Sep 092019
 

  4 Responses to “ಪದ್ಯಸಪ್ತಾಹ ೩೭೫: ಚಿತ್ರಕ್ಕೆ ಪದ್ಯ”

  1. ಹಿಮಾಂಶುವಂ ಸಾರ್ದಪ ಮಾನವೇಪ್ಸೆಗಂ
    ಸಮಾಹಿತಂ ಸಾಧನನೌಕೆ ಜನ್ನದಿಂ-
    ದೆ ಮಾಪನಂ ಗೆಯ್ಯಲಸಾಧ್ಯವೃತ್ತಿಯಂ
    ಪ್ರಮೇಯಮಂ ಸೂಚಿಪುದಿಂದು ಬೇಡುವೆಂ

    ವೃತ್ತಿ – course

  2. The scars on the face of the moon do not make it ugly. The lander Vikram is like a earstud to one side (South pole). Let a similar lander be sent to adorn the other ear.

    ಪೃಥ್ವೀಯಲ್ಲಿ ಗರ್ಭೀಕರಿಸಿದ ಜಲೋದ್ಧತ (The first 12 letters)

    ಸದಾ (Moon)ಸುಮನೊಳಿದ್ದೊಡೇಂ (Scars)ಕಿಣಗಳುಂ/ ಸುಶೋಭಂ ವಲಂ
    ಮುದಾವಹವು ಸಿಂಗರಂ ಮೊಗಕೆ ಕಾಣ್/ ಸೊಗಯ್ಸಿಪ್ಪುದೈ|
    ಚಿದಾಕೃತಿಯ ’ವಿಕ್ರಮಂ’ ಬಿಡಿಯಿರಲ್/ ಗಡಾ ಕರ್ಣದೊಳ್
    ಪ್ರದೀಪ್ತದುಪಕುಂಡಲಂ ಪೊರಡಲೈ/ ಪರಕ್ಷೋತ್ರಕಂ (ಪರ=another, ಕ್ಷೋತ್ರ=ear)||

  3. ಕೈಸೊಡರಂತವನಿಗವಂ
    ಕೈಸಾರೆಯೊಳಿರ್ಪ ಪೂರ್ಣ ಚಂದಿರನಂ ಕಾಣ್
    ಕೈಸನ್ನೆಯದಿಂತು ಮನುಜ
    ಕೈಸೆರೆವಿಡಿದುದವಗಂ ಗಡಾ ಪರಿಕಿಸಲುಂ !!

    ಕೈಸಾರೆಯೊಳಿರ್ಪ= ಕೈಗೆಸಿಗುವಂತಿರುವ/ಸಮೀಪದಲ್ಲಿಯೇಇರುವ
    ಭುವಿಯ ದೀಪ – “ಚಂದಿರ” – ಅವನನ್ನು ಸೆರೆಹಿಡಿದು ಶೋಧಿಸುವ ಮನುಜನ ಕೈಸನ್ನೆ ಕಂಡ ಕಲ್ಪನೆ !!

  4. ನೆರಳುಬೆಳಕಿನದಾಟವಾಡಿ ದುಂಡನೆ ಚೆಂಡ-
    ನುರುಳಿಬಿಟ್ಟಿರುದು ದಿನಕರನು ತಾನೆ !
    ಮರುಳು ಮನುಜನದಾಸೆ ತೀರೆ ದಂಡಿಸೆ ಚಂದ್ರ-
    ಗುರುಳಕಟ್ಟಿದುದಾವ ಕರವೊ ಕಾಣೆ ?!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)