Nov 192019
 

  3 Responses to “ಪದ್ಯಸಪ್ತಾಹ ೩೮೪: ಚಿತ್ರಕ್ಕೆ ಪದ್ಯ”

  1. ಸಿಂಗರಿಸಲ್ ಸಿರಿಯಿಂ ಮನೆ-
    ಯಂಗಳಮಂ ವೆಚ್ಚಮಾಂತೆನೌ ಸಾಸಿರಕುಂ
    ಹಂಗಿಪುವೀ ಸರಲತೆಯುಂ
    ಕಂಗಳ ತಿಳಿಯೆನ್ನತೃಪ್ತಜೀವನವಿಧಿಯಂ

  2. ಡೈನಿಂಗ್-ಟೇಬಲ್ ಆವಿಷ್ಕಾರವಾದ ಒಂದಷ್ಟು ಕಾಲಾನಂತರ, ಮೇಜಿನ ಮೇಲೆ ಅಡುಗೆಪಾತ್ರೆಗಳನ್ನು ಓರಣವಾಗಿಡುವುದು, ವೈವಿಧ್ಯಮಯ ಪಾತ್ರೆಗಳನ್ನು ಬಳಸುವುದು, ಖಾದ್ಯಗಳನ್ನು ಶೃಂಗರಿಸುವುದು (Garnish) ಇತ್ಯಾದಿ ನಾಗರಿಕತೆಯು ಆರಂಭವಾಯಿತು. ಈ ಹೆಣ್ಣುಮಗಳು (Barn)ಕೃಷಿಕಕುಟುಂಬದವಳಂತಿದ್ದಾಳೆ. ಇವಳು ತನ್ನವರಿಗಲ್ಲದೆ (ಮನುಷ್ಯರು) ದನಕರುಗಳಿಗೂ ಉಣಿಸನ್ನು ಕೊಡುವವಳು. ಹಳ್ಳ-ತಿಟ್ಟುಗಳಲ್ಲಿ (Corniche) ನಡೆದಾಡುವ ದನಗಳಿಗೆ ಅವುಗಳ ಖಾದ್ಯವನ್ನೂ ಏಕೆ ಈ ನವನಾಗರಿಕರಂತೆ ಅವಳು ಶೃಂಗರಿಸಬಾರದು? ಈ ಆಂಗ್ಲಪದ್ಯವು ವಸಂತತಿಲಕದಲ್ಲಿದೆ. ಹಲಂತವಾದ ಆಂಗ್ಲ/ಹಿಂದಿಭಾಷೆಗಳಲ್ಲಿ ಶಿಥಿಲದ್ವಿತ್ವಗಳು ಹೇರಳವಾಗಿರುವುದು ಅನಿವಾರ್ಯ.
    Garnish we do to the dishes that are laid on table
    Corniche is where the animals hither and thither pass|
    Barnish is girl, similarly has adorned the cow’s feed
    Tarnish ye not the little girl’s destiny, oh my Lord||

  3. ಹರಿದಾಡಿ ಭೂಚಕ್ರ ನೆಲಕಾಯ್ದು ಸುಡಲು ತಂ-
    ಪೆರೆಯೆ ಬಿರಿದಿರ್ಪುದೀಪರಿಯೆ
    ಸುಮವುಂ |
    ಹರಿ ಹಾಯ್ದ ದೀವಳಿಗೆ ಮುಗಿದ ಮರುದಿನ ಮರಳಿ-
    ಯುರಿಯುತಿಹ ದೀಪಕಕೆ ತಾನೆ ಸಮವುಂ !!

    ಸಂಭ್ರಮದ ದೀಪಾವಳಿಯ ಮರುದಿನ – ಹೂವಿನ ಹಣತೆಯಲ್ಲಿನ ದೀಪದಂತೆ “ಬಾಲೆ” ಕಂಡ ಕಲ್ಪನೆಯ ಪದ್ಯ !!

Leave a Reply to ಸೋಮ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)