Mar 182020
 

೧. ಸಮುದ್ರ-ಜಲಪಾತಗಳ ಸಂವಾದ

೨. ಸರದಿಯ ಸಾಲು (Queue)

೩. ಊರುಗೋಲು 

  6 Responses to “ಪದ್ಯಸಪ್ತಾಹ ೪೦೪: ವರ್ಣನೆ”

  1. ಸಮುದ್ರ-ಜಲಪಾತಗಳ ಸಂವಾದ
    ಜಲಪಾತ: ಸುದೂರಂ ನೀನೆನ್ನಂ ನಿಲಿಸಿರುವೆಯೇಕೋ ನದೀನಾಥ ಪೇಳೈ
    ಸಮುದ್ರ: (Excited)ಉದೀರ್ಣಂ ನೀಂ ಬೀಳಲ್ ಥಪಥಪನೆ, ಉಲ್ಲೋಲಕಲ್ಲೋಲನಾನೈ|
    ಇದೇನಿಂತೀ ವಾರೀಶನದರುವನೆಂದೆಂಬರೈ ನೋಡೆ ಲೋಗರ್
    ಸದಾ ಗಾಂಭೀರ್ಯಾಂಗಂ, ನಿಜಘನತೆಗಾಂ ತಾರೆನೆಂದೆಂದು ಕುಂದಂ|| ಮೇಘವಿಸ್ಫೂರ್ಜಿತ

  2. ತಿಳಿಯರೆ ವಂಚಕನೀಶನೆನ್ನುತಲೆಲ್ಲರುಂ
    ಸೆಳೆವನೆ ಪುಟ್ಟಿಸಿದಾದ್ಯತಾಕ್ರಮದೊಳ್ ವಲಂ|
    ಸುಳುಹಿರದೈ ಸಲೆ ಸಗ್ಗಮಕ್ಕುದೊ ನಾಕಮೋ
    ಕೊಳೆವರೆ ಸುಮ್ಮನೆ ಶ್ರೇಣಿಯೊಳ್ ಸಲೆ ನಿಲ್ಲುತುಂ|| ನವನಳಿನ

  3. ಊರುಗೋಲು
    ಬರಿದೆ ಬೆನ್ನುಕುಸಿದರ್ಗಹುದೇಂ ವಲಂ
    ಕರದೆ ಪ್ರಗ್ರಹಿಸೆ (ಭದ್ರವಾದ)ಬಿಂಕಮಿಹೂರುಗೋಲ್|
    (Walking)ಚರಣಕಂ ಬಳಸೆ ವಾರ್ಧಕಪೂರ್ವದೊಳ್
    ಬಿರುಸಿನಿಂ (Nape)ಹೆಡಕದಿನ್ನಿನಿತಿರ್ಪುದೈ|| ವಿದ್ರುತವಿಲಂಬಿತ

    Same idea composed in caupadi just to accommodate an English word
    ಹೆಗಲು ಬಾಗಿದರಿಂಗೆ ಮಾತ್ರಮೇನೂರ್ಗೋಲು
    ಹಗುರಮೇಂ ದೇಹವದು ಅಂತಾದೊಡಂ|
    ಸೊಗಸುಗೋಲಂ ಬಳಸಿ ನಡೆಯೆ ತುಸು ಮುನ್ನಮೇ
    ಫಿಗರು ನೆಟ್ಟಗೆ ಇರ್ಪುದಿನ್ನು ಕಾಲಂ||

    • ಬಿಂಕಮಿಹೂರುಗೋಲ್->ಅರ್ಥವೇನು? ಪದಚ್ಛೇದ ಹೇಗೆ? ಬಿಂಕಮಿಹ ಊರುಗೋಲ್ ಎಂದೆ?

    • ಹೌದು. ಬೆನ್ನುಬಾಗಿದಮೇಲೆ, ಭದ್ರವಾದ ಊರುಗೋಲನ್ನು ಬಳಸಿದರೂ ತುಂಬ ಸುಖವೇನಾಗದು. ವಾರ್ಧಕ್ಯದ ಆರಂಭದಲ್ಲೇ ಜಾಗ್ರತೆಯಾಗಿ ಊರುಗೋಲನ್ನು ಬಳಸಿದರೆ ಬೆನ್ನು ಬಾಗುವುದನ್ನು ತುಸು ಮುಂದೂಡಬಹುದು.

  4. ಸಮುದ್ರ:
    ವಿರಹಮಂ ತಾಳಲಾರದೆಯೆ ಭೋರ್ಗರೆದು ನಾಂ
    ತ್ವರೆಯಿನರಸುತೆ ನಿನ್ನನೈದಿರ್ಪೆ ತಟಕಂ
    ಜಲಪಾತ:
    ಭರದಿಂದೆ ಬಿಳ್ದೆದ್ದು ಜಿಗಿದು ಪರ್ವತಗಳಿಂ-
    -ದರಸಿ ಬರುತಿರ್ಪೆ ಕೇಳ್ ನಿನ್ನನರಸಾ…

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)