Aug 192019
 

  23 Responses to “ಪದ್ಯಸಪ್ತಾಹ ೩೭೨: ಚಿತ್ರಕ್ಕೆ ಪದ್ಯ”

  1. The David sculpture created by man shall endure and be applauded for ever and ever. But when God makes a replica of one of his own creations, it vanishes in a split second. Whose work is more profound?

    ದೇವಾ,
    ನೋಡಾ ಡೇವಿಡನುಕೃತಿಪ್ರಕೌಶಲಂ ತಾಂ
    ಈಡೈ ಶಂಸನಕದುಮೆಂದಿಗುಂ ನಿತಾಂತಂ|
    ತೀಡೇಂ ನೀಂ ನಭದೊಳು ನಿನ್ನ ಸರ್ಗ*ದೊಲ್ ಕಾಣ್ (* Creation viz. a lion)
    ಬಾಡಿತ್ತೊಂದರೆಚಣದೊಳ್, ಮನುಷ್ಯನೇ ಮೇಲ್|| ಪ್ರಹರ್ಷಿಣಿ

  2. Before God created the lion…
    ಸಂಕಲ್ಪಿತವಲ್ಲದ ಯಾವುದಾದರೂ ’ಕಲ್ಪನೆ’ಯು ಒರೆದ ಪದ್ಯದಲ್ಲಿ ನುಸುಳಿದೆಯೆ ಎಂದು ನಿರುಕಿಸುವ ಕವಿಯಂತೆ, ದೇವನೂ ತನ್ನ ಸೃಷ್ಟಿಯಲ್ಲಿ ಯಾವುದಾದರೂ ನವ’ಕಲ್ಪ’ಕ್ಕೆ ಆಕರಗಳಿವೆಯೇ ಎಂದು ಹುಡುಕಿದಾಗ ಕಂಡದ್ದು ಇದು.

    ಇರುವುದೇನೆನುತಪೂರ್ವಯೋಜಿತಂ
    ಬರೆದ ಪದ್ಯದೊಳು ಕಲ್ಪನಾಂತರಂ|
    ನಿರುಕಿಪಂತೆ ಕವಿ, ನೈಜಸೃಷ್ಟಿಯೊಳ್
    (Screening)ವರಣಿಪಂ ದಿವಿಜನನ್ಯಕಲ್ಪಮಂ|| ಮತ್ತಕೋಕಿಲ/ ಪ್ರಿಯಂವದಾ

    • ಚೆನ್ನಾದ ಕಲ್ಪನೆ

    • ಧನ್ಯವಾದ ಸೋಮ. ’ಅಸಂಕಲ್ಪಿತಕಲ್ಪನೆ’ ಎಂಬುದಕ್ಕೆ ಐಡಿಯ ಎಲ್ಲಿಯದು ಎಂದರೆ, ಹಿಂದೆ ಕಲ್ಯಾಣನಗರದಲ್ಲಿ ನಡೆದ ಗಣೇಶರ ಅಷ್ಟಾವಧಾನದಲ್ಲಿ ನಾನು ದೇವರ್, ತಮ್ಮ, ವೈನಿ, ಅಕ್ಕ ಎಂಬ ದತ್ತಪದಗಳನ್ನಿತ್ತು ಅಣುಕುಟುಂಬವನ್ನು (Nuclear family) ವರ್ಣಿಸಬೇಕೆಂದು ಕೇಳಿದ್ದೆ. ನನ್ನ ಪದ್ಯಸಾರಾಂಶವೆಂದರೆ, ಹೆತ್ತವರನ್ನು ಕಾಣುವುದೇ ದೊಡ್ಡದೆನಿಸಿರುವ ಈ ಕಾಲದಲ್ಲಿ, ನಮ್ಮವರು ಎಂದು ಇನ್ಯಾರನ್ನು ಹೇಳಿಕೊಳ್ಳುವುದು? ಕುಟುಂಬವೊಂದಕ್ಕೆ ಒಂದೇ ಮಗು ಎಂದು ನೆಲೆಯಾಗಿರುವುದರಿಂದ, ಅದಕ್ಕೆ ಆಚೀಚೆ ಅಣ್ಣ-ತಮ್ಮ-ಅಕ್ಕ-ತಂಗಿಯರಿಲ್ಲ. ಅದರ ಮುಂದಿನ ತಲೆಮಾರಿಗೆ ಅತ್ತೆ-ಮಾವ-ಚಿಕ್ಕಪ್ಪ/ಮ್ಮ-ದೊಡ್ಡಪ್ಪ/ಮ್ಮ ಯಾರೂ ಇಲ್ಲ. ಹಾಗಾಗಿ ಎಲ್ಲ ಸಂಬಂಧಗಳನ್ನು ನೆರೆಹೊರೆಯವರಲ್ಲೇ ಕಂಡುಕೊಳ್ಳಬೇಕು:
      ’ಪೆತ್ತಿರ್ಪ’ರಂ ಕಾಂ’ಬುವ’’ದೇ ವರ’ಪ್ರದಂ
      ಮತ್ತಾರು ’ತಮ್ಮಾತ’ನೆನುತ್ತೆ ಪೇಳ್ವರೈ| (ತಮ್ಮಾತ> ’ತಮ್ಮ’, ’ಮಾತ’)
      ಅತ್ತಿತ್ತ ’ಭ್ರಾತ್ರ’ರ್ ನಿನಗಿಲ್ಲ’ವೈ ನಿ’ಜಂ
      ಚಿತ್ತಾರಬಂಧಂ ನಿನ’ಗಕ್ಕ’’ಪಕ್ಕ’ದೊಳ್||
      ಪದ್ಯರಚನೆಯಾದ ಮೇಲೆ ಈ ನಾಲ್ಕಲ್ಲದೆ ಇನ್ನಾವುದಾದರೂ ಸಂಬಂಧಸೂಚಕಪದಗಳು ನುಸುಳಿವೆಯೆ ಎಂದು ನೋಡಿದಾಗ, ಮತ್ತೈದು ಸಿಕ್ಕವು – ಪೆತ್ತರ್, ಬುವ, ಮಾತ, ಭ್ರಾತ್ರರ್, ಅಕ್ಕ (ಅಕ್ಕಪಕ್ಕ ಎಂಬುದರಲ್ಲಿ ಎರಡು ಅಕ್ಕಗಳಿವೆ).

  3. ಕುಂಭೋಧರನಾಣತಿಯಂ
    ತಾಂ ಭರಿಸಲ್ ನೋಳ್ದಪಂತೆಯುಂ, ಯಾತ್ರೆಯನಾ-
    ರಂಭಿಸೆ ಬೆನ್ನಂಗೊಡುವ ನಿ-
    ಕುಂಭಂ ಮೃಡನಂ ನಿರೀಕ್ಷಿಪಂತೆಯುಮಿರ್ಕುಂ

    They resemble both kumbhodhara and nikumbha lions who serve Shiva

  4. ಕಾಲಾಂಭೋದದಿನುಣ್ಮಿದೊಂದು ಸಿಡಿಲೆಂಬಂತಾಡಿ ಪಂಚಾನನಂ
    ನೀಲಾಕಾಶವಿಶಾಲಕುಂಭಮನೆಸೀಳ್ದೋರಂತೆ ವಾರಾಶಿಯಂ
    ಮೇಲಿಂ ಶುಕ್ತಿಸಮೂಹಕೊಲ್ದೆರೆಯಲಾದತ್ತಾ ಲಸನ್ಮೌಕ್ತಿಕಂ
    ಲೀಲಾಖೇಲಮನಿಂತು ಬಣ್ಣಿಸಿದಪೆಂ ಸೋಮಣ್ಣ ಕೈಕೊಳ್ಳಿರೇಂ?

    • ನಿಮ್ಮ ಪದ್ಯಲಸನ್ಮೌಕ್ತಿಕಮಂ ಕೊಳ್ಳಿರೆನುವಿರೇಂ?:)

      ನೀವು ಇದನ್ನು ವಿಶೇಷಾಕೃತಿಯ ಮುಗಿಲೆಂದು ಪರಿಗಣಿಸದೆಯೇ ಬರೆದಿದ್ದೀರಲ್ಲವೇ? ಬಹಳ ಚೆನ್ನಾಗಿದೆ ಪದ್ಯ

      • ಸಿಂಗವೇ ಮುಗಿಲು, ಮುಗಿಲೇ ಸಿಂಗವೆಂದಾಗ ಅವುಗಳ ಆಟವೂ ಒಂದೇ ಇರಬೇಕಲ್ಲವೇ? ಅದ್ವೈತಿಗಳಾದ ನೀವು “ವಿಶೇಷಾಕೃತಿಯ ಮುಗಿಲು” ಎಂದು ಭೇದವನ್ನು ಹೇಳಿತ್ತೀರಿ; ಭೇದವನ್ನು ಒಪ್ಪುವ ತತ್ತ್ವ ವಾದಿಯಾದ ನಾನು ಅಭೇದವನ್ನು ಹೇಳಿತ್ತಿದ್ದೇನೆ. ಏನಂತೀರಿ? 🙂 ನಲ್ನುಡಿಗಳಿಂ ಧನ್ಯಂ.

  5. ಕಲಕಿ ಕಡಲೊಡಲಾದುದಾಲೋಡನದೊಳುಕ್ಕಿ
    ನಲಿದಲೆದು ಬೀಳುತೇಳುತೆ ಕಲಿಯುತುಂ
    ನೆಲೆಗಾಣದೆಲ್ಲೆಮೀರದಲೆ ಬಿಳು ಬೆಳಕಿನೊಳ್
    ಕಲೆತಲೆಯ “ಸಿಂಹಾವಲೋಕನ”ವಿದೇಂ ?!

  6. ಜಾಯೆಯಡಗಿರಲ್ ಹಿಮದೊಳ್-
    ಮೀಯುದುದಲಕೆಯೊಳಗಂ ಪ್ರಣಯಪದಗಳೊಳುಂ
    ಮಾಯೆಯೊಳುಂ ಯಕ್ಷಕೊರೆದ
    ರಾಯಸವಂ ಪೊತ್ತ ಮೇಘದೂತನಿವನೆನೇಂ?

    • ದಯವಿಟ್ಟು ವಿವರಿಸಿ. ಮೀಯುದುದು?

      • ಹಿಮದಲ್ಲಿ ಮಿಂದ ಅಲಕಾ ನಗರಿಯಲ್ಲಿರುವ ಹೆಂಡತಿಗೆ ಯಕ್ಷ ಬರೆದ ಪತ್ರವನ್ನು ಹೊತ್ತೊಯ್ದ ಕಾಳಿದಾಸನ ಮೇಘದೂತನಂತೆ ಈ ಚಿತ್ರ ಕಾಣುವುದೆನಿಸಿ ಬರೆದ ಪದ್ಯ . ಮೀಯು = ಒದ್ದೆಯಾಗು …???

    • • (ಮೀಯು)’ದುದು’ ಏನೆಂದು ಅರ್ಥವಾಗಲಿಲ್ಲ.
      • ಕಂದಕ್ಕೆ ಪೂರ್ತಿ ಹಳಗನ್ನಡವೇ ಆಗಬೇಕು. ಯಕ್ಷಕೊರೆದ ಎಂಬುದು ಅರಿಸಮಾಸವಾಗುತ್ತದೆ ಇಲ್ಲವೆ ಯಕ್ಷಕೆ+ಒರೆದ ಎಂದಾಗುತ್ತದೆ. ನಿಮ್ಮ ಆಶಯ ’ಯಕ್ಷಂ ಕೊರೆದ’ ಎಂದಲ್ಲವೆ?
      • ಮಾಯೆಯೊಳುಂ/ಪದಗಳೊಳುಂ ಎಂದರೆ ಮಾಯೆಯೊಳೂ/ಪದಗಳೊಳೂ ಎಂದಾಗುತ್ತದೆ. ಮಾಯೆಯೊಳಂ/ಪದಗಳೊಳಂ ಎಂದಾಗಬೇಕು.
      • ದೂತನಿವನೆನೇಂ – ಇದರ ವಿಗ್ರಹ ಹೇಗೆ?
      ಹೀಗೊಂದು ನನ್ನ ಸವರಣೆ. ಇದರಲ್ಲಿ ಸ್ಪಷ್ಟತೆಯು ಸೊರಗಿದ್ದರೆ ದಯವಿಟ್ಟು ತೋರಿಸಿ:
      ಜಾಯೆಯಿರಲ್ ಹಿಮದೊಳಗೇಂ
      ಮೀಯುತಿಹಲಕೆಯೊಳಗಂ, ಪ್ರಣಯಪದಗಳೊಳಂ|
      ಮಾಯೆಯಿನಾ ಯಕ್ಷನೊರೆದ
      ರಾಯಸವಂ ಪೊತ್ತ ಮೇಘದೂತನಿವನೆ ದಲ್||

      ’ಹಿಮದೊಳಗೇಂ ಮೀಯುತಿಹ’ ಎಂದರೆ ’ಅದೇಂ (ವೈಭವದಿಂ) ಹಿಮದೊಳ್ ಮೀಯುತಿಹ’

      • ಸವರಣೆಗೆ ಅನೇಕಾನೇಕ ಧನ್ಯವಾದಗಳು ಮೇಷ್ಟ್ರೇ. ಮತ್ತಷ್ಟು ಅಭ್ಯಾಸಿಸಿ ಬರೆಯುವುದಕ್ಕೆ ಪ್ರಯತ್ನಿಸುವೆ.

        • ಇದನ್ನು ನಾನು ಸೌಜನ್ಯದಿಂದೇನೂ ಹೇಳುತ್ತಿಲ್ಲ: ’ಮೇಷ್ಟ್ರೇ’ ಎನ್ನಬೇಡಿ, ಏಕೆಂದರೆ ನಾನೂ ಅಭ್ಯಾಸಿಯೇ, ಹವ್ಯಾಸಿಯೇ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)