ಶಂಕರಾನಂದರಿಗೆ ಪದ್ಯಪಾನಕ್ಕೆ ಸ್ವಾಗತ. ತಮ್ಮ ಆಸ್ಥೆಗೆ ಅಭಿನಂದನೆಗಳು. ಛಂದಸ್ಸು ಪ್ರಾಸಗಳೆಲ್ಲ ಸರಿಯಿವೆ. ಆದರೆ ವ್ಯಕ್ತಿಯೊಬ್ಬರ ಸ್ವಗತದಲ್ಲಿ ಆ ವ್ಯಕ್ತಿಯ ಹೆಸರು ಬರಬಾರದಲ್ಲವೆ? ದಯವಿಟ್ಟು ಪುನಾರಚಿಸಿ.
ತಾಯಿ ವಸುಂಧರೆಯ ಆಭೂಷಣಗಳಂತಿರುವ ನಗರಗಳನ್ನು ಇಷ್ಟು ಕಾಲ ನೋಡಿದ್ದೇನೆ. ಇನ್ನು ಮೇಲೆ ಆಕೆಯ ಸೀರೆಯ ನಿರಿಗೆಗಳ ನಡುವೆ ಎಂಬಂತೆ ಅರಣ್ಯಗಳಲ್ಲಿ ನಡೆದಾಡುತ್ತೇನೆ. ಇದಲ್ಲವೇ ತಾಯಿಯ ಒಡನಾಟ!
ಬಿಲ್ಲನೆತ್ತಿದ ಶೂರನನು ಕಂ
ಡೆಲ್ಲ ಹುಡುಗಿಯರಂತೆ ಮೆಚ್ಚುತ
ಸೊಲ್ಲನೆತ್ತದೆ ಪತಿಯ ಹಿಂಬಾಲಿಸಿದೆ ನಾನಕಟಾ!
ಸಲ್ಲಬಹುದೇಂ ಶ್ವಶ್ರು ಮೂವರು
ಹುಲ್ಲೆಯಂತಹ ಚದುರೆ ನಾನೈ
ಮೆಲ್ಲ ಹೊರಡುವೆ ಕಾಡೆ ಮಿಗಿಲೈ ಕಾಡ್ವ ಶ್ವಶ್ರುವಿಗುಂ|
ಚೆನ್ನಾಗಿದೆ ರಾಮನಾಥರೆ. ಕಾಡ್ವ ಪದ ಸರಿಯಲ್ಲ. ಕಾಡುವ ಆಗಬೇಕು. ಶ್ವಶ್ರು ಪುನರುಕ್ತಿ ಆಗಿದೆ. ಕಾಡುವತ್ತೆಯಿನೇ (ಕಾಡುವ ಅತ್ತೆಗಿಂತಲುವೇ) ಅಂತ ತಿದ್ದಬಹುದು.
‘ಮೆಲ್ಲಹೊರಟೆನರಣ್ಯ ಮಿಗಿಲೈ ಕಾಡುವತ್ತೆಗಿನುಂ’ ಆಗಬಹುದೇ? ನಿಮ್ಮ ಸ್ಪಂದನಕ್ಕೆ ವಂದನೆಗಳು ನೀಲಕಂಠರೆ
ಸೀತೆಯ ಸ್ವಗತ
ಅರಮನೆಯ ಸೊಗಸೇಕೆ? ನಲ್ಮೆಯಿ-
-ನರಸನೊಂದಿಗೆ ಬಾಳ್ವೆ ಕಾಡೊಳೆ
ವಿರಹವೊಂದುಳಿದಾವ ಕಷ್ಟವು ಕಷ್ಟವೆನಗಲ್ತು.
ತೊರೆದು ಹೊನ್ನಿನ ಬೋನನಾನನು-
-ಸರಿಪೆ ನಲ್ಲನ, ಕಾಡಸೇರುತೆ
ಚರಿಪೆ ಗಗನದೆ ರೆಕ್ಕೆಬಿಚ್ಚುತೆ ಸಖನ ರಕ್ಷೆಯಲಿ
ಸೊಗಸಾದ ಕಲ್ಪನೆ ಅನಂತರೇ
ಧನ್ಯವಾದ ಸೋಮಣ್ಣ_/\_
ಸೀತೆಯ ಸ್ವಗತ
ಸೀತೆಯು ವಿರಹದ
ಗೀತೆಯ ಹಾಡುತ
ಸೋತೆನು ನಿನ್ನೊಲುಮೆಗೆನಾನು
ಪ್ರೀತಿಯ ನೀಡುತ
ನೀತಿಯ ಹಿಡಿಯುವ
ರೀತಿಯನರಿತೆನು ಮನದನ್ನ
ಶಂಕರಾನಂದರಿಗೆ ಪದ್ಯಪಾನಕ್ಕೆ ಸ್ವಾಗತ. ತಮ್ಮ ಆಸ್ಥೆಗೆ ಅಭಿನಂದನೆಗಳು. ಛಂದಸ್ಸು ಪ್ರಾಸಗಳೆಲ್ಲ ಸರಿಯಿವೆ. ಆದರೆ ವ್ಯಕ್ತಿಯೊಬ್ಬರ ಸ್ವಗತದಲ್ಲಿ ಆ ವ್ಯಕ್ತಿಯ ಹೆಸರು ಬರಬಾರದಲ್ಲವೆ? ದಯವಿಟ್ಟು ಪುನಾರಚಿಸಿ.
ದಾಶರಥಿ ಬದಲು ಮನದನ್ನ ಪದ ಹಾಕಿದ್ದೆನೆ
ಶಂಕರಾನಂದರೇ, ಸ್ವಗತ ಯಾರದು ಅಂತ ಗೊತ್ತಾಗಲಿಲ್ಲ. ಮೊದಲಿಗೇ ಸೀತೆಯು ಅಂತ ಕರ್ತೃಪದ ಬಂದಿದೆಯಲ್ಲ..
ಸೀತೆಯ ಅಳಲು:
ಮೊದಲಿಂಗೆ ಬಿಸುಟವರ್ ಪೆತ್ತವರು ತಾಮಲ್ತೆ
ಅದನೆ ಎನ್ನತ್ತೆ ಗೈದಿರುವಳೀಗಳ್|
ಮದನನೆನ್ನಯನೆಂತು ಅಪವಾದನಾದಾನು
ಒದಗಲಾಗತಿ ಇವುಗಳುಪಕಲ್ಪನಂ|| (ಒದಗಲು = ಒದಗಿದರೆ)
ಆ ಸಂಭಾವ್ಯವನ್ನು ಸಹಿಸಲು ಇವುಗಳು (ಎಂದರೆ ತೌರು-ಅತ್ತೆಯರು ಮಾಡಿದುದು) ನನ್ನನ್ನು ಸಜ್ಜಾಗಿಸಿವೆ (ಉಪಕಲ್ಪನವಾಗಿವೆ)
Hahhaa ..
ಎರಡು ಮೂರು ವಿಸಂಧಿಗಳಾಗಿವೆ
ಸೀತೆಯ ಸ್ವಗತ
ಜನನಿಯ ಭೂಷಾವಳಿಯೆಂ-
ಬಿನ ಪುರವೈಭೋಗಮೀಕ್ಷಿಸಿರ್ದಪೆನಿನ್ನೀ
ವನಘನಚೀರಪುಟಂಗಳ-
ನನುನಯಿಪೆಂ ತಕ್ಕುದಲ್ತೆ ತಾಯೊಡನಾಟಂ!
ತಾಯಿ ವಸುಂಧರೆಯ ಆಭೂಷಣಗಳಂತಿರುವ ನಗರಗಳನ್ನು ಇಷ್ಟು ಕಾಲ ನೋಡಿದ್ದೇನೆ. ಇನ್ನು ಮೇಲೆ ಆಕೆಯ ಸೀರೆಯ ನಿರಿಗೆಗಳ ನಡುವೆ ಎಂಬಂತೆ ಅರಣ್ಯಗಳಲ್ಲಿ ನಡೆದಾಡುತ್ತೇನೆ. ಇದಲ್ಲವೇ ತಾಯಿಯ ಒಡನಾಟ!