Jan 272021
೧. ಗೆಣಸು
೨. ಕೈಚೀಲ
೩. ವಿಭೂತಿ ನಾಮದ ಸಂವಾದ
೪. ವಸಂತತಿಲಕದ ಸಮಸ್ಯೆ
ಕೈಲಾಸಮಂ ಶರಧಿಮಧ್ಯದೆ ಶಂಭು ಕಾಂಬಂ
ईशो ददर्श तुहिनाचलमब्धिमध्ये
೧. ಗೆಣಸು
೨. ಕೈಚೀಲ
೩. ವಿಭೂತಿ ನಾಮದ ಸಂವಾದ
೪. ವಸಂತತಿಲಕದ ಸಮಸ್ಯೆ
ಕೈಲಾಸಮಂ ಶರಧಿಮಧ್ಯದೆ ಶಂಭು ಕಾಂಬಂ
ईशो ददर्श तुहिनाचलमब्धिमध्ये
ತೇಲಾಡುತಿರ್ಪ ಜಲವಾಹ, ತುಷಾರ(ice/snow) ಮೇಣಿಂ
ಫಾಲಾಕ್ಷಶೀರ್ಷಪತಿತದ್ರವರೂಪಮೆಲ್ಲಂ|
ಮೂಲಾರ್ಥದೊಳ್ ದಿಟದಿನೊಂದದಿದೆಲ್ಲಮುಂ ಕಾಣ್
ಕೈಲಾಸಮಂ(=ಸ್ವನಿವಾಸ) ಶರಧಿಮಧ್ಯದೆ ಶಂಭು ಕಾಂಬಂ||
Dubious godman Nithyananda’s so called ‘world’s greatest and purest Hindu nation,’ the ‘Republic of Kailaasa’ is reportedly in an island off Ecuador in the south Pacific ocean!
ಆಲೋಕಿಸುತ್ತಮಿತದೂರದೆ ನಿತ್ಯನಿರ್ಪಾ
ಕೈಲಾಸಮಂ ಶರಧಿಮಧ್ಯದೆ, ಶಂಭು ಕಾಂಬಂ|
ಲೀಲಾಳಿಯಂ ನಿಜನಗೇಂದ್ರನೊಳಿಲ್ಲದೆಲ್ಲಂ
’ಭೋಲೇ’ನೃಪಂ ಗಡೆನುತೆಂಬರೆ, ತಕ್ಕುದೆಂದಂ||
(ಭೋಲೇನೃಪ=ಭೋಲೇನಾಥ, ಭೋಲೇ=ಅಮಾಯಕ)
ದತ್ತ್ವಾ ಪುಲಸ್ತ್ಯತನುಜಾಯ ನಿಜಾತ್ಮಲಿಂಗಂ
ನೀತಃ ಸ ದಕ್ಷಿಣದಿಶಂ ಪುನರಾತ್ಮಜೇನ |
ಸಂಸ್ಥಾಪಿತಃ ಸಪದಿ ಸಿಂಧುಸಮುದ್ರತೀರೇ
ಸೈಶೋ ದದರ್ಶ ತುಹಿನಾಚಲಮಬ್ಧಿಮಧ್ಯೇ ||
ರಾವಣನಿಗೆ ತನ್ನ ಆತ್ಮಲಿಂಗವನ್ನು ಕೊಟ್ಟು ದಕ್ಷಿಣದೇಶಕ್ಕೆ ಒಯ್ಯಲ್ಪಟ್ಟ ಈಶ್ವರನು ಮಗನಿಂದ ಸಿಂಧುಸಮುದ್ರತೀರದಲ್ಲಿ(ಗೋಕರ್ಣದಲ್ಲಿ) ಪ್ರತಿಷ್ಠಾಪಿತನಾಗಿ (ಅಲ್ಲಿಯೇ) ಸಮುದ್ರಮಧ್ಯದಲ್ಲಿ ಕೈಲಾಸವನ್ನು ಕಂಡನು.
Fine imagination
Thank you sir
ಗೆಣಸು:
मिष्टालुक! त्वत्सदृशः सगर्भः
एकोsपि वा स्यात् वनिताकुलस्य ।
धत्तेsनिवार्यस्थितिषु स्वसारम्
यथा त्वमासीः जनकात्मजायाः ।।
ಓ ಗೆಣಸೇ! ನಿನ್ನಂತಹ ಸಹೋದರನು ಸ್ತ್ರೀಕುಲಕ್ಕೆ ಒಬ್ಬನಾದರೂ ಇರಬೇಕು – ನೀನು ಹೇಗೆ ಜನಕಾತ್ಮಜೆಗಾದೆಯೋ ಹಾಗೆ ಅನಿವಾರ್ಯಸಂದರ್ಭಗಳಲ್ಲಿ ಸೋದರಿಗೆ ಸಹಾಯ ಮಾಡಬಲ್ಲಂತಹವನು. (ಸೀತೆ ಭೂಮಿಯೊಳಗೆ ಸಿಕ್ಕವಳು, ಗೆಣಸೂ ಹಾಗೆಯೇ – ಹಾಗಾಗಿ ಅವರಿಬ್ಬರಲ್ಲಿ ಸಹೋದರತ್ವ.)
clap clap
ನಾಮ ವಿಭೂತಿ ಸಂವಾದ
“हरेः पर्यङ्काङ्कं परशिवपरास्त्वामभिमताः
धरन्ते मां शूलाङ्कनमलिकमुद्रां हरिपराः ।”
“बतैतत्सत्यं त्वद्भणितमि”ति भस्माभिवदति
“म्रियन्तेsथाप्येते हरिहरनये भेदधिषणाः ।।”
“ಹರಿಯ ಪರ್ಯಂಕ(ಆದಿಶೇಷ)ನ ಚಿಹ್ನೆಯಂತಿರುವ ನಿನ್ನನ್ನು ಪ್ರೀತಿಯಿಂದ ಶಿವಭಕ್ತರು ಧರಿಸುತ್ತಾರೆ. ಶೂಲಚಿಹ್ನದಂತಿರುವ ನನ್ನನ್ನು ಹರಿಪರರು ಲಲಾಟಮುದ್ರೆಯನ್ನಾಗಿ ಧರಿಸುತ್ತಾರೆ”.
“ನಿಜ ನಿನ್ನ ಮಾತು” ಭಸ್ಮವು ಉತ್ತರಿಸುತ್ತದೆ – “ಆದರೂ ಈ ಜನ ಹರಿಹರರಲ್ಲಿ ಭೇದಬುದ್ಧಿಯಿಟ್ಟುಕೊಂಡು ಸಾಯುತ್ತಾರೆ.”
That is a lesson on how to go about scouting ideas.
ವಿಭೂತಿ : ಹಾಕಿಕೊಳುವುದದಗ್ನಿನೇತ್ರವು
ತಾಕಿದೊಡನೆಯೆ ತಾನು ಹಣೆಯನು
ನಾಮ : ನೂಕಿ ತೆಗೆದುದು ಕಾಮ ಶರಕದು ತಿಳಿಯದೇ ನನಗೇ ।
ಸಾಕಿ ಸಲಹಿವೆ ಶಂಖ ಚಕ್ರವ
ಬೇಕೆ ಸಾಕ್ಷಿಗಳಿನ್ನು ನಿನಗೇ ?
ವಿಭೂತಿ : ತೂಕವಾವುದು ಗೊತ್ತು ತನಗದು ಗರ್ವವೆಂತದರೊಳ್ ।।