Feb 042020
 

೧. ಮೂಲೆ

೨. ಆಕಾಶದಿಂದ ಜಿಗಿತ (sky dive)

೩. ಹಿಂದೋಳ ಸೇವೆ (ಉಯ್ಯಾಲೆಯ ಸೇವೆ)

  6 Responses to “ಪದ್ಯಸಪ್ತಾಹ ೩೯೮: ವರ್ಣನೆ”

  1. ಮೂಲೆಗುಂಪಾಗದಿರ್ ಮಧ್ಯಮಿರ್ಪುದು ದಿಟದೆ
    ಮೇಲೇರ್ದಪಂಗಿದೋ ಮಾರ್ಗಮೆಂಬರ್
    ಮೂಲೆಯೊಳ್ ಜಗಕೆ ಕುಳ್ಳಿರ್ದೊರೆದು ಕಗ್ಗಮನೆ
    ಕಾಲನಂ ಲೋಗರಂ ಗೆಲ್ದನಲ್ತೆ

    ಕಗ್ಗದ ಕರ್ತೃವೆಂದು ಗುಂಡಪ್ಪನವರ ಸೋದರಮಾವನವರ ಚರಿತೆಯೆಂಬ ಪೀಠಿಕೆಯನ್ನಾಧರಿಸಿದ ಪದ್ಯ, ಮೂಲೆಯಲ್ಲಿ ಕುಳಿತ ಮಂಕುತಿಮ್ಮ ಮೂಲೆಯಲ್ಲಿ ಕುಳಿತೇ ಕಾಲವನ್ನ ಗೆದ್ದನಲ್ಲವೇ

  2. ಮಕ್ಕಳ್ ದೂರಂ ಪೋಗ-
    ಲ್ಕಕ್ಕರೆಯಿಂ ನೆನೆಯೆ ಮನದೆ ಸಾರ್ವರ್ ತಾಯಂ
    ಚಕ್ಕನೆ ಜಿಗಿಯಲ್ ನಭದಿಂ
    ತೆಕ್ಕೆಯೊಳೈದಪರದಲ್ತೆ ಚಣದೊಳ್ ಭುವಿಯಾ

    ಮಕ್ಕಳು ದೂರ ಹೋಗಲು ನೆನೆದ ತತ್ಕ್ಷಣ ಮನದಲ್ಲಿ ತಾಯಿಯನ್ನು ಸೇರುತ್ತಾರೆ (ಹಾಗೆಯೇ) ನಭದಿಂದ ಜಿಗಿದ ತತ್ಕ್ಷಣವೇ (ತಾಯಿಯಾದ) ಭೂಮಿಯ ತೆಕ್ಕೆಯನ್ನ ಸೇರುತ್ತಾರೆ

  3. ಮೂಲೆ

    ಮೂಲೆಯ ಧೂಳಿ ಕೆಮ್ಮನೆ ಕೆದಂಕುತೆ ಪಾರ್ದು ಗವಾಕ್ಷದಕ್ಷಿಯಿಂ
    ಜಾಲಿಪ ಕೋಲ್ವೆಳಂಕಿಗೆ ಪಳಂಚಿರೆ ಚಿತ್ತದ ಕೋಣೆಯಿಂ ಲಸ-
    ಲ್ಲೀಲೆಯ ಕಲ್ಪನಾಶಕಲಮೊಂದು ಕವಿಪ್ರತಿಭಾಸ್ಫುಟತ್ವದಿಂ
    ಕೇಲಿಯನೊಂದುವಂತೆಸೆಯೆ ತುಚ್ಛಮದೆಂಬೆನೆ ಮೂಲೆ ಮೇಲೆನಲ್

    ಮೂಲೆಯ ಧೂಳಿ ತನ್ನಷ್ಟಕ್ಕೆ ತಾನೆದ್ದು ಕಿಡಕಿಯ ಬೆಳಕಿನ ಕೋಲಿನಲ್ಲಿ – ಮನದ ಮೂಲೆಯ ಕಲ್ಪನೆಯೊಂದು ಕವಿಪ್ರತಿಭೆಗೆ ಹೊಳೆಯುವಂತೆ – ಶೋಭಿಸುತ್ತಿರುವಾಗ ಆ ಮೂಲೆ ತುಚ್ಛ ಎಂದು ಹೇಳುವೆನೇ?

  4. ಗ್ರಾಮ್ಯಪರಿಹಾರ – ಸಮಸ್ಯಾಪರಿಹಾರಭಾವದಲ್ಲಿ, ವರ್ಣನೆಯಂತೆ ಅಲ್ಲ.
    (Dark)ಕಂದಿರ್ಪಽಳೆನ್ನುತ್ತೆ ತ್ಯಜಿಸನ್ಯಽ ಸತಿಯನ್ನುಽ
    (Pink)ಕೆಂದಿರ್ಪಽಳಂ ಕೊಳ್ಳೆಽ ಸುಖಮೇಂ!
    ಮುಂದೊಮ್ಮೆಽ ರೇಗಿರ್ಪಂ ಸತಿಯನ್ನುಽ ಬಡಿಯುತ್ತೆಽ
    “ಹಿಂದೋಳಽ ಸೇವೆಽ ಸೈ, ನೀನೋ!!” – ಸಾಂಗತ್ಯ

  5. ಮನೆಯ ಮೂಲೆಯು ಪೊರಕೆಬೆಂಕಿಯಿಂ ಕಪ್ಪಿಟ್ಟಿ-
    ತೆನಿತೊ ಕಂದಗಳ ’ದೃಷ್ಟಿ’ಯನು ತೆಗೆದು|
    ಬಿನದದಿಂ ಕಂಡದನು ಶಾಶ್ವತದ ದಿಟ್ಟಿಬೊ-
    ಟ್ಟೆನುವೆನಾಂ ಗೃಹದೊಳಗ ಸೌಂದರ್ಯಕಂ||

  6. ‘Skydiving’ is actually the ‘free fall’ before the parachute is opened:
    ಗುಂಪೊಂದು ವ್ಯೋಮದಿಂ ಜಿಗಿವಾಗ ಪಿಡಿಗುಮೈ
    ಸಂಪರ್ಕಕೊರ್ವರೊರ್ವರ ಕೈಯನು|
    ಗಾಂಪನೊರ್ವಂ ಕೈಗೆ ಸಿಕ್ಕಿದುದನೇ ಪಿಡಿದ
    ಕೆಂಪ ವಾಯುಚ್ಛತ್ರವಂ(Parachute) ಪಡೆಗನ!!
    (ಪಡೆ=team, ಪಡೆಗ=teammate)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)