Nov 252019
 

೧. ಭುಜಂಗಪ್ರಯಾತದ ಸಮಸ್ಯೆ

ಗದೋನ್ಮಾದಮಂ ಗೈವನೇ ವೈದ್ಯವರ್ಯಂ

ಗದೋನ್ಮಾದಮಂ – ರೋಗದ ಉನ್ಮಾದವನ್ನು

೨. ಸ್ರಗ್ವಿಣೀ ಛಂದಸ್ಸಿನ ಸಮಸ್ಯೆ

ಭಾನುವಂ ಮೀರುತುಂ ಚಂದ್ರನೇ ಶೋಭಿಪಂ

  4 Responses to “ಪದ್ಯಸಪ್ತಾಹ ೩೮೫: ಸಮಸ್ಯಾಪೂರಣ”

 1. ಪದಾರ್ಥವಿಜ್ಞಾನ ಎಂಬುದು ಆಯುರ್ವೇದಶಾಸ್ತ್ರದೊಂದು ಭಾಗ. ಮಹೀಜ = (ಔಷಧೀಯ)ಗಿಡಮೂಲಿಕೆಗಳು. ಆಮಯ = ಅಸ್ವಾಸ್ಥ್ಯ. ಸುದಾರ್ಢ್ಯ + ಅಗದ = strength and health
  ಪದಾರ್ಥಜ್ಞನೀತಂ ಮಹೀಜಂಗಳಂ ತಾಂ
  ಸುದೂರಂ ವನೀದೇಶದಿಂದಾಯ್ದು ನೀಡಲ್|
  ಸುದೀರ್ಘಾಽಮಯಂ ನೀಗಿತೀಗಳ್, ಸುದಾರ್ಢ್ಯಾ-
  ಗದೋನ್ಮಾದಮಂ ಗೆಯ್ವನೇ ವೈದ್ಯವರ್ಯಂ||

 2. On quite some days every month the sun and the moon can be seen in the sky simultaneously. The Sun can dim its mightier siblings viz., the stars, but it cannot dim a meek nexgen viz., a satellite!
  ಬಾನಿನೊಳ್ ತಾರೆಗಳ್ ಮಿಂಚಲೇಂ ರಾತ್ರಿಯೊಳ್
  ದೀನದಿಂ ಕಂದಿಪಂ ಕಲ್ಯದೊಳ್(Dawn) ಸೂರ್ಯ ತಾಂ|
  ಲೀನಮಂ ಗೈಯಲಾರಂ ಶಶಾಂಕಾಖ್ಯನಂ
  ಭಾನುವಂ ಮೀರುತುಂ ಚಂದ್ರನೇ ಶೋಭಿಪಂ||

 3. ನಿದಾನ ಪ್ರದಂ ಸರ್ವದಾ ಸಾನುಭಾವಂ
  ಸದಾಮೌನಿ ಸುಜ್ಞಾನಿ ತಾಂ ಕಾರ್ಯಶೀಲಂ
  ಕದಾಚಿತ್ ವಿಪತ್ಕಾಲಕಂ ಭಾಷ್ಯಕಾರಂ
  ಗದೋನ್ಮಾದಮಂ ಗೆಯ್ವನೇ ವೈದ್ಯವರ್ಯಂ ?

  “ಮಿತಭಾಷಿ” ಅನುಭವಿ ವೈದ್ಯನ ವರ್ಣನೆ !

 4. ಮಾನದಂಡಂ ಸದಾ ಜನ್ಮನಕ್ಷತ್ರಕಂ
  ಮಾನನೀಯಂ ಭಲಾ ಚಂದ್ರನಾಸ್ಥಾನವುಂ
  ಮಾನುಷಂ ಜಾತಕಂ ಸಂಪ್ರದಾಯಂ ಗಡಾ
  ಭಾನುವುಂ ಮೀರುತಲ್ ಚಂದ್ರನೇ ಶೋಭಿಪಂ !!

  ಜನ್ಮಕುಂಡಲಿಯಲ್ಲಿ ರವಿಗಿಂತ ಚಂದ್ರನೇ ಮೇಲು ಎಂಬ ಕಲ್ಪನೆ,
  ಮಾನವರ ಜನ್ಮನಕ್ಷತ್ರ(ಹಣೆಬರಹ)
  ನಿರ್ಧರಿಸುವುದು ಚಂದ್ರನ ಸ್ಥಾನವೇ ಅಲ್ಲವೇ ?!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)