Nov 102020
 

ವರ್ಣನೆಯ ವಸ್ತುಗಳು:

೧. ಆಕಾಶದ ಬಣ್ಣಗಳು

೨. ಹಾರುವ ಕುದುರೆ

೩. ಮಲೆನಾಡಿನ ಒಂಟಿಮನೆ 

ಅರ್ಧಸಮವೃತ್ತವಾದ ಔಪಚ್ಛಂದಸಿಕಾ  ಛಂದಸ್ಸಿನ ಸಮಸ್ಯೆ:

ನರನಿಂದಾದುದು ವಾನರಂಗಳಲ್ತೇ 

ಗತಿ:

ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು)

ನ ನ ನಾ ನಾ ನ ನ ನಾ ನ ನಾ ನ ನಾ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು)

  6 Responses to “ಪದ್ಯಸಪ್ತಾಹ ೪೨೧”

 1. ಉರಗಂ ವಡೆವೊಲ್ ಭುಜಂಗಮಂ ಮೇಣ್
  ಕರಿ ತಾಂ ಪುಟ್ಟಿಪುದಂತೆ ಹಸ್ತಿಯಂ ಕಾಣ್|
  ಕುರಿಯುಂ ಕುರಿಯನ್ನೆ ಈಯುವೊಲ್ ವಾ-
  ನರನಿಂದಾದುದು ವಾನರಂಗಳಲ್ತೇ||

 2. ಬಯಲಿನಿತೆ ಅಲ್ಲಲ್ಲಿ ಮಲೆನಾಡಿನೊಳಗೆಲ್ಲ
  ಪಯಿರಿಲ್ಲ ಅಲ್ಲೆಲ್ಲ ಮನೆಗಳುದಿಸೆ|
  ನಯನವೋಗುವ ದೂರಕೊಂದೊಂದೆ ಮನೆಯಲ್ಲಿ
  ಹುಯಿಲಿಡಲುಬೇಕು ನೆರೆಯವರ ಕರೆಯೆ||

 3. ಆಕಾಶದ ಬಣ್ಣಗಳು
  ನಿರ್ಗುಣಂ ಗಗನಮಲ್ತೆ ಗಡಾ ಸಂ-
  ಸರ್ಗದಿಂದಲದೊ ಕಾಣ್ ನಿಜಗರ್ಭಾಂ-|
  ತರ್ಗತೋಲ್ಕ-ಶಶಿ-ತಾರೆಗಳಿಂದಂ
  ಸರ್ಗವಪ್ಪುದೆನಿತೋ ರುಚಿವರ್ಗಂ||

 4. ಹಾರುವ ಕುದುರೆ
  ’ವೇಗದಿಂದೋಡಿದೆನು ಹಾರವೆನು ಈಗೆಂ’ದು
  ಬೀಗಲೇಕೋ ಹಯವೆ ಕ್ಷಣಿಕಕಾಗಿ|
  ಮೇಗಳೇರಿದೊಡೇನು ಅಲ್ಲಿಯೇ ಖೇಚರದ
  ಹಾಗೆ ನೀಂ ಮರದೆ ನಿದ್ರಿಸಬಲ್ಲೆಯೇಂ!!

 5. ಕನ್ನಡ ಸಕ್ಕದ ಗಳ ಈ ಅಪರೂಪದ ಭಾಷೆ, ಸಾಹಿತ್ಯ ‌‌‌ವ್ಯಾಕರಣ ಛಂದಸ್ಸು ಅಲಂಕಾರ ಗಳ ಚೆಲುವಾದ ಅರ್ಥಪೂರ್ಣ ಪದಪಾದಪದ್ಯಪದ್ಮಸಾಗರದ ಅನನ್ಯವಾದ ಮಹೋನ್ನತ ರಚನೆಗಳು..ಅಬ್ಬಾ…ಈ ಸರಸ್ವತಿಯ ಸುತರಂ ಕಂಡು…ಈ‌ ಮನಕೆ ತುಂಬಾ ಸಂತೋಷವಾಯಿತು..ಶ್ರೀ ಗುರುಗಳಿಗೆ,ಗುರುಮಾತೆಯರಿಗೆ ನನ್ನ ಈ ಬಡವನ ಅನಂತ ಶಿರಸಾಷ್ಟಾಂಗ ಪ್ರಣಾಮಗಳು…ಈ ಚರ್ಚೆ ಸಾಹಿತ್ಯ ಸಂವಾದ ನಿರಂತರವಾಗಿರಲಿ….ಹಳೆಗನ್ನಡ ನಿಮ್ಮಿಂದ ಹೊಳೆವ ಕನ್ನಡವಾಗಿದೆ..

  • ಧನ್ಯವಾದ. ಪದ್ಯರಚನೆಯಲ್ಲಿ ಭಾಗವಹಿಸಿರೆಂದು ತಮ್ಮನ್ನು ಆಹ್ವಾನಿಸುತ್ತಿದ್ದೇನೆ. ಪದ್ಯಪಾನದ ಮೌಲ್ಯವೃದ್ಧಿಯಾಗಲಿ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)