Aug 262019
 

ಪ್ರಹರ್ಷಿಣಿ ಛಂದಸ್ಸಿನ ಸಮಸ್ಯೆ :

ತಾಲಾಂಕಂ ಕರಿದೆನಿಸಿರ್ದನಲ್ತೆ ಮೆಯ್ಯಿಂ

(ಬಲರಾಮ ಕಪ್ಪು ಬಣ್ಣದ ಮೆಯ್ಯಿನವನು )

  5 Responses to “ಪದ್ಯಸಪ್ತಾಹ ೩೭೩: ಸಮಸ್ಯಾಪೂರಣ”

  1. ಮೇಲಾರಂಬದ ಪರಿಯಿಂತು ಕಾಯಕಂ ಭೂ-
    ಕೈಲಾಸಂ ಗಡ! ಬಿಸಿಲೊಳ್ ಬಳಲ್ದು ಬೇಯ್ದುಂ |
    ಕಾಲೀನಂ, ಕಲಿಯುಗದೊಳ್ ಹಲಾಯುಧಂ ತಾಂ
    ತಾಲಾಂಕಂ ಕರಿದೆನಿಸಿರ್ದನಲ್ತೆ ಮೆಯ್ಯಿಂ !!

    ಕಾಲೀನಂ = ಕಾಲಕ್ಕೆ ಸಂಬಂಧಿಸಿದ ಪೂರಣ , ಕಲಿಯುಗದಲ್ಲಿ ಕೈಗೊಂಡ ಆರಂಬ(= ಕೃಷಿ)ಯ ಪ್ರಭಾವ !!

  2. ಮೇಲೆೇರ್ದುಂ ಘಟನವನೀತಕೆಂದೆ ಕೃಷ್ಣಂ
    ಬೀಳಲ್ಕೊಳ್ಮೊಸರಿನೊಳಾರ್ದ್ರಗೇಹಮಾಯ್ತಯ್
    ನೀಲಾಂಗಕ್ಕೊಸರಿದ ಬೆಳ್ಪಿನಿಂದೆ ನೋಡಲ್
    ತಾಲಾಂಕಂ ಕರಿದೆನಿಸಿರ್ದನಲ್ತೆ ಮೆಯ್ಯಿಂ

  3. ತಾಲಾಂಕ = ಹಾಡುವಾಗ ತೊಡೆಯಮೇಲೆ ತಾಳತಟ್ಟುವವನು = ಗಾಯಕ. ಅವನು ಕಪ್ಪೂ ಇರಬಹುದು ಬೆಳ್ಳಗೂ ಇರಬಹುದು, ನಡುವಣ ಯಾವ ಬಣ್ಣದವನೂ ಇರಬಹುದು. ‘ಗಾಯಕನು ಕಪ್ಪಗಿದ್ದಾನೆ’ ಎಂದು ಕುಹಕವಾಡುವ ಹಿರಿಯರು ಬಾಲಿಶರೇ ಸರಿ.

    ಆಲಾಪಂ ಮುಳುಗಿಸೆ ಪಾಡುವಾತನಂ ದಲ್
    ಲೀಲಾಜಾಲದೆ ಕರದಿಂದೆ ತಾಳತಟ್ಟಲ್|
    “ತಾಲಾಂಕಂ ಕರಿದೆನಿಸಿರ್ದನಲ್ತೆ ಮೆಯ್ಯಿಂ”
    ಬಾಲರ್ಗಳ್ ಪಿರಿಯರೆನಿಪ್ಪರಿಂತು ಪೇಳಲ್||

  4. ತಮಿಳರು ಕಪ್ಪು ಎಂದಾದರೆ, ಅಲ್ಲಿಂದ ದಕ್ಷಿಣಕ್ಕೆ ಈಕ್ವೇಟರಿಗೆ ಇನ್ನೂ ಹತ್ತಿರವಿರುವ ಲಂಕಾನಿವಾಸಿಗಳು ಇನ್ನೂ ಕಪ್ಪಲ್ಲವೆ? (ಪೌಲಸ್ತ್ಯ = ರಾವಣ. ಊಷ್ಮ = ಬೇಸಗೆ. ಆ ಲಾಂಕಂ = ಒಬ್ಬಾನೊಬ್ಬ ಲಂಕಾವಾಸಿ)
    ಆಲೇಪಂ ತನುವದೊ ಇದ್ದಿಲಿಂದಲೆಂಬೊಲ್
    ನೀಲಂ ತಾಮಿರೆ ತಮಿಳರ್ಗಳೆಲ್ಲರಿನ್ನುಂ|
    ಪೌಲಸ್ತ್ಯಂ ಮೆರೆದೆಡೆ ಘೋರಮೂಷ್ಮಮೈ ಇಂ-
    ತಾ ಲಾಂಕಂ ಕರಿದೆನಿಸಿರ್ದನಲ್ತೆ ಮೆಯ್ಯಿಂ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)