Sep 162019
೧. ಕಂದ ಪದ್ಯದ ಸಮಸ್ಯೆ:
ನೆಲದಾಳದೆ ಬಳೆಯದಲ್ತೆ ನೆಲಗಡಲೆ ಸದಾ
೨. ಉತ್ಪಲಮಾಲೆಯ ಸಮಸ್ಯೆ:
ಚೌತಿಯ ಚಂದ್ರನೆಡ್ಡಮಿರೆ ದೋಸಮದೆಂದಿಗುಮಾಗದಾವಗಂ
೧. ಕಂದ ಪದ್ಯದ ಸಮಸ್ಯೆ:
ನೆಲದಾಳದೆ ಬಳೆಯದಲ್ತೆ ನೆಲಗಡಲೆ ಸದಾ
೨. ಉತ್ಪಲಮಾಲೆಯ ಸಮಸ್ಯೆ:
ಚೌತಿಯ ಚಂದ್ರನೆಡ್ಡಮಿರೆ ದೋಸಮದೆಂದಿಗುಮಾಗದಾವಗಂ
ಪಲವಿರ್ಪುವು ನವ್ಯರೊಳಂ
ಬೆಳೆಯಂ ಬೆಳೆಯಲ್ಕೆ ಸಾಧನಕ್ರಮವಿಧಿಗಳ್
ಫಲಮಂ ಸೂರಿನೊಳೀವುದು
ನೆಲದಾಳದೆ ಬೆಳೆಯದಲ್ತೆ ನೆಲಗಡಲೆ ಸದಾ
ಚೌತಿಯ ಚಂದ್ರನೆಡ್ಡಮಿರೆ ದೋಸಮದೆಂದಿಗುಮಾಗದಾವಗಂ
ಶೀತಲರಾತ್ರಿಯೊಳ್ ಕೊರೆವ ಕಾರ್ತಿಕಮಾಸದೆ ನೋಳ್ದಪರ್ಗೆ ಕೇಳ್
ಖ್ಯಾತಮದಾಖ್ಯೆಯಿಂದುಗಣಪರ್ಕಳ ವಿಸ್ವರಮೂಲವರ್ಣಿತಂ
ಭೂತಲವಾಸಿಗಳ್ಗೆ ಗಡ ಭಾದ್ರಪದಂ ಬರೆ ನೇಮಮೊಪ್ಪುಗುಂ
ಕಡಲೆಕಾಯಿಗೆ ಮರಳುಮಣ್ಣು ಪ್ರಶಸ್ತ. ನೀರು ಇಮರದಿರುವ ಕಪ್ಪುಮಣ್ಣು ಅದಕ್ಕೆ ಸೂಕ್ತವಲ್ಲ.
ಜಲವಿಂಗುವೊಲನುವಪ್ಪೊಲು
ಬಲುಮರಳಿರ್ಪುರ್ವಿ ಯುಕ್ತಮಿದಕೆಂದೆಂದುಂ|
ಖಿಲಗೊಂಬುದು ತೇವದಿ, ಕರಿ-
ನೆಲದಾಳದೆ ಬೆಳೆಯದಲ್ತೆ ನೆಲಗಡಲೆ ಸದಾ||
ಫಲಮಂ ಬಯಸುತೆ ಕೃಷಿಯಿಂ,
ಪಲರಿರ್ಪರ್ ಬಿತ್ತಿ ಬೀಜಮಮ್ ಲಗುಬಗೆಯಿಂ |
ಸಲಪಲುದಾಸೀನಮಿರಲ್,
ನೆಲದಾಳದೆ ಬೆಳೆಯದಲ್ತೆ ನೆಲಗಡಲೆ ಸದಾ ||
ಸಲಪಲುದಾಸೀನದೆ ತಾಂ
ಪಲರಿರ್ಪರ್ ಬಿತ್ತದೇನನುಂ ಬಯಸಿಹರೌ|
ಫಲಮೀಯೆಲ್ಲಮನುಂ ಕಾಣ್:
ನೆಲದಾಳದೆ ಗಾಜರಂ-ನೆಲಗಡಲೆ-ಸಿತಗಳ್(Radish)||
ಸಲೆ ಸವಿಯದೆಣ್ಣೆಗಾಯ್ ಗಡ
ಸಲಲುಂ ತೈಲಮೆನಲಂತುಮಿಳೆಯಡಿಯೊಳ್ ಮೇಣ್
ತಲೆಗಾಯೆನೆ ವಾನರರಿಂ
ನೆಲದಾಳದೆ ಬೆಳೆಯದಲ್ತೆ ನೆಲಗಡಲೆ ಸದಾ ||
ಕಡಲೆಕಾಯಿ ಯಾವಾಗಲೂ ಭೂಮಿಯ ಕೆಳಗಿನ ” ಬೆಳೆಯದಲ್ತೆ ” (= ಬೆಳೆ + ಅದು + ಅಲ್ತೆ ) ?
ಮಂಗಗಳಿಗೆ ಪ್ರಿಯವಾದ ಕಡಲೆಕಾಯಿ! ಅದರಿಂದ ಕಾಪಾಡಿಕೊಳ್ಳಲು /
ಭೂಮಿಯೊಳಗಿಂದ ಎಣ್ಣೆಯನ್ನು ಸಂದಾಯವಾಗಿಸಿಕೊಳ್ಳಲು
ಭೂಮಿಯ ಒಳಗೆ ಬೆಳೆಯುವುದು, ಅಲ್ಲವೇ ?!!
ನಿಲಯದೆ ಕಣಸಂ ಕಾಣುತೆ
ಕೆಲಸಂಗೈಯದಿರೆ ಪಸಿದು ಸಾಯ್ವರ್ ಮನುಜರ್ |
ಸುಲಭದೊಳನ್ಗಡಿಗೈದುತೆ
ಫಲಮಂ ಪಡೆಯಲ್, ತೆರುತ್ತೆ ಬೆಲೆಯಮ್ ಸಾಧ್ಯಮ್ ||
(ಹಾದಿರಂಪರ ಪದ್ಯಕ್ಕೆ ಉತ್ತರ. ಕ್ಷಮಿಸಿರಿ, ಇಲ್ಲಿ ಪೋಸ್ಟ್ ಆಗಿದೆ)