Mar 022020
 

  4 Responses to “ಪದ್ಯಸಪ್ತಾಹ ೪೦೨: ಚಿತ್ರಕ್ಕೆ ಪದ್ಯ”

 1. ಬೆಳಕಂ ಕಂಡೊಡನಯ್ದು ಸಾರದಿರಿದೋ ಪಾತಂಗವೃತ್ತಾಂತಮಂ
  ಕಳೆಗುಂ ಕಳ್ತಲೆ ತಾಳ್ದನಿಂಗೆ ದ್ರುತದಿಂ ಪಂಚತ್ವಮುಂ ಶಕ್ಯಮಯ್
  ತಿಳಿವಿಂಗಂ ಬೆಸಗೈಯೆ ಯಾಮಿನಿಯೊಳುಂ ಸ್ವಾರಸ್ಯಮಿರ್ಪಂತೆ ಬಾಳ್
  ತಳೆಯಲ್ ಕಷ್ಟಮನೀಸಿ ಜೈಸುವುದೆ ಲೇಸೈ ಮೀರ್ದು ಧಾವಂತಮಂ

 2. ಈಚೆಗೆ ಹೆಚ್ಚಿಹರಾಸ್ತಿಕರ್ಗೈವರ್ (ಶಿ.ದ್ವಿ.)
  ತೋಚಿದ ಹೋಮಂಗಳೆನೆಲ್ಲಂ|
  ಯೋಚಿಸೊ ಅಗ್ನಿಯೆ ಸಾಲದೆ ನಿನಗವು
  ಆಚೀಚೆಯ ಕೀಟವದೇಕೈ|| ಚತ್ರುರ್ಮಾತ್ರಾ
  ———–
  ಕತೆಯೊಂದರಿಂದ ಸ್ಫೂರ್ತ. ರಾಜನೊಬ್ಬ ಬೇಟೆಯಾಡುತ್ತ ವನದೊಳಗೆ ತುಸು ದೂರ ಸಾಗಿ, ಕತ್ತಲಾಗಿ, ಹಿಂದಿರುಗಲಾಗದೆ, ಹತ್ತಿರದ ಋಷ್ಯಾಶ್ರಮಕ್ಕೆ ರಾತ್ರಿವಿಶ್ರಾಂತಿಗಾಗಿ ತೆರಳುತ್ತಾನೆ. ಹೊರಬೇಲಿಯಾಚೆ ರಥವನ್ನು ನಿಲ್ಲಿಸಿ, ಪಾದರಕ್ಷೆಗಳನ್ನು ಬಿಟ್ಟು, ಮೈಲಿದೂರ ಕೈಮುಗಿದುಕೊಂಡು ನಡೆದುಬರುತ್ತಾನೆ. (ಋಷ್ಯಾಶ್ರಮಗಳು ಯಾವ ರಾಜ್ಯಕ್ಕೂ ಸೇರಿದವಲ್ಲ. ಯಾವ ರಾಜನೂ ಅವರ ಅದಿಪತಿಯಲ್ಲ. ಅವರ ಅಧಿಪತಿ ಬುಧ.) ಋಷಿಯು ಯಾವುದೋ ಹೋಮದಲ್ಲಿ ನಿರತನಾಗಿರುತ್ತಾನೆ. ಅದು ಮುಗಿಯುವವರೆಗೂ ಕಾದಿದ್ದು, ಆ ಹೋಮದ ಕುರಿತಾಗಿ ವಿಚಾರಿಸುತ್ತಾನೆ.
  ಋಷಿ: ದೇವಿಯು ಪ್ರತ್ಯಕಳಾಗಲು ಉದ್ದೇಶಿಸಿ ಮಾಡುತ್ತಿರುವ ಹೋಮ.
  ರಾಜ: ನಾನೊಂದು ಹವಿಸ್ಸು ಕೊಟ್ಟುನೋಡಲೆ?
  ಋಷಿ: ಹನ್ನೆರಡು ವರ್ಷಗಳಿಂದ ನನಗೆ ಸಿದ್ಧಿಸದ್ದು ನಿನಗೆ ಒಂದೇ ಹವಿಸ್ಸಿನಲ್ಲಿ ಸಿದ್ಧಿಸುತ್ತದೆ ಎಂಬ ಆತ್ಮಪ್ರತ್ಯಯವೆ?
  ರಾಜ: ಪ್ರಯತ್ನಿಸಲೆ?
  ಋಷಿ: ಆಗಬಹುದು.
  ರಾಜನು ಒಂದು ಮುಷ್ಟಿಯಷ್ಟು ಕಾಷ್ಟವನ್ನು ತೆಗೆದುಕೊಂಡು ಕಣ್ಣುಮುಚ್ಚಿ ಸಂಕಲ್ಪಿಸಿ ಹವಿಸ್ಸನ್ನು ಅಗ್ನಿಗೆ ಆಹುತಿಗೊಡುತ್ತಾನೆ. ದೇವಿ ಪ್ರತ್ಯಕ್ಷಳಾಗುತ್ತಾಳೆ!
  ಋಷಿ: ಇದೇನು ವೈಚಿತ್ರ್ಯವಮ್ಮ? ಇಷ್ಟು ಕಾಲ ನನಗೆ ಪ್ರತ್ಯಕ್ಷಳಾಗದೆ ಇಂದು ಇವನಿಗೆ ಒಲಿದೆಯಲ್ಲ!
  ದೇವಿ: ಅವನು ಏನೆಂದು ಸಂಕಲ್ಪಿಸಿದ ಗೊತ್ತೆ? ’ದೇವಿ ಪ್ರತ್ಯಕ್ಷಳಾಗು. ಅಗದಿದ್ದರೆ ಮುಂದಿನ ಹವಿಸ್ಸು ನಾನೇ.’
  ———–
  ಷರಾ: ಶಿಷ್ಯರು ಕಾಷ್ಟವನ್ನು ಆರಿಸಿ ತಂದುಕೊಡುತ್ತಾರೆ. ಯಾವುದೋ ಗ್ರಾಮಸ್ಥ ತುಪ್ಪವನ್ನು ತಂದುಕೊಡುತ್ತಾನೆ. ಬಾಣಸಿಗರು ಚರುವನ್ನು ಬೇಯಿಸುತ್ತಾರೆ. ಋಷಿಯು ಅವನ್ನು ಸುಟ್ಟಿದ್ದಷ್ಟೇ ಬಂತು.

 3. ಆರ್ದ್ರಂ ಜ್ವಲತಿ ಜ್ಯೋತಿರಹಮಸ್ಮಿ – ಉಪನಿಷದ್ವಾಕ್ಯ
  ಪತಂಗಮಿದು ಕಾಮದಿಂ ದಿಟದೆ ಪೀಡಿತಂ ಸಂತತಂ
  ರತಾರ್ಥನನೆ ಸೇರುಗುಂ ಪುಡುಕಿ ಮೈಥುನಕ್ಕಲ್ಲಮೇಂ|
  (Haste)ಉತಾವಳಿಯೆ ಕಾಮಕಂ ಕುರುಡದಪ್ಪುದೆಂದೆಂದುಮೈ
  ಹುತಾಶನನ* ಸಾರಿತೇಂ ವಿತತಶಾಂತಿಯಿಂದಿರ್ಪನಂ|| ಪೃಥ್ವೀ
  (*ಇಲ್ಲಿ ಶಾಂತವಾಗಿ ಬೆಳಗುವ ಜ್ಯೋತಿಗೆ ಏಕದೇಶೀಯವಾಗಿ)

 4. Deepraa snigdhadashaa tanvee ksHeeNamadhyeti deepikaam /
  upeyuShaH patangasya dhruvA hAnirdurAtmanaH

  ತೆಳುವಿನ ದೇಹ, ಸ್ನೇಹಸ್ವಭಾವ(ಎಣ್ಣೆಯ ಬತ್ತಿ), ಹೊಳಪಿನಿಂದ ಕೂಡಿದವಳು ಎಂದು ಕೂಡಲು ಬಂದ ಪತಂಗದಂತೆ ದುಷ್ಟನಾಶವು ಖಚಿತವಲ್ಲವೇ (ಜ್ವಾಲೆಯನ್ನ ಹೆಣ್ಣನ್ನ ಸಮೀಕರಿಸುವ ಪ್ರಯತ್ನ)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)