Nov 172020
 

ವರ್ಣನೆಯ ವಸ್ತುಗಳು: 

೧. ಎಳೆ ಬಿಸಿಲು

೨. ತೋರುಬೆರಳು

೩. ಸರಪಳಿ 

ಕಂದಪದ್ಯದ ಸಮಸ್ಯೆ:

ಕಾಲುಳಿದುಂ ಗೆಲ್ದನಲ್ತೆ ಸ್ಪರ್ಧೆಯೊಳೋಡಲ್ 

  8 Responses to “ಪದ್ಯಸಪ್ತಾಹ ೪೨೨”

  1. ಮಗುವೇನು, ಕರುವೇನು, ತರಕಾರಿಯೇನು ಮೇಣ್
    ಚಿಗುರೇನು ಸೊಪ್ಪುಗಳ, ಪಣ್ಗಳೇನು|
    ಜಿಗಿವ ಮರಿಗಳ್ ಬೆಕ್ಕು-ಜಿಂಕೆ-ನಾಯಿಯವೇನು
    ಬಗೆ ಬಿಸಿಲದುಂ ಚೆಂದವೆಳೆಯದಿರೆ ಕಾಣ್||

  2. ಬೆರಳೊಂದಕೊಂದೊಂದು ಸಂಕೇತವಿಹುದು ಹೆ-
    ಬ್ಬೆರಳ ತೋರುವರಲ್ತೆ ವಿಜಯಕಾಗಿ|
    ಕಿರುಬೆರಳನಾಚಾರ್ಯರಿಗೆ ತೋರುವನು ಛಾತ್ರ
    ನಿರುಕಿಸೆನ್ನಲು ತಿಳಿಸೆ ತೋರುಬೆರಳು||

    ಬೆರಳಿದೊಮ್ಮೆಯೆ ಮಾತ್ರವೊಂದಿಡೀ ಜೀವಿತದೆ
    ಮೆರೆಯುವುದು – ಉಂಗುರವ ತೊಡಲು ನೋಡೆ|
    ಅರುಹದಿರುವೆನು ನಾನು ತಿಳಿದಿರುವೆ ನೀನಲ್ತೆ
    ಕರಮಧ್ಯದಂಗುಲಿಯ ವಿಷಯವನ್ನು||

  3. ಎಳೆಬಿಸಿಲು

    सतां हितवचांसीव बालभास्कररश्मयः ।
    पुष्टिं प्रकाशं यच्छन्ति न  तुदन्ति दहन्ति वा ।।

  4. ಖೇಲಸ್ಪರ್ಧೆಯು ನಡೆದಿರೆ
    ನಾಲಂದದೊಳು ವಿಕಲಾಂಗರಿಂಗಮೆನುತ್ತುಂ|
    ಲೀಲೆಯಿನೇಂ ಪೋದನಿವಂ
    ಕಾಲುಳಿದುಂ ಗೆಲ್ದನಲ್ತೆ ಸ್ಪರ್ಧೆಯೊಳೋಡಲ್||

  5. ಸರಪಳಿ
    ಎಲ್ಲರೊಳಗನ್ಯೋನ್ಯದಿಂದಾವಿರಲುಬೇಕು-
    ಮಲ್ಲೆಲ್ಲೊ ದೂರದೊಳಿಹರ ಬಲ್ಲೆವೇಂ|
    ಇಲ್ಲೆ ನಮ್ಮಯ ನೆರೆಯೊಳಿರ್ಪರೊಳು ನೇಹಮಂ
    ಪಲ್ಲವಿಸಲಾಗಲೆಲ್ಲರ ಮೈತ್ರಿಯೈ||

  6. ೨. ತೋರುಬೆರಳು
    आनन्दपाथोनिधिवीचिकेव
    स्वं मां च या निर्दिशति स्फुरन्ती ।
    ‘तत् त्वं तदेव त्वमसी’ति जीयात्
    सा तर्जनी शङ्करदेशिकस्य ॥
    Hail to Shankaradeshika’s flapping forefinger, the very epitome of the waves of the ocean of bliss, which, pointing both at himself and me, proclaims ‘thou art that,’ ‘thou verily art that!!.’

    ೩. ಸರಪಳಿ
    काव्यादिधातुजाता
    काचित् साहित्यशृङ्खलापूर्वा
    बध्नन्ती प्रतिमर्त्यं
    विमोचयत्यन्यबन्धनतः ॥

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)