Jan 192021
 

೧.ಗಾಜಿನ ಮನೆ

೨. ಶಿಲಾಯುಗ

೩. ಉತ್ಪ್ರೇಕ್ಷಾಲಂಕಾರದಿಂದ ಅಡುಗೆಯ ವರ್ಣನೆ

೪. ಸಮಸ್ಯೆ: ತುಳಸಿಯ ಗಿಡಮಾದುದಲ್ತೆ ಮಾಮರವೆನುವೊಲ್

  7 Responses to “ಪದ್ಯಸಪ್ತಾಹ ೪೩೧”

  1. ಒಳಗಂ ಲಂಕೆಯ ಸೇರಲ್
    ತುಳಸಿಯ ಗಿಡಮಾದುದಲ್ತೆ ಮಾಮರವೆನುವೊಲ್|
    ಬಳಸಿಹ ಹನುಮಂತಂ ತಾಂ
    ಗಳಿಸಿಹ ಸಿದ್ಧಿಗಳೊಳಾಗಳಣಿಮಾವನ್ನೇಂ||
    (ಸಮಸ್ಯಾಪಾದವನ್ನು, ತುಳಸಿಯು ಮಾಮರದಷ್ಟಾಯಿತೆಂದೂ, ಮಾಮರವು ತುಳಸಿಯಷ್ಟಾಯಿತೆಂದೂ ಅರ್ಥೈಸಬಹುದು)

  2. ಭೂಮಿಯ 75% ಸಮುದ್ರ!
    ಉಪ್ಪೊಂದೆ ರುಚಿಯೆನುತೆ ಭೂಮಿಪಾಕದೊಳಿಳಿಸಿ
    ಚಪ್ಪರಿಸಿ ನೋಡಲಾಗತಿಯದಿತ್ತೈ|
    ಒಪ್ಪವಾಗಿಸಲದಂ ಹರಿಸಿಯುಂ ನದಿಗಳಂ
    ಸಪ್ಪೆಯಾಗಿಸದಾದ ದೇವನಿಂದುಂ||
    (ಇಲ್ಲಿ ಉತ್ಪ್ರೇಕ್ಷಾಲಂಕಾರವಿರದೆ, ಕಾವ್ಯಲಿಂಗಾಲಂಕಾರವಿದ್ದಿರಬಹುದು)

  3. ಶಿಲಾಯುಗದಲ್ಲಿ ಕಲ್ಲಿನಿಂದಲೇ ಆಯುಧಗಳನ್ನು ಮಾಡಿಕೊಳ್ಳುತ್ತಿದ್ದರು, ಯುದ್ಧ-ಬೇಟೆಗಳಿಗಾಗಿ. ಇಂದು ಕಶ್ಮೀರದಲ್ಲಿ ಕಲ್ಲುತುಂಡುಗಳನ್ನೇ ಎಸೆಯುವರು, ವಿನಾಕಾರಣ! ಇಂದಿನ ಯುಗವನ್ನು ಮುಂದುವರಿದ ಕಾಲ ಎನ್ನಬಹುದೆ? ಶಿಲಾಯುಗವನ್ನು ಹಿಂದುಳಿದ ಕಾಲ ಎನ್ನಬಹುದೆ?

    ಶಿಲಾಯುಗದೆ ಕಲ್ಲಿನಿಂ (Club)ಲಗುಡ-ಶಸ್ತ್ರವೈವಿಧ್ಯಮಂ
    ವಿಲಾಸದಿನೆ ಗೈದಿಪರ್ ಕದನ-ಖೇಟನ(Hunting)ಕ್ಕೆಲ್ಲಮುಂ|
    ಪ್ರಲಾಪವು ಸರಸ್ವತೀವಿಷಯದೊಳ್(Kashmir) ಗಡೇಂ ಮ್ಲೇಚ್ಛರಿಂ
    ಶಿಲಾಶಕಲ(piece)ಮನ್ನೆ ತಾಮೆಸೆವರಲ್ತೆ ನಿರ್ವ್ಯಾಜದಿಂ|| ಪೃಥ್ವೀ

  4. ನಳನಳಿಪ ಜೊಂಪವೂಗಳ 
    ತಳೆದು  ಕಿರಿದಳಿಗಳ ಬಳಗಮಮ್  ಸೆಳೆಯುತ್ತು೦ I
    ಎಳೆವಿಸಿಲಿಂಗೆಸೆದ   ಪಸುರ   
    ತುಳಸಿಯ ಗಿಡಮಾದುದಲ್ತೆ ಮಾಮರವೆನುವೊಲ್ II  

    ಕಿರಿದಳಿ  =ಮೊಜ೦ಟಿ  ಜೇನುನೊಣ 

    • ಕಿರುಜೇನು ತುಂಬೆ-ತುಳಸಿಗಳಂತಹ ಚಿಕ್ಕ ಹೂಗಳಿಂದಲೂ ಸಂಗ್ರಹಿಸುತ್ತವೆಂಬುದನ್ನು ಗಮನಿಸಿ ಮಾಡಿದ ಪರಿಹಾರ ಚೆನ್ನಿದೆ.

  5. ಯೋಜಿಸಿಹರೇಂ ತಾರಸಿಯ-ನೆಲವ ಮೇಣಿಂದೆ
    ಗಾಜಿನಿಂ ಮನೆಯ ಕದ-ಪಾಯ-ಗೋಡೆ|
    ಗೋಜಲಾಯ್ತಿಲ್ಲದೆಲೆ ಗುಪ್ತತೆಯೆ ಕೋಣೆಯೊಳು
    ಮೋಜಾಯ್ತು ಸ್ನಾನಗೃಹ, ಪಾಯಿಖಾನೆ!!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)