Feb 242020
 

೧. ವನವಾಸ

೨. ಪುರಾತನ ವಸ್ತು

೩. ಹರಿಹರನ ಬಗ್ಗೆ ಪಾರ್ವತಿ ಮತ್ತೆ ಲಕ್ಷ್ಮಿಯ ಸಂವಾದ 

  6 Responses to “ಪದ್ಯಸಪ್ತಾಹ ೪೦೧: ವರ್ಣನೆ”

  1. ಪಾರ್ವತಿ ಹಾಗೂ ಲಕ್ಷ್ಮಿಯರ ಭಾವ::
    ರಕ್ಕಸಗಿಂದೀಗಾವಿಕ್ಕುವೆವೆನ್ನುತ್ತ
    ಲೊಕ್ಕೊರಲಿಂದ ನೆಪ ಹೇಳಿ – ಪೋದರು
    ಸಿಕ್ಕಲಿ ಸೊಕ್ಕ ಮುರಿವೆವು

  2. ನೋಡೌ ನಿನ್ನನೆ ಪಕ್ಕಕಿಟ್ಟಭವನಾ ವಿಷ್ಣ್ವರ್ಧಮಂ ಕೊಂಡನೌ
    ಆಡಿರ್ಪಂ ಗಡ ನಿನ್ನ ನಚ್ಚಿನೊಡನಂ, ಮದ್ವಲ್ಲಭಂ ನಲ್ಮೆಯಿಂ
    ಕೂಡಿಟ್ಟೆನ್ನನೆ ಹೃತ್ಸರೋಜದೊಳೆನಲ್ ಲಕ್ಷ್ಮಿ ಸ್ವಯಂ, ಗೌರಿಯುಂ
    ಛೇಡಿಪ್ಪಳ್ ಹರಿಗಾಯ್ತೆ ಪೆಣ್ಣಿನೆಡೆಯೊಳ್ ಛಿಃ ವೈಪರೀತ್ಯಂ ವಲಂ

    ನೋಡೇ ನಿನ್ನನ್ನೇ ಪಕ್ಕಕ್ಕಿಟ್ಟು ನಿನ್ನ ಗಂಡ ವಿಷ್ಣುವಿನ ಅರ್ಧವನ್ನು ಕೊಂಡಿದ್ದಾನೆ,ನಿನ್ನ ಪ್ರೇಮದ ಜೊತೆ ಆಟವಾಡಿದ್ದಾನೆ, ಆದರೆ ನನ್ನ ಗಂಡ ನನ್ನನ್ನು ಎಂದೂ ಕಳಕೊಳ್ಳದಂತೆ ತನ್ನ ಹೃದಯದಲ್ಲೇ ಇಟ್ಟುಕೊಂಡಿದಾನೆ ಎಂದು ಲಕ್ಷ್ಮಿ ಅನ್ನಲು, ಗೌರಿ ಛೇಡಿಸಿದಳು, ಛಿಃ ಹರಿಗೆ ಹೆಣ್ಣಿನ‌ ಕಡೆಯ ಭಾಗವಾಯಿತೇ ಎಂದು.

  3. ಹರಿಹರನ ಬಗೆಗೆ ಪಾರ್ವತಿ-ಲಕ್ಷ್ಮಿಯರ ನಡುವಿನ ಸಂವಾದ
    ಸರಸೋತಿಗಾಪಾಟಿ ಮೆರೆಯಲುಬೇಡೆನ್ನು
    ಹರಿಹರನನ್ನು ಮೂದ್ಲಿಸಿ,| ನೋಡೆನ್ನು
    ಜರಬನ್ನು ದತ್ತಾತ್ರೇಯನ||

  4. ವನವಾಸ:
    ಬಸವಳಿದೊಡೇಂ ವನದೆ, ನಾಲೆಯೇ ನಲ್ಲಿಯಲೆ
    ಬಿಸಿಲಾದೊಡೇಂ ಸೂರ್ಯನೇ ಸೂರು ಕಾಣ್|
    ವಸುವದುವೆ ವಸತಿಯೈ, ಪಾಯಿಖಾನೆಯು ಕೂಡೆ,
    ಕೆಸವೆಲೆಯೆ ಹಸಿವಿಂಗೆ – ಹಾದಿರಂಪ||

  5. ಪುರಾತನ ವಸ್ತು

    ಸ್ಥಿತ್ಯಂತರಂ ಪೊಂದದೆ ನಿಲ್ಲೆ ಪೆರ್ಚೇಂ
    ಅತ್ಯುನ್ನತಂ (ಅದು) ಪೊಂದಿರುವೆಲ್ಲ ಸತ್ತ್ವಂ|
    ಘಾತ್ಯಂ ಗಡಾಗೇಂ ಬಹುಭಾಗಮೆಲ್ಲಂ
    ನಿತ್ಯಂ ತದಂತರ್ಹಿತಮೌಲ್ಯಮೆಂತೋ|| ಇಂದ್ರವಜ್ರಮ್

  6. ವನವಾಸ:
    ಕಳವಳಮೆಸಗುತೆ ಮುನ್ನಂ
    ಕಳೆದ ಯುಗಂಗಳೊಳರಣ್ಯವಾಸಂ ಬಗೆಯಲ್
    ಕಲಿಯುಗದೊಳಮದನರಸುತೆ
    ಪಲವೆಡೆ ಪೋಪರ್ ವಿಶೇಷಖೇಲನಮೆನಮೆಂಬರ್

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)