Apr 142020
 

೧. ದೇವಾಲಯದ ಘಂಟೆ

೨. ಮನೆಯ ಮುಂದಿನ ಮರ

೩. ಕಪ್ಪು

  3 Responses to “ಪದ್ಯಸಪ್ತಾಹ ೪೦೭: ವರ್ಣನೆ”

  1. ಮನೆಯಲ್ಲಿ ನಿತ್ಯಪೂಜೆಮಾಡುವವರು ಸುಮ್ಮನೆ ಗಂಟೆಯನ್ನು ಕೈಗೆ ತೆಗೆದುಕೊಂಡ ಶಬ್ದವಾದರೆ ಸಾಕು, ಮನೆಯವರೆಲ್ಲ ಪಂಚಾಮೃತಕ್ಕಾಗಿ ಓಡಿಬರುತ್ತಾರೆ. ಆದರೆ ಹಿಡಿಯಲಾಗದೆಂದು ಕಟ್ಟಿರುವ, ಗುಡಿಯಲ್ಲಿನ ದೊಡ್ಡ ಗಂಟೆಯ ನಾಲಗೆಯನ್ನು ಹಿಡಿದು, ಊರಿಗೆಲ್ಲ ಕೇಳುವಂತೆ ಬಾರಿಸಿದರೂ, ಒಳಗಿನ ದೇವರು ಎದ್ದು ಬರುವುದಿಲ್ಲ.
    ಮನೆಯ ಗಂಟೆಯ ಹಿಡಿದು ಹಿಡಿಯ ಬಿಗಿಸೆಲೊ ಸಾಕು
    ಮನೆಯವರೊಡನೆಯೇ ಪ್ರಸಾದಕೈದುವರು|
    ಕೊನೆವಿಡಿದು ಶಂಕುವಿನ ತೂಗಿಯುಂ ದೇವಳದೆ
    ಜಿನನೈದನೈ ಗರ್ಭಗುಡಿಯೊಳಗಿನಿಂ||
    (ಶಂಕು = ಗಂಟೆಯ ನಾಲಗೆ, the clapper of a gong. ಜಿನ=ದೇವರು)

  2. ದೇವಾಲಯದ ಘಂಟೆ(ಮಂದಾನೀಲ ರಗಳೆ)

    ದೇವರ ಮುಂದಿನ ಗಂಟೆಯು ನುಡಿದಿದೆ
    ಜೀವನ ಸಾಧಿಪ ಜೀವವು ಸೆಳೆದಿದೆ
    ವೇಷವ ಬದಲಿಪ ಮನುಜರು ಮನದಲಿ
    ಘೋಷವು ಹಾಕುತ ಬಂದರು ಚಣದಲಿ

    ದೇವನು ಕುಳಿತನು ನಾದವ ಕೇಳುತ
    ಸೇವೆಯ ಮಾಡುವ ಜನರನು ನೋಡುತ
    ದಯೆಯನು ತೋರುತ ದೇವರು ಬರಲಲಿ
    ಮಾಯೆಯ ಗೆದ್ದಿಹ ಶರಣನ ತೆರದಲಿ

    ಶಂಕರಾನಂದ ಹೆಬ್ಬಾಳ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)