Nov 112019
 

೧. ಸರಹದ್ದು (ಸೀಮೆ, ಗಡಿ)

೨. ಗುರುನಾನಕ್

೩. ದೇವಾಲಯ

  6 Responses to “ಪದ್ಯಸಪ್ತಾಹ ೩೮೩: ವರ್ಣನೆ”

  1. ಗಡಿ:
    ಇರ್ಕೆಲೆಯ ಸೈನ್ಯದಬ್ಧಿಯ
    ಸೊರ್ಕಿನ ತೆರೆಯಿಂದೆ ಘಾಸಿಯಂಬಡುತುಂ ತಾ-
    ನುರ್ಕುವ ಮಳಲ್ದಡದವೊಲೆ
    ತೋರ್ಕುಂ ಪಲ್ಲಟಮನಪ್ಪುತುಂ ಗಡಿ ನಿಚ್ಚಂ

    Constantly being impacted with arrogance of ocean of military on either sides, border is appears to be ever-changing sea shore

    • tumba sogasagide kalpane!! ಇರ್ಕೆಲೆಯ – irkelada

    • ಸೋಮ.. ತುಂಬಾ ಚೆನ್ನಾಗಿದೆ. ಪ್ರಾಸವೂ, ಪದಗಳೂ ಕಲ್ಪನೆಯೂ ಎಲ್ಲವೂ.. ಮೊದಲಿಗೇ ಇಂಥಾ ಪದ್ಯ ಹಾಕಿಬಿಟ್ಟರೆ ನಮ್ಮ ಗತಿಯೇನು? 🙂
      ಇರ್ಕೆಲದೊಳ್ ಸೈನ್ಯಾಬ್ಧಿಯ … ಮಳಲ್ದಡದವೋಲ್ .. ಎಂದು ಮಾಡಿದರೆ ಇನ್ನೂ ಬಿಗು ಬರತ್ತೆ.

  2. ಗುರುನಾನಕ್:

    ಭಕ್ತಿಪಂಥಕೆ ನೋಂತು ಸಮತೆಯಿಂ, ಸಹಬಾಳ್ವೆ
    ಯುಕ್ತಿಯಿಂ, ದಾನಂಗಳಿಂ, ಕೀರ್ತನಗಳಿಂ
    ಮುಕ್ತಿಸಂಪಾದನೆಯ ಸರಳಸೂತ್ರದ ಬಗೆಯ
    ಶಕ್ತಿಯಿಂ ನವಮತದ ಕರ್ತೃವಾದಂ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)