Dec 162019
 

೧. ಇಂದ್ರವಂಶದ ಸಮಸ್ಯೆ
ಮಂದಾನಿಲಂ ಬೀಳಿಸುಗುಂ ಮರಂಗಳಂ

೨. ವಂಶಸ್ಥದ ಸಮಸ್ಯೆ
ಕಲಾಸಿಪಾಳ್ಯಂ ಕಮನೀಯಮಾಗದೇಂ

  11 Responses to “ಪದ್ಯಸಪ್ತಾಹ ೩೯೧: ಸಮಸ್ಯಾಪೂರಣ”

  1. ಚಲಾಯಿಸಲ್ ಬಂಡಿ ಸುರಂಗಮಾರ್ಗದೊಳ್
    ಪಲರ್ ಬೆಮರ್ ಸೂಸುತೆ ಗೆಯ್ದರಲ್ತೆ ಆ
    ಫಲಂಗಳಂ ಪ್ರಾಪ್ತಜನರ್ಗೆ ನಿಚ್ಚಮುಂ
    ಕಲಾಸಿಪಾಳ್ಯಂ ಕಮನೀಯಮಾಗದೇಂ

    ಕಲಾಸಿಪಾಳ್ಯ metro rail ಇಂದ ಕಮನೀಯವಾಯಿತು

  2. ಒಂದೊಂದೆ ಪಾಳ್ಗೈದ ಜಲಾಕರಂಗಳಿಂ
    ಕುಂದಾಗೆ ಭೂಭಾಗದ ಮಣ್ಣ ಸತ್ತ್ವಮೇ
    ಸಂದಿರ್ದ ಕಾಡೇ ಶಿಥಿಲಂಗೊಳಲ್ಕೆ ಹಾ
    ಮಂದಾನಿಲಂ ಬೀಳಿಸುಗುಂ ಮರಂಗಳಂ

  3. ಪ್ರಲಾಪಮಂ ಗೈವ ಮಿನಾರಮೆಲ್ಲಮಂ
    ಹಲಾಲಮಾಂಸಂಗಳನೀವ ಪೇಟೆಯಂ|
    ವಿಲಾಸಗೇಹಂಗಳ ನಾಶಗೈದೊಡಂ
    ಕಲಾಸಿಪಾಳ್ಯಂ ಕಮನೀಯಮಾಗದೇಂ||1||

    ವಿಲೀನಮಾಗಲ್ ಜವನೊಳ್ ಕುಟುಂಬಮೇ (ಅಪಘಾತದಲ್ಲಿ)
    ವಿಲಾಪಮಂ ಗೈದಿರುವೊರ್ವ ದಾಯಗಂ|
    ಸುಲಾಭಮಲ್ಲಾಗೆ ಸ್ಥಿರಾಸ್ತಿಯೊಂದರಿಂ (ಅಲ್ಲಿ>ಕಲಾಸಿಪಾಳ್ಯದಲ್ಲಿ, say site)
    ಕಲಾಸಿಪಾಳ್ಯಂ ಕಮನೀಯಮಾಗದೇಂ (ಆ ದಾಯಾದನಿಗೆ)||2||

  4. ಎಂದೆಂದುಮೀ ಮೈತ್ರಿ ಪಸಿರ್ಗೊಳಿಪ್ಪುದ-
    ಲ್ತೆಂದತ್ತು ವೈರಸ್ಯದುಸಿರ್ ತಗುಳ್ದೊಡಾ
    ಸಂದರ್ಭಮಂ ಪೆರ್ಚಿಪ ಚೋದ್ಯಮೀಕ್ಷಿಸಲ್
    ಮಂದಾನಿಲಂ ಬೀಳಿಸುಗುಂ ಮರಂಗಳಂ

  5. ಚಂದಂ ಮುಗಿಲ್ ತಾಳ್ದಪ ವೇಸಮೀಕ್ಷಿಸಯ್
    ಮುಂದೈದುದುದ್ಯಾನಮೆಮಿಪ್ಪುದಾಗಸಂ
    ಸಂದಿರ್ದ ದೃಷ್ಯಾವಳಿ ಲೀನಮಪ್ಪವೊಲ್
    ಮಂದಾನಿಲಂ ಬೀಳಿಸುಗುಂ ಮರಂಗಳಂ

  6. ಕುಂದಿರ್ದಿರಲ್ ಬೇರೊಳು, ತಾನೆ ಬೀಳುಗುಂ
    ನಿಂದಿರ್ಪುದೆಂತಾ ಮರಮಾಗ ಸ್ಥೈರ್ಯದಿಂ|
    ಕುಂದಿಲ್ಲದಿರ್ದುಂ ನಿಲುಗೆಂತು ಪೇಳ್, ಹಠಾ-
    ಮಂದಾನಿಲಂ ಬೀಳಿಸಿರಲ್ ಮರಂಗಳಂ||

  7. ವೃಂದಾರಕರ್ ನೋಡೆ ಮಹಾಜಿರಂಗದೊಳ್
    ಕುಂದೇರ್ದ ದುರ್ಯೋಧನನಂ ಕೊಲಲ್ಕೆ ತಾಂ
    ಸಂದಿರ್ದೊಡಂ ಭೀಮಗದಾಸಮುತ್ಥಿತಾ-
    ಮಂದಾನಿಲಂ ಬೀಳಿಸುಗುಂ ಮರಂಗಳಂ

    ಭೀಮನ ಗದೆಯಿಂದ ಹುಟ್ಟಿದ ಅಮಂದಾನಿಲ…

  8. ಕಲಾಸಿಪಾಳ್ಯಂ ಕಮನೀಯಮಾಗದೇಂ
    ಕಲಾನ್ಚಿತರ್ ವಾಣಿವಿಲಾಸಛಾತ್ರೆಯರ್
    ಕಲಿತ್ತವರ್ ವೈದ್ಯಕಲಾಸುಮಂಡಿತರ್
    ವಿಲಾಸಿನೀಷಂಡದಿ ಸಾರೆ ಬೀದಿಯೊಳ್

    BMCಯನ್ನೂ ವಾಣಿವಿಲಾಸ ಮಹಿಳಾ ಕಾಲೇಜನ್ನೂ ಎಲ್ಲರೂ (ಬೇಕಂತಲೇ) ಮರೆತಂತಿದೆ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)