Mar 102020
 

೧. ಚಂಪಕಮಾಲೆಯ ಸಮಸ್ಯೆ:

ಸತಿಯೊಡನೀಕ್ಷಿಸುತ್ತೆ ಬಿರಿವೂಗಳನುಮ್ಮಳಿಸುತ್ತೆ ಶೋಕಿಪಂ

೨. ರಥೋದ್ಧತದ ಸಮಸ್ಯೆ:

ಪಂಡಿತಂ ಬಗೆಯೆ ಮೂರ್ಖನಾದಪಂ

  3 Responses to “ಪದ್ಯಸಪ್ತಾಹ ೪೦೩: ಸಮಸ್ಯಾಪೂರಣ”

  1. ಡಿಂಡಿಮಕವಿ Vs. ತೆನಾಲಿ ರಾಮಕೃಷ್ಣ
    ಕಂಡು ರಾಜರ ಪ್ರಯಾಚಿಪರ್ಗಮೈ
    ಪಿಂಡೆ ಕರ್ಣವ ತೆನಾಲಿಯಿರ್ಪನೈ|
    (Trumpetry)ಡಿಂಡಿಮಂ ತಗದು, ಕೊಚ್ಚಿಕೊಂಬ ದು-
    ಷ್ಪಂಡಿತಂ ಬಗೆಯೆ ಮೂರ್ಖನಾದಪಂ||

  2. ಪ್ರತಿಹತಮಾದ ವೈರಿಯದಟಿಂ ಸ್ವಜನರ್ಕಳ ಸೇನೆ ಧಾವಿಸಲ್
    ಪತನದೆ ಕಾಯ್ವೆನೌ ಗಡಿಯ ಮಾತೆಯೆ ಪೂಣ್ಕೆಯಿದೆಂದೆ ಪೋರೆ ಹಾ
    ಕೃತಜಯನಯ್ದನಯ್, ಸುತಕಲೇವರಮಂ ಪಿತನಶ್ರುನೇತ್ರದಿಂ
    ಸತಿಯೊಡನೀಕ್ಷಿಸುತ್ತೆ ಬಿರಿವೂಗಳನುಮ್ಮಳಿಸುತ್ತೆ ಶೋಕಿಪಂ

  3. ಮತಿ-ಮತಗಳ್ ಜನಂಗಳೊಳದೆಂತುಮೆನುತ್ತಲಿ ವೇಳ್ವುದೋ ವಲಂ
    ಮೃತವಪುವಿಂಗಮರ್ಪಿಸಿರೆ ಪೂವ ವಿಧಂಗಳ ರಾಶಿರಾಶಿಯಂ!
    ಚಿತೆಯೆಡೆಗೈದಿರಲ್ ಸುತಕಲೇವರಮೀಕ್ಷಿಸಲಾಗದಾಸ್ಯಮಂ
    ಸತಿಯೊಡನೀಕ್ಷಿಸುತ್ತೆ ಬಿರಿವೂಗಳನುಮ್ಮಳಿಸುತ್ತೆ ಶೋಕಿಪಂ|| ಚಂಪಕಮಾಲಾ

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)