Feb 112020
 

  6 Responses to “ಪದ್ಯಸಪ್ತಾಹ ೩೯೯: ಚಿತ್ರಕ್ಕೆ ಪದ್ಯ”

  1. ಆ ನರ್ತಿಸುವ ಗಂಡುನವಿಲಿನ ಹ್ಯಾಪ್ ಮೋರೆಯಿಂದಲೇ ತಿಳಿಯುತ್ತದೆ, ಅದಕ್ಕಿಂತ ಚೆನ್ನಾಗಿರುವ/ ಚೆನ್ನಾಗಿ ನರ್ತಿಸುವ ಇನ್ನೊಂದು ಗಂಡುನವಿಲಿನತ್ತ ಆ ಹೆಣ್ಣು ನೋಡುತ್ತಿದೆ ಎಂದು!

    ಕರ್ಮಣ್ಯೇವಾಧಿಕಾರಸ್ತೇ ಸೋಲೊಪ್ಪಿಕೊಳೊ ಬರ್ಹಿ ನೀಂ|
    ಆ ಪೆಣ್ಣ ಸೆಳೆದಿರ್ಪಂ ಕಾಣ್ ಸುಜಾತತರನೊರ್ವನೈ|| ಅನುಷ್ಟುಭ್

    ಮತ್ತೇರಿ ನರ್ತಿಸದೆ| ಕತ್ತ ನೀಂ ಕೊಂಕಿಸದೆ| ಅತ್ತಿತ್ತ ತೂರಿಡದೆಲಾ
    ಒತ್ತಾಗಿ ವ್ಯಸ್ತಮಿಹ| ಉತ್ತಿರ್ಪ ಪೈರಿನೊಡ|ನೊತ್ತಟ್ಟಿನಿಂ ಗರಿಯ ನೀಂ|
    ಹೊತ್ತೇನು ಭಾಗ್ಯವಲೆ| ಇತ್ತಂ ಮಯೂರಿಯಳ| ಚಿತ್ತಂ ಸುಮೋಹಿತಮೆ ಪೇಳ್
    ಮತ್ತೊರ್ವನಾಡಿಹನು| ಸುತ್ತುತ್ತೆ ಹಾರಿಳಿದು| ಮುತ್ತಿಕ್ಕೆ ಪೋದಳದೆಗೋ|| ಅಶ್ವಧಾಟೀ (12 ಪ್ರಾಸಗಳು)

  2. ನೂರು ಕಣ್ಣುಗಳ ತೆರೆದು ಚೆಲುವೆ ನಾ ನಿನ್ನ ನೋಡ ಬಂದೆ
    ಮೋರೆ ತಿರುಗಿಸುತೆ ಗತ್ತಿನಿಂದ ನೀನತ್ತ ತಿರುಗಿ ನಿಂದೆ
    ನೀರೆ ನಿನಗೆ ನನ್ನಂದ ಕಂಡರೇಕಿಷ್ಟು ಹೊಟ್ಟೆಕಿಚ್ಚು?
    ಬಾರೆ! ನಿನ್ನ ಕಣ್ ತಣಿಯದಾಗೆ ನನ್ನಂದವೇನು ಹೆಚ್ಚು?

  3. ನಾಟ್ಯ ಮಯೂರಿ

    ನಾನೇ ನಾಟ್ಯ ಮಯೂರಿ
    ಕಾರ್ಮುಗಿಲ ಕಂಡು ನರ್ತಿಸಿದ ಚಂದ್ರ ಚಕೋರಿ

    ಕಾರ್ಮುಗಿಲು ಕಂಡು ನರ್ತಿಸಿದೆ
    ನಿಲ್ಲಲಾಗದೆ ನಾನು ಗರಿ ಬಿಚ್ಚಿದೆ
    ಮನೋವೇದನೆಯ ತಾಳಲಾಗದೆ
    ಭಾವನೆಯ ವ್ಯಕ್ತ ಪಡಿಸಿದೆ

    ಮುಂಗಾರಿನ ಮಳೆಗಾಗಿ ಕಾದೆ
    ನರ್ತಿಸುತ್ತಾ ಅದರಲ್ಲಿ ನೆನೆದೆ
    ನಲ್ಲೆಗಾಗಿ ವಿರಹವ ತೋರಿಸಿದೆ
    ನಲ್ಲೆಯ ಕಲ್ಪನೆ ಮಿಲನದಿ ಆಲಿಂಗಿಸಿದೆ

    ಮಳೆ ಮೋಡ ಮಿಂಚುಗಳಲ್ಲಿ
    ಜಿನುಗುವ ಸೋನಿ ಮಳೆಯಲ್ಲಿ
    ನರ್ತಿಸುವೆ ನಲ್ಲೆಯೊಲವ ತೋರುವಲ್ಲಿ
    ಕಾರ್ಮುಗಿಲ ಕಂಡು ವಿರಹದಲ್ಲಿ

    ಶಂಕರಾನಂದ ಹೆಬ್ಬಾಳ

    • ನಮಸ್ಕಾರ, ದಯವಿಟ್ಟು ಛಂದೋನಿಯಮಗಳನ್ನು ಗಮನಿಸಿಕೊಳ್ಳಿ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)