ಪದ್ಯಸಪ್ತಾಹ ೪೦೩: ಸಮಸ್ಯಾಪೂರಣ ಕನ್ನಡ ಪದ್ಯಗಳು Add comments Mar 102020 ೧. ಚಂಪಕಮಾಲೆಯ ಸಮಸ್ಯೆ: ಸತಿಯೊಡನೀಕ್ಷಿಸುತ್ತೆ ಬಿರಿವೂಗಳನುಮ್ಮಳಿಸುತ್ತೆ ಶೋಕಿಪಂ ೨. ರಥೋದ್ಧತದ ಸಮಸ್ಯೆ: ಪಂಡಿತಂ ಬಗೆಯೆ ಮೂರ್ಖನಾದಪಂ 3 Responses to “ಪದ್ಯಸಪ್ತಾಹ ೪೦೩: ಸಮಸ್ಯಾಪೂರಣ” ಹಾದಿರಂಪ says: March 10, 2020 at 4:14 pm ಡಿಂಡಿಮಕವಿ Vs. ತೆನಾಲಿ ರಾಮಕೃಷ್ಣ ಕಂಡು ರಾಜರ ಪ್ರಯಾಚಿಪರ್ಗಮೈ ಪಿಂಡೆ ಕರ್ಣವ ತೆನಾಲಿಯಿರ್ಪನೈ| (Trumpetry)ಡಿಂಡಿಮಂ ತಗದು, ಕೊಚ್ಚಿಕೊಂಬ ದು- ಷ್ಪಂಡಿತಂ ಬಗೆಯೆ ಮೂರ್ಖನಾದಪಂ|| Reply ಸೋಮ says: March 11, 2020 at 1:14 pm ಪ್ರತಿಹತಮಾದ ವೈರಿಯದಟಿಂ ಸ್ವಜನರ್ಕಳ ಸೇನೆ ಧಾವಿಸಲ್ ಪತನದೆ ಕಾಯ್ವೆನೌ ಗಡಿಯ ಮಾತೆಯೆ ಪೂಣ್ಕೆಯಿದೆಂದೆ ಪೋರೆ ಹಾ ಕೃತಜಯನಯ್ದನಯ್, ಸುತಕಲೇವರಮಂ ಪಿತನಶ್ರುನೇತ್ರದಿಂ ಸತಿಯೊಡನೀಕ್ಷಿಸುತ್ತೆ ಬಿರಿವೂಗಳನುಮ್ಮಳಿಸುತ್ತೆ ಶೋಕಿಪಂ Reply ಹಾದಿರಂಪ says: March 12, 2020 at 7:42 pm ಮತಿ-ಮತಗಳ್ ಜನಂಗಳೊಳದೆಂತುಮೆನುತ್ತಲಿ ವೇಳ್ವುದೋ ವಲಂ ಮೃತವಪುವಿಂಗಮರ್ಪಿಸಿರೆ ಪೂವ ವಿಧಂಗಳ ರಾಶಿರಾಶಿಯಂ! ಚಿತೆಯೆಡೆಗೈದಿರಲ್ ಸುತಕಲೇವರಮೀಕ್ಷಿಸಲಾಗದಾಸ್ಯಮಂ ಸತಿಯೊಡನೀಕ್ಷಿಸುತ್ತೆ ಬಿರಿವೂಗಳನುಮ್ಮಳಿಸುತ್ತೆ ಶೋಕಿಪಂ|| ಚಂಪಕಮಾಲಾ Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ಡಿಂಡಿಮಕವಿ Vs. ತೆನಾಲಿ ರಾಮಕೃಷ್ಣ
ಕಂಡು ರಾಜರ ಪ್ರಯಾಚಿಪರ್ಗಮೈ
ಪಿಂಡೆ ಕರ್ಣವ ತೆನಾಲಿಯಿರ್ಪನೈ|
(Trumpetry)ಡಿಂಡಿಮಂ ತಗದು, ಕೊಚ್ಚಿಕೊಂಬ ದು-
ಷ್ಪಂಡಿತಂ ಬಗೆಯೆ ಮೂರ್ಖನಾದಪಂ||
ಪ್ರತಿಹತಮಾದ ವೈರಿಯದಟಿಂ ಸ್ವಜನರ್ಕಳ ಸೇನೆ ಧಾವಿಸಲ್
ಪತನದೆ ಕಾಯ್ವೆನೌ ಗಡಿಯ ಮಾತೆಯೆ ಪೂಣ್ಕೆಯಿದೆಂದೆ ಪೋರೆ ಹಾ
ಕೃತಜಯನಯ್ದನಯ್, ಸುತಕಲೇವರಮಂ ಪಿತನಶ್ರುನೇತ್ರದಿಂ
ಸತಿಯೊಡನೀಕ್ಷಿಸುತ್ತೆ ಬಿರಿವೂಗಳನುಮ್ಮಳಿಸುತ್ತೆ ಶೋಕಿಪಂ
ಮತಿ-ಮತಗಳ್ ಜನಂಗಳೊಳದೆಂತುಮೆನುತ್ತಲಿ ವೇಳ್ವುದೋ ವಲಂ
ಮೃತವಪುವಿಂಗಮರ್ಪಿಸಿರೆ ಪೂವ ವಿಧಂಗಳ ರಾಶಿರಾಶಿಯಂ!
ಚಿತೆಯೆಡೆಗೈದಿರಲ್ ಸುತಕಲೇವರಮೀಕ್ಷಿಸಲಾಗದಾಸ್ಯಮಂ
ಸತಿಯೊಡನೀಕ್ಷಿಸುತ್ತೆ ಬಿರಿವೂಗಳನುಮ್ಮಳಿಸುತ್ತೆ ಶೋಕಿಪಂ|| ಚಂಪಕಮಾಲಾ