Sep 232019
 

೧. ಗಂಜಿ

೨. ಕಾಳಿಂಗಸರ್ಪ

೩. ಪಾಟಿ

  7 Responses to “ಪದ್ಯಸಪ್ತಾಹ ೩೭೭: ವರ್ಣನೆ”

  1. ಚಾಟೀ:
    ಒರೆದಪುದಳಿಸಲ್ಕೆನುತುಂ
    ಚಿರತ್ವಮಂ ತೊರೆವುದಕ್ಷರಂಗಳುಮೆನ್ನೊಳ್
    ಸುರನದಿಯೊಳ್ ಮಿಂದೊಡಮುಂ
    ಕರಗದೆ ಕಾರ್ಗಪ್ಪ ಬೆಸನಮಾಂಪುದೆ ಬಿದಿಯಯ್

  2. ಗಂಜಿ:
    ತ್ವರೆಗಂ, ಜೀರ್ಣಕುಮಾಗ-
    ಲ್ಕುರೆ ಕಿಸೆಯಂ ನೇಹದಿಂದೆ ಕಾಂಬೆಂ, ಧನಿಕರ್
    ತೊರೆವರ್ ರುಚಿಗೆನುತೆನ್ನೊಳೆ
    ಮೊರೆಯಿಡುವರ್ ವ್ಯಾಧಿಯಾದೊಡಂ ಪದನಕ್ಕಂ

  3. ಬಳಪದೆ ಬರೆಬರೆದಳಿಪಂ
    ಬಿಳಿ ಕಟ್ಟೊಳ್ ಕರ್ಪು ಪಲಗೆ ಮೇಲ್ ಕಂದಂ ಮೇಣ್
    ಅಳಿಸಿರಲಾನಳುವಂ ಬಸ-
    ವಳಿಸಿರ್ಪಂ ಮರಳಿ ತಾಂ ಬರೆಯಲೊಲ್ಲಂ ಕಾಣ್ !!

    ಮೊಮ್ಮಗನಿಗೆ ಹೋಮ್ ವರ್ಕ್ ಮಾಡಿಸುವ ಪರಿಪಾಟ/ ಪಾಟಿ ಬಗ್ಗೆ !!

  4. ಗಂಜಿ ~ ಅಂಬಲಿ :

    ಅಂಬೆಗಾಲಿಕ್ಕಿಸಿ ಗೊಂಬೆಯೊಡನಾಡಿಸು-
    ತಂಬsಲಿಯುಣಿಪುದು ಕಂದಾ |
    ಕಂಬsನಿ ತೊಡೆದುತಾ ಕಂಬsಳಿ ಹೊಚ್ಚಿಪು-
    ದಂಬೆsಯದೊಡಲಿನ ಬಂದಾ ||

  5. ಏಣಿಯನೇರುತ ಪೂಗಲ್
    ನಾನೆಡವಿಹೆ ದಾಳದುರುಳಿಗಂ ಬೆಚ್ಚಿಹನೈ
    ಹಾನಿಯ ಹಾಲಾಹಲಗಂ
    ತಾನುಸುರುತಿರಲ್ ಕೊನೆಮನೆಯೊಳ್ ಕಾಳಿಂಗಂ।।

  6. (Slate)ಪಾಟಿಯೊಳು ಬರೆದುದಂ ಬಲು ತಿದ್ದಿ ಅಳಿಸುವರು
    ನಾಟೆ ಚೆನ್ನಿಂ ವಿಷಯ ಮತಿಯೊಳಾಗಳ್।
    (Paper)ಕೋಟಿಕಾರ್ಪಾಸದೊಳು ಬರೆದು ಮುಚ್ಚಿಟ್ಟಿಹುದು
    ಚಾಟೂಕ್ತಿಗೊದಗುವುದೆ ಹಾದಿರಂಪ।।

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)