Jan 212020
 

  10 Responses to “ಪದ್ಯಸಪ್ತಾಹ ೩೯೬: ಚಿತ್ರಕ್ಕೆ ಪದ್ಯ”

  1. The structure and details of Kathakalī developed in the courts and theatres of Hindu principalities, unlike other classical Indian dances which primarily developed in Hindu temples and monastic schools. – Wikipedia

    “ಸೀಮಿತದ ದೇವಳದೊಳಂಗಣದೊಳಲ್ಲಂ (ದೇವಳದ ಒಳಂಗಣ)
    ಗ್ರಾಮದೊಳ ರಂಗದೊಳು ನಾಟ್ಯವನು ಗೈವೆಂ|”
    ನೇಮವನು ಮೀರಿಹಿರಿ, ಇನ್ನಿರದು ಬಾಧಂ
    ವ್ಯೋಮಕಿಹರೀಕ್ಷಕರು ಕೋಟಿ+ದಶಲಕ್ಷಂ|| ವನಮಯೂರ/ ಇಂದುನಂದನ

  2. ಕಥಕ್ಕಳಿಕಲಾವಿದಂ ಬಯಸಿ ತಾಳ್ದ ಪಾತ್ರಂಗಳಂ
    ತಥಾಕಥಿತವೀಕ್ಷಕರ್ ಸವಿದು ಮೆಚ್ಚದಾಗಳ್ಕಿದೋ
    ವ್ಯಥಾಭರಿತಚಿತ್ತನಾ ಮುಗಿಯದಾಶೆಯಿಂ ತೀರಿರಲ್
    ಕಥಾನಕಮೆ ಆದನಯ್ ಮೆರೆದು ಪ್ರೇತಮಾಗುತ್ತುಮೇ

    • ಅಂಗುಷ್ಟಮಾತ್ರವಾಗುತ್ತದೈ ಪ್ರೇತವದು
      ಅಂಗಾಂಗ ಕುಗ್ಗುತೆಂದಿದೆ ಶಾಸ್ತ್ರವು|
      ಪಿಂಗಿಲ್ಲ, ಮಾತ್ರ ಲುಪ್ತಂ ಪೊಡೆಯು-ಕಾಲಿವನ
      ಪಾಂಗಿಂದೆ ನಗುತಿಪಂ ಸಾವೊಳುಂ ತಾಂ!!

    • ಚೆನ್ನಾಗಿದೆ ಪೃಥ್ವಿಯ ಪ್ರೇತ

    • ಪೃಥ್ವಿಯ ಪ್ರೇತ ಆಕಾಶದಲ್ಲಿದೆ!

  3. ಕಲೆಯ ಚಿತ್ರ
    ಚೆಲುವು ಮಿತ್ರ
    ಬಲೆಯ ಹೆಣೆದು ಕುಳಿತಿದೆ
    ಎಲೆಯ ಮೇಲೆ
    ಕಲೆಯ ತೋರಿ
    ಸೆಲೆಯು ಬಂದು ತಾಗಿದೆ

    ಹುಬ್ಬು ಜಿಗಿಸಿ
    ಹಬ್ಬ ಮಾಡಿ
    ಕಬ್ಬ ದಂತೆ ಯಾದನು
    ದಿಬ್ಬ ದಿಂದ
    ಮಬ್ಬಿ ನಲ್ಲಿ
    ಜುಬ್ಬ ಹಾಕಿ ನೊಳ್ಪನು

    • ಸೆಲೆಯು ಬಂದಂತಾಗಿದೆ ತಾ – ಮಾತ್ರಾಗಣಿತ ಸರಿಪಡಿಸಿ (ಸೆಲೆಯು ಬಂದೊಲಾಗಿದೆ)

    • ಚೆನ್ನಾಗಿದೆ, ಪ್ರಸಾದು ಸೂಚಿಸಿದ್ದನ ಗಮನಿಸಿರಿ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)