ಸಾಮಾನ್ಯವಾಗಿ ಹೂವಿನಲ್ಲಿ ಪರಾಗಸ್ಪರ್ಶಕ್ರಿಯೆಯು ಅದು ಗಿಡ/ಮರದಲ್ಲಿದ್ದಾಗಲೇ ಆಗುತ್ತದೆ. ತದನಂತರ ಪರಾಗಸ್ಪರ್ಶಿಯನ್ನು (Pollinator) ಆಕರ್ಷಿಸಿದ ದಳಗಳು ಉದುರಿ, ಪುರುಷಾಂಗಗಳು ಲಯಗೊಂಡು, ಅಂಡಾಣುವು ಹಣ್ಣಾಗಿ ಮಾಗಿ ಕಳಚಿಕೊಂಡು ಬೀಜವು ಭೂಮಿಯನ್ನು ಸೇರಿ ನವಸಸ್ಯಾಂಕುರವಾಗುತ್ತದೆ, ಸಂತಾನವೃದ್ಧಿಯಾಗುತ್ತದೆ. ಸಸ್ಯಜಗತ್ತಿನಲ್ಲಿ ಅಪವಾದಗಳು ಹೆಚ್ಚು ಇವೆ. ಇದ್ಯಾವುದೋ ಹೂವು ತಾನೇ ಸಸ್ಯದಿಂದ ಕಳಚಿಕೊಂಡು, ಅದರಲ್ಲಿನ ಬೀಜವು ಭೂಮಿಯನ್ನು ಅರಸಿ ಹೊರಟಿದ್ದು, ನೀರೆಯೊಬ್ಬಳು ಕೈಬೀಸಿ ಅದನ್ನು ಹಿಡಿದುಕೊಂಡಾಗ ಅದು “ನನ್ನ ಪ್ರೇಯಸಿ ಭೂಮಿ. ನೀನಲ್ಲ. ನನ್ನನು ಬಿಡು.” ಎಂದಿತು.
ಪಾರುತೈದಿರಲು ಪೂವು ಸೇರೆ ತಾಂ
ಧಾರಿಣೀತಲವ ವಂಶವೃದ್ಧಿಗಂ|
ನೀರೆ ಬೀಸುತಲಿ ಕೈಯ ಕೊಂಡಿರಲ್
“ಜಾರನಲ್ಲ ಬಿಡು ನನ್ನ”ನೆಂದಿತೈ|| ರಥೋದ್ಧತ

ಒಂಟಿಹಡಗು ಸಿಕ್ಕೊಡನದನೇಕೋ
ತಂಟೆಯ ಗೈಯುವೆ ತಸ್ಕರೆನೆ|
ಸೊಂಟವು ಸೋತಿರೆ ಒಂಟಿಯಿರುವೆಯೇಂ
ನಂಟನು ಬೇಡವೆ ನಿಗವಹಿಸಲ್|| ಚತುರ್ಮಾತ್ರಾ
ಎಷ್ಟೇನು ಹೆರೆದರೇಂ ತರಕುಳಿದು ಮುಖದಲ್ಲಿ
ತುಷ್ಟಿಯಾಗುವವರಂ ವಪನಗೈದೇಂ|
ಹೃಷ್ಟಭಾವವದೊಂದೆ ಚಣವು, ಮಾರೆಸಗಬೇ-
ಕಿಷ್ಟ ನಾಳೆಯೊಳೆಂಬರಿವು ಮರುಚಣಂ|| ಪಂಚಮಾತ್ರಾ
ಹಾರಿಬಂದ ಹೂವು
ಪಾರಿಬಂದುದೊ ಭೀಮನಾ ನಲ್ಮೆಯಂ ಪೇಳೆ
ಪಾರಿಬಂದುದೊ ಧುರದೆ ನೆರವನೀಯಲ್
ಪಾರಿಬಂದುದೊ ಮಾರುತಿಯ ಬಲ್ಮೆಯಂ ತೋರೆ
ಪಾರದಿರ್ದನೊ ಯಮಜನಿಂಥ ಪೂವಂ
– ಸೌಗಂಧಿಕಾಪುಷ್ಪಪ್ರಕರಣ
ಅಡಿಗಡಿಗೆ ಮುಗಿಲಹಿಂಬದಿಯೊಳಡಗುತೆ ಕದಿವ-
ನೊಡನಾಡಿ ತಸ್ಕರಂ ಗಡ ಭಾಸ್ಕರಂ !
ಕಡಲೊಡಲ ಜಲವನಿಂಗಿಸಿ ಪೀರ್ವವಂ ದಿಟದೆ
ಪಡೆಪುಗಾರಂ, ಕಡಲ್ಗಳ್ಳನುಂ ತಾಂ !!
ಮೋಡದ ಮರೆಯಲ್ಲಿ ಅಡಗಿ, ಕಡಲ ನೀರನ್ನು ಕದ್ದು ಸಂಪಾದಿಸುವವ(ಪಡೆಪುಗಾರ) – “ಸೂರ್ಯ”
ದಿಟದೆ “ಕಡಲ್ಗಳ್ಳ” ಅಲ್ಲವೇ ?!
ಒಳ್ಳೆ ಕಲ್ಪನೆ (ಪೀರ್ವವಂ ~ ಪೀರುವಂ)
ಧನ್ಯವಾದಗಳು ಪ್ರಸಾದ್ ಸರ್,
ಅಡಿಗಡಿಗೆ ಮುಗಿಲಹಿಂಬದಿಯೊಳಡಗುತೆ ಕದಿವ-
ನೊಡನಾಡಿ ತಸ್ಕರಂ ಗಡ ಭಾಸ್ಕರಂ !
ಕಡಲೊಡಲ ಜಲವನಿಂಗಿಸಿ ಪೀರುವಂ ದಿಟದೆ
ಪಡೆಪುಗಾರಂ, ಕಡಲ್ಗಳ್ಳನುಂ ತಾಂ !!
Bay reclamation ಕಡಲ್ಗಳ್ಳರು
ಮಿತಿಯುಂಟೆ ನಾಗರಿಕರಿಂಗಿರುವ ಭೂದಾಹ-
ಕತಿಶಯದೆ ಶ್ರಮಿಪರ್ ನಿವೇಶನಕ್ಕಂ|
ಕುತಕವಿದು ನೋಡೆ ಖಾರಿಯೊಳಂಗೆ ತುಂಬುತೆ ಸಿ-
ಕತವನ್ನು ದಡವ ಹಿಗ್ಗಿಸುವರಲ್ತೆ||