ಪದ್ಯ”

  1. ಮಂದಗಮನಮಂ ಪೊಂದಿರೆ
    ನೊಂದು, ನಭದೆ ಪಾರ್ದು ಪಕ್ಕಿಯಂತಾಗಲ್, ಬಲ್- |
    ಚಂದದ ಕನಸಂ ಕಂಡ-
    ತ್ತಿಂದಿರೆಯಾಣ್ಮನವತಾರಮಾದೀ ಕೂರ್ಮಮ್ ||

    • ಚೆನ್ನಾಗಿದೆ, ಹೇಗಿದೆ ನಿಮ್ಮ ಹೊಸಮನೆ 🙂

      • ಧನ್ಯವಾದಗಳು. ಹೊಸಮನೆ ಚೆನ್ನಾಗಿದೆ. ನಿಮ್ಮನ್ನು ಕಾಣಲಿಲ್ಲವಲ್ಲ?

        • ಅವರು ನಾಲ್ಕನೆಯ ಮಹಡಿಯ ತಾರಸಿಯಲ್ಲಿದ್ದರು, ನೀವು ನೆಲಮಾಳಿಗೆಯಲ್ಲಿದ್ದಿರಿ. ಸಂಪರ್ಕವಾಗಲಿಲ್ಲ ಅಷ್ಟೆ 🙂

  2. ಪುಕ್ಕಮುಳಿದ ಕೊಕ್ಕನುಳಿದ
    ಪಕ್ಕಿಯ ಪಾಂಗಿಂದೆ ನಭಕೆ ಕಚ್ಛಪನೆಸೆಗಲ್
    ಪುಕ್ಕತನದ ಕವಚಮುಳಿದು
    ತಕ್ಕುದು ಬಾನ್ ರೆಂಕೆಗೈಗೆನುತೆ ಮೆರೆದಪನಯ್

    ಕವಚಮುಳಿದು – ಕವಚದಿಂದಾಚೆ ಬಂದು

  3. ಬುವಿಯೊಽಳುಽ ಮಾತ್ರಽಮೆಽ ನಡೆಯಽಬಲ್ಲನುಮಾಗಽಸದೆ ಮಾತ್ರಽಮುಸಿರಾಡಽಬಲ್ಲಽ ಮನುಜಂ
    ನೀರೊಽಳುಽ ಮೇಣಿಂದೆಽ ಬುವಿಯೊಽಳುಽಮುಸಿರಾಡಽಬಲ್ಲಽದುಽ ಆಮೆಽಯುಽಮಾವಽಗಂ ಕೇಳ್|
    ಈಜಿರ್ದೊಽಡೇನಾತಽನಾಗಾಗಽ ಶಿರವನ್ನುಽ ಮೇಲಕ್ಕೆತ್ತಲುಬೇಕುಽ ಉಚ್ಛ್ವಾಸಽಕಂ
    ಈಜೇನುಽ ನಡೆಯೇನುಽ ವೈಶಿಷ್ಟ್ಯಽಮೇನಿಲ್ಲಂ ಕೂರ್ಮಽದೊಽಳೊಂದೇನೆಽ ಕೇಳೀರ್ಗಽಳುಂ||
    ಮಾಧ್ಯಽಮಗಳಽನೇಕಂಗಽಳೊಽಳಂಗೆಽ ಬಾೞ್ವಽ
    ಸಾಮರ್ಥ್ಯವಿಹುಽದುಽ ಕೂರ್ಮಂಗೆಽಮದರಿಂದದರಽ|
    ಮಿದುಳುಽ ಪರಿಣಽತಽಮಹುದಲ್ತೆಽ ಮನುಜಽರಿಂಗಿಂ
    ದೀರ್ಘಾಯುವಿಹುಽದುಽಮದರಿಂದೆಽ ಕಚ್ಛಽಪಂ ಕಾಣ್||

  4. Beautiful armpits!
    ಈಗಷ್ಟೆ ಕೂರ್ಮಂ ಪ್ರಸಾಧನಗೃಹಕ್ಕಂತೆ(Beauty Parlour)
    ಪೋಗಿಬಂದಿಹುದು ಕಾಣಾ ಬೆಡಗನುಂ|
    ಹೇಗೆ ತಾನೆತ್ತಿಹುದು ಆಹ! ಕತ್ರೀನಳೊಲು
    ತೂಗುತ್ತೆ ತೋಳ್ಗಳನ್ನುಲ್ಲಾಸದಿಂ||
    (https://www.youtube.com/watch?v=0yTHb2n8ugA)
    I am not exactly looking forward to any value addition on this theme by fellow padyapaani-s!

    • ನಾವು ಯಾರೂ ಅತ್ತ ಮೂಸೋದಿಲ್ಲ, ಬಿಡಿ 🙂

      • ಹ್ಹಹ್ಹಹ್ಹ. ಈಗ ನಿಮ್ಮನ್ನು ಅಲ್ಲಿತನಕ ಸೆಳೆದುಕೊಂಡುಹೋದದ್ದು ಮತ್ತೇನೆನ್ನುವಿರಿ?

  5. ಪಲವರೊರೆವಾಮೆ-ಮೊಲದೋಟದಾಟದ ಕತೆಯ
    ಬಲು ಜವದ ಕಡು ಜಡದ ಪಂದ್ಯದೊಳು ಕಾಣ್
    ಭಲರೆ ! ತೆವಳುತಲೆ ಮೊದಲಾಗಲದಕಂ ತೆಗೆದ
    ಗೆಲುಮೊಗದ ನಿಲವಿರುವ ಭಾವಚಿತ್ರಂ!!

    ಆಮೆ-ಮೊಲದ ಕಥೆಯ – “ಪಂದ್ಯ ಗೆದ್ದ ಆಮೆಯ ಹೆಮ್ಮೆಯ ಭಾವಚಿತ್ರ” (ನೀಲಿ ಹಿನ್ನಲೆಯಲ್ಲಿ) !! ಎಂಬ ಕಲ್ಪನೆಯಲ್ಲಿ.

  6. #ಕನಸುಗಳೇ_ಹಾಗೆ!#
    ಯಾರಾದರೇನದಕೆ ಯಾವ ಭೇದವು ಇರದು,
    ತೋರಿಬಿಡುವುದು ಕನಸು, ವೈಚಿತ್ರ್ಯಗಳನು!
    ನಾ ರಾಜನಾದಂತೆ ಮೊನ್ನೆ ಕನಸೊಂದರಲಿ,
    ಹಾರುತಿದೆಯಾಮೆಯೂ ಹದ್ದಿನಂತೆ!!
    ✍️ಮಲ್ಲಿಭಾಗವತ…!

    • ಮಲ್ಲಿಭಾಗವತರಿಗೆ ಮತ್ತೊಮ್ಮೆ ಸ್ವಾಗತ. ಮಗದೊಮ್ಮೆ ಸ್ವಾಗತವಾದದ ಅವಶ್ಯಕತೆಯಾಗದಿರಲಿ. ಸತತವಾಗಿ ಪದ್ಯರಚನೆಯಲ್ಲಿ ತೊಡಗಿಕೊಳ್ಳಿ – ಮಾತ್ರ ವಾರಕ್ಕೊಮ್ಮೆಯಲ್ಲವೆ?

  7. ಇದು ಕಡಲೋ ಬಾಂದಳವೋ
    ಇದು ಮಗಿಲೋ ಸೂರ್ಯರಶ್ಮಿ ಮೇಲಾಡುವುದೋ
    ಇದು ಕಚ್ಛಪವೋ ಖಗವೋ
    ಇದು ಪಾಱಾಟಮೊಯಿದೀಸೊ ದಿಟವೇಂ ಸಟೆಯೇಂ

    ಅಂದೇ ಬರೆದದ್ದನ್ನು ಇಂದಿನವರೆಗೂ ಹಾಕದಿದ್ದರೂ ಕೊಂಚವೂ ಮಾಗದಿ ಇದೆ.

    • ಇದು ಕಾವ್ಯಮೋ ಶಾಸ್ತ್ರಮೋ ಅನುಮಾನಮೋ (Inference) ಸಂದೇಹಮೋ (Doubt)?

      • ಶಂಕಾಲಂಕಾರವೆನ್ನೋಣವೆ?

        • ಆಗಬಹುದು. ಆ ಶಬ್ದದಲ್ಲಿ ಶಂಖ ಇದೆ, ಕಾಲು ಇದೆ, ಲಂಕೆ ಇದೆ, ಖಾರ ಇದೆ, ರವೆ ಇದೆ, ನೊಣ ಇದೆ, ನವೆ ಇದೆ! ವಸ್ತುತಃ ನಿಮ್ಮ ಪದ್ಯವು ಸಸಂದೇಹಾಲಂಕಾರದಲ್ಲಿದೆ.

Leave a Reply to ಜೀವೆಂ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)