Home — About us – ನಮ್ಮ ಬಗ್ಗೆ — Welcome – ಸ್ವಾಗತ – स्वागतम् — ಪದ್ಯಪಾನದ ಸಾಮಾನ್ಯ ನಿಲುವು Learn Prosody – ಛಂದಸ್ಸುಗಳ ಪರಿಚಯ – छन्दःपरिचयः — FAQ – ಪ್ರಶ್ನೋತ್ತರ — [ವಿಡಿಯೊ] ತರಗತಿ – ಹಳೆಗನ್ನಡ ವ್ಯಾಕರಣ — [ವಿಡಿಯೊ] ತರಗತಿ – ೧ — — ೧ – ಸ್ವಾಗತ — — ೨ – ಪರಿಚಯ — — ೩ – ಉಪಯೋಗ — — ೪ – ಲಘು, ಗುರು, ಗಣ — — ೫ – ವಿಭಾಗ — — ೬ – ಲಯಾನ್ವಿತ — — ೭ – ಎಚ್ಚರದ ಆಂಶಗಳು — — ೮ – ಎಚ್ಚರದ ಆಂಶಗಳು — [ವಿಡಿಯೊ] ತರಗತಿ – ೨ — — ೯ – ಮಾತ್ರಾಗತಿಗಳು — — ೧೦ – ಷಟ್ಪದಿಗಳು — — ೧೧ – ಪ್ರಾಸವಿಚಾರ — — ೧೨ – ಆದಿಪ್ರಾಸ — — ೧೩ – ಪದ್ಯ ರಚನೆ — — ೧೪ – ಭಾಮಿನಿ ಷಟ್ಪದಿ — — ೧೫ – ಕಂದ ಪದ್ಯ — — ೧೬ – ಕಂದ ರಚನೆ — [ವಿಡಿಯೊ] ತರಗತಿ – ೩ — — ೧ – ಸಂಸ್ಕೃತ ಪದ್ಯರಚನಾ — — ೨ – ಪ್ರವೇಶಿಕಾ — — ೩ – ಅನುಷ್ಟುಪ್ — — ೪ – ದೃತವಿಲಂಬಿತಂ — ಅಂಶ ಛಂದಸ್ಸು — ಅಕ್ಷರ ವೃತ್ತಗಳು (ವರ್ಣವೃತ್ತಗಳು) — ಕಂದ ಪದ್ಯದ ಛಂದಸ್ಸು — ಕಲಿಕೆಯ ಸಾಮಗ್ರಿ Learn Aesthetics – ಅಲಂಕಾರ ಪರಿಚಯ – अलङ्कारपरिचयः — ೧ – ಪರಿಭಾಷೆ – ಸ್ಥೂಲ ಪರಿಚಯ — ೨ – ಅರ್ಥ, ಶಬ್ದಾಲಂಕಾರಗಳು — ೩ – ವರ್ಗೀಕರಣ — ೪ – ನಾಮೌಚಿತ್ಯ — ೫ – ಉಪಮಾಲಂಕಾರ — ೬ – ಸಾದೃಶ್ಯಮೂಲ ಅಲಂಕಾರ ವಿವರ — ೭ – ವಿವಿಧ ಅಲಂಕಾರಗಳು — ೮ – ವಿವಿಧ ಅಲಂಕಾರಗಳು — ೯ – ವಿವಿಧ ಅಲಂಕಾರಗಳು ವಿಶೇಷ ಕಾರ್ಯಕ್ರಮಗಳು — ಮೊತ್ತಮೊದಲ ತುಂಬುಗನ್ನಡದ ಶತಾವಧಾನ — (೧೦೦೦)ದ ಅವಧಾನ — — ಸಾವಿರದ ಅವಧಾನದಲ್ಲಿ ಅವಧಾನಿಗಳು ರಚಿಸಿದ ಚಿತ್ರಕವಿತೆಗಳು ಶತಾವಧಾನಿ ಗಣೇಶರ ಪ್ರವಚನ ಸರಣಿ Popular - ಜನಪ್ರಿಯ — ***** ವಿಶೇಷ ಆಯ್ಕೆಗಳು — ಸಮಸ್ಯಾಪೂರಣ संस्कृतविभागः ಕನ್ನಡ ವಿಭಾಗ ಅವಧಾನ ಪದ್ಯಗಳು /अवधानपद्यानि
The structure and details of Kathakalī developed in the courts and theatres of Hindu principalities, unlike other classical Indian dances which primarily developed in Hindu temples and monastic schools. – Wikipedia
“ಸೀಮಿತದ ದೇವಳದೊಳಂಗಣದೊಳಲ್ಲಂ (ದೇವಳದ ಒಳಂಗಣ)
ಗ್ರಾಮದೊಳ ರಂಗದೊಳು ನಾಟ್ಯವನು ಗೈವೆಂ|”
ನೇಮವನು ಮೀರಿಹಿರಿ, ಇನ್ನಿರದು ಬಾಧಂ
ವ್ಯೋಮಕಿಹರೀಕ್ಷಕರು ಕೋಟಿ+ದಶಲಕ್ಷಂ|| ವನಮಯೂರ/ ಇಂದುನಂದನ
ನಿಮ್ಮ ಪದ್ಯ ಎಲ್ಲರಿಗೂ ಎದ್ದು ಕಂಡು ಬಹಳ ಚೆನಾಗಿ ಮೂಡಿದೆ ಪ್ರಸಾದು
ಧನ್ಯವಾದ ಸೋಮ
ಕಥಕ್ಕಳಿಕಲಾವಿದಂ ಬಯಸಿ ತಾಳ್ದ ಪಾತ್ರಂಗಳಂ
ತಥಾಕಥಿತವೀಕ್ಷಕರ್ ಸವಿದು ಮೆಚ್ಚದಾಗಳ್ಕಿದೋ
ವ್ಯಥಾಭರಿತಚಿತ್ತನಾ ಮುಗಿಯದಾಶೆಯಿಂ ತೀರಿರಲ್
ಕಥಾನಕಮೆ ಆದನಯ್ ಮೆರೆದು ಪ್ರೇತಮಾಗುತ್ತುಮೇ
ಅಂಗುಷ್ಟಮಾತ್ರವಾಗುತ್ತದೈ ಪ್ರೇತವದು
ಅಂಗಾಂಗ ಕುಗ್ಗುತೆಂದಿದೆ ಶಾಸ್ತ್ರವು|
ಪಿಂಗಿಲ್ಲ, ಮಾತ್ರ ಲುಪ್ತಂ ಪೊಡೆಯು-ಕಾಲಿವನ
ಪಾಂಗಿಂದೆ ನಗುತಿಪಂ ಸಾವೊಳುಂ ತಾಂ!!
ಚೆನ್ನಾಗಿದೆ ಪೃಥ್ವಿಯ ಪ್ರೇತ
ಪೃಥ್ವಿಯ ಪ್ರೇತ ಆಕಾಶದಲ್ಲಿದೆ!
ಕಲೆಯ ಚಿತ್ರ
ಚೆಲುವು ಮಿತ್ರ
ಬಲೆಯ ಹೆಣೆದು ಕುಳಿತಿದೆ
ಎಲೆಯ ಮೇಲೆ
ಕಲೆಯ ತೋರಿ
ಸೆಲೆಯು ಬಂದು ತಾಗಿದೆ
ಹುಬ್ಬು ಜಿಗಿಸಿ
ಹಬ್ಬ ಮಾಡಿ
ಕಬ್ಬ ದಂತೆ ಯಾದನು
ದಿಬ್ಬ ದಿಂದ
ಮಬ್ಬಿ ನಲ್ಲಿ
ಜುಬ್ಬ ಹಾಕಿ ನೊಳ್ಪನು
ಸೆಲೆಯು ಬಂದಂತಾಗಿದೆ ತಾ – ಮಾತ್ರಾಗಣಿತ ಸರಿಪಡಿಸಿ (ಸೆಲೆಯು ಬಂದೊಲಾಗಿದೆ)
ಚೆನ್ನಾಗಿದೆ, ಪ್ರಸಾದು ಸೂಚಿಸಿದ್ದನ ಗಮನಿಸಿರಿ