ಒಲವ ಸೂಸುತುಮಪ್ಸರೆಯರ್ ವಲಂ
ಕುಲುಕಿ ಕಾಯವ ಪಾಡಿರೆ ಪಾಡನುಂ|
ನಲಿಯೆ ದೇವತೆಗಳ್ ಮುದದಿಂದೆ ಕಾ-
ಕಲಿವಿಡಂಬಕಮಾಯ್ತು ಕೃತಂ ಯುಗಂ||
(ಇದು ಎಲ್ಲ ಯುಗಗಳಿಗೂ ಅನ್ವಯವಾಗುತ್ತದೆ. ಆದರೆ ಕೃತಯುಗದಲ್ಲಿ ಇದನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ’ಮಾ-ಕಲಿ’ಕೀಲಕವಿರುವ ನನ್ನ ಮುಂದಿನ ಪದ್ಯಕ್ಕೆ ಕೊಟ್ಟಿರುವ ವಿವರಣೆಯನ್ನು ನೋಡಿ, ತಿಳಿಯುತ್ತದೆ.)
ಗೋ=ನೀರು. ಗೋವರ್ಧನಾ=ಗಂಗೆ
ಕೈವಲ್ಯವ ಪೂರ್ವಜ ನಿ-
ರ್ಜೀವಿಗಳಿಂಗಾ ಭಗೀರಥಂ ಕುಡಲೆಳಸಲ್|
ಧಾವಿಸಿ ಬಹಳಂ(ಬರುವವಳಂ, ಗಂಗೆಯಂ) ಯಮಿಸಲ್
ಗೋವರ್ಧನಧಾರಿಯಾದನಾ ಮದನಾರಿ||
ತುಂಬಾ ಚೆನ್ನಾಗಿದೆ
ಒಲವ ಸೂಸುತುಮಪ್ಸರೆಯರ್ ವಲಂ
ಕುಲುಕಿ ಕಾಯವ ಪಾಡಿರೆ ಪಾಡನುಂ|
ನಲಿಯೆ ದೇವತೆಗಳ್ ಮುದದಿಂದೆ ಕಾ-
ಕಲಿವಿಡಂಬಕಮಾಯ್ತು ಕೃತಂ ಯುಗಂ||
(ಇದು ಎಲ್ಲ ಯುಗಗಳಿಗೂ ಅನ್ವಯವಾಗುತ್ತದೆ. ಆದರೆ ಕೃತಯುಗದಲ್ಲಿ ಇದನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ’ಮಾ-ಕಲಿ’ಕೀಲಕವಿರುವ ನನ್ನ ಮುಂದಿನ ಪದ್ಯಕ್ಕೆ ಕೊಟ್ಟಿರುವ ವಿವರಣೆಯನ್ನು ನೋಡಿ, ತಿಳಿಯುತ್ತದೆ.)
ಕೃತಯುಗದಲ್ಲಿ ದೇವತೆಗಳು ಸ್ವರ್ಗದಲ್ಲಿದ್ದರು ಅಸುರರು ಪಾತಾಳದಲ್ಲಿದ್ದರು. ಅಸುರರ ಸಂಪರ್ಕ-ಉಪದ್ರವವಿಲ್ಲದೆ ದೇವತೆಗಳು ಶೀತಲಚಂದ್ರನಂತೆ (ಮಾಕಲಿ) ತಂಪಾಗಿದ್ದರು.
ತಲವೆ ಬೇರೆಯದೀರ್ವರದಂತೆ ಕೇಳ್
ನೆಲವು ಮಧ್ಯದೊಳಾಳದೆ (ಪಾತಾಳ) ದೈತ್ಯರೈ|
ಭಲರೆ ಮೇಗಡೆಯಿರ್ಪ ಸುರರ್ಗೆ ಮಾ-
ಕಲಿವಿಡಂಬಕಮಾಯ್ತು ಕೃತಂ ಯುಗಂ||
ಕಲಿ=ವಿವಾದ, ಕಲಹ
ಹಲವು (peg)ಕಂಸಕಮದ್ಯವನೀಂಟುತುಂ
ಸಲುಗೆಯಿಂ ಪ್ರಮದರ್ ಸುರರೊಟ್ಟಿನಿಂ-|
ದೊಲಿಸೆ ಯತ್ನಿಸೆ ಮೇನಕೆಯೊರ್ವಳಂ
ಕಲಿವಿಡಂಬಕಮಾಯ್ತು ಕೃತಂ ಯುಗಂ||
haha
ಗೋವಳರನೋವಲೀ ಹರಿ
ಗೋವರ್ಧನಧಾರಿಯಾದನಾ ಮದನಾರಿ
ಸ್ಥಾವರದೊಳ್ ಸ್ಥಿರನಾಗುತೆ
ಭಾವಿಸುತುಳಿದಂ ಜಗತ್ತಿನೀ ಜಂಜಡದಿಂ
ಗೋವಳರಂ ಓವಲು ( ರಕ್ಷಿಸಲು) ಈ ಹರಿ ಗೋವರ್ಧನಧಾರಿಯಾದಂ, ಆ ಮದನಾರಿ ಸ್ಥಾವರದೊಳ್ (ಗಿರಿಯೊಳ್) ಸ್ಥಿರನಾಗಿ ಉಳಿದಂ ಜಗತ್ತಿನ ಈ ಜಂಜಡದಿಂ ಉಳಿದಂ.
ಚೆನ್ನಾಗಿದೆ