Apr 292020
 

೧. ವಂಶಸ್ಥ ಛಂದಸ್ಸಿನ ಸಮಸ್ಯೆ 
ನ  ಪುಂಸಕಂ ಪುತ್ರಿಯ ತಂದೆಯಾದಪಂ

೨. ಇಂದ್ರವಂಶದ ಸಮಸ್ಯೆ:
ಕಳಂಕಿತಂ ಬಿಂಬಮಶೀತರಶ್ಮಿಯಾ

  2 Responses to “ಪದ್ಯಸಪ್ತಾಹ ೪೦೯: ಸಮಸ್ಯಾಪೂರಣ”

  1. ಅಪೂರ್ಣನೈ ಅಂಗದೆ ಸಾಧ್ಯವೆಂತುಟೋ
    ನಪುಂಸಕಂ ಪುತ್ರಿಯ ತಂದೆಯಾದಪಂ|
    ಸಪೂರ್ಣನಂಗಾಂಗದೊಳೀತ ಮಾಂಸಲಾ-
    ನಪುಂಸಕಂ ಪುತ್ರಿಯ ತಂದೆಯಾದಪಂ||
    (ಮಾಂಸಲನಾದ ಅನಪುಂಸಕನು ….)

  2. A dead star
    ಝಳಂ ಸದಾ ತಾನಿರದಯ್ಯ ತಾರೆಯೊಳ್
    ಖಿಳಂ ಗಡಾ ಕಾಂತಿಯು ಭೂರಿಕಾಲದೊಳ್|
    ಕುಳಿರ್ಗೊಳುತ್ತುಂ ಬಹುಕಾಲದಂತ್ಯದೊಳ್
    ಕಳಂಕಿತಂ ಬಿಂಬಮಶೀತರಶ್ಮಿಯಾ||
    ————
    ಮುಳುಂಗುತಿಲ್ಲಾ ಎಡೆಗಂ ಗಡೈದುವಂ (other hemisphere)
    ಝಳಂ ಗಡೇನೈ! ಸುರಿಸುತ್ತೆ-ಹೀರುತುಂ|
    ಕೊಳಂಗಳಂ ಗೈದಿರೆ ನಿರ್ಮಳಂ ಸದಾ-
    ಕಳಂಕಿತಂ ಬಿಂಬಮಶೀತರಶ್ಮಿಯಾ||
    ————
    ಕಲತ್ರಳುಂ ಮೇಣ್ ಸುತರೆದ್ದು ಜಾವದೊಳ್
    ವಿಲಾಸದಿಂ ನಿದ್ರಿಪನಂ ಗಡೇಳೆನಲ್|
    ಪ್ರಲಾಪಮಂ ಗೈಯುತೆ ನಿದ್ರಿಪಾತನಿಂ
    ಕಲಂಕಿತಂ ಬಿಂಬಮಶೀತರಶ್ಮಿಯಾ||
    ————
    “ಖಿಲಂ ಭವಚ್ಚರ್ಮವು ಸೂರ್ಯರಶ್ಮಿಯಿಂ”
    ಪ್ರಲಾಪಮಿಂತಿರ್ಪ ಪ್ರರೋಚನಂಗಳಿಂ| (Advertisements)
    ವಿಲೇಪಮಂ ಗೈಯೆ ರಸಾಯನಂಗಳಂ
    ಕಲಂಕಿತಂ ಬಿಂಬಮಶೀತರಶ್ಮಿಯಾ||
    (ಸೂರ್ಯನ ಖ್ಯಾತಿಗೆ ಕಳಂಕ)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)