Feb 042021
೧. ವಧುಪರೀಕ್ಷೆಯಲ್ಲಿ ವಿಫಲವಾದವಳು
೨. ರಾಜನ ಕಿರೀಟ
೩. ಸಮಸ್ಯೆ:
(ಕಂದ) ಬೆಂಕೆಯನುರಿಸಲ್ಕೆಗಾಳಿಯೇತಕೆ ಬೇಕಯ್
(वसंततिलक) सन्धुक्षणार्थमनलस्य पवः किमर्थं
೧. ವಧುಪರೀಕ್ಷೆಯಲ್ಲಿ ವಿಫಲವಾದವಳು
೨. ರಾಜನ ಕಿರೀಟ
೩. ಸಮಸ್ಯೆ:
(ಕಂದ) ಬೆಂಕೆಯನುರಿಸಲ್ಕೆಗಾಳಿಯೇತಕೆ ಬೇಕಯ್
(वसंततिलक) सन्धुक्षणार्थमनलस्य पवः किमर्थं
ವಧುಪರೀಕ್ಷೆಯಲ್ಲಿ ವಿಫಲವಾದವಳು
ಸೀಸ|| ಸಂಧಿಽಸಿದ್ದಳು ಯೋಗ್ಯಽ ವರನನ್ನುಽ ಮುನ್ನಽಮೇ, ವರಿಸುಽವಽಳಿದ್ದಽಳಾತನನೇ ಮುಂದೆಽ
ತಾಯ್ತಂದೆಽಯರೊಳುಽ ತಾಽ ಪೇಳಽದೆಽ ನಲುಗಿದ್ದಽಳಂಜುತ್ತೆಽ ಬೈಗುಽಳಽ-ರೋಧಽಗಳಿಗೆಽ|
ಪ್ರಸ್ತಾವಽವೊಂದಽನುಽ ಮನೆಯಽವಽರಿಡೆ ಮುಂದೆಽ, ಬೇರಿಲ್ಲಽ ಮಾರ್ಗಽಮೆಂದೆನ್ನುತ್ತವಳುಽ
ಧೈರ್ಯಽದಿಂದಿವನೊಽಳುಽ ಬೆಸಗೊಂಡುಽ ಗೋಪ್ಯಽದಿಂ, “ಬೇಡಽವೀ ಪೆಣ್ಣೆಂದುಽ” ಪೇಳೆಂದಿಹಳುಽ||
ತೇಟಗೀತಿ|| ಏನಽ ಕಂಡಽನೋ ಇವನಿಂದೀ ಪೆಣ್ಣೊಳ್ ಗುಣವಽ
ಆದರೆ ಇವಳನ್ನೇ ವರಿಸುಽವೆಽನೆಂದಂ ಗಂಡುಽ!
ಬೇರೆಽ ತೋಚಽದೆಽಲೇನೊಂದೂ ಸೋತಽಳಾಗಳ್
ಮರೆತುಽ ಪ್ರಿಯನನ್ನುಽ ಇವನನ್ನೇ ಕೈಗೊಂಡಳಲೆಽ!!
ಸಂಕೀರ್ಣಮಿಂದು ತಂತ್ರಂ
ಬೆಂಕಿಯನುರಿಸಲ್ಕೆ ಗಾಳಿಯೇತಕೆ ಬೇಕಯ್|
ಕಂಕಣಬದ್ಧಂ (ವಿ)ಜ್ಞಾನಿಯು
ಸಂಕಲ್ಪಿಸಿಹಂ ಮರುದ್ರಹಿತಚುಲ್ಲಿಕೆಯಂ||
ಸಾಮಾನ್ಯವಾಗಿ ರಾಜರಿಗೆ ಉದ್ದನೆಯ ಕೂದಲಿರುತ್ತದೆ. ಕಿರೀಟ ಚುಚ್ಚದಿರುವಂತೆ ಅದನ್ನು ಹಾಗೆ ಪುಷ್ಟವಾಗಿ ಬೆಳೆಸಿರುತ್ತಾರೆ!
ಊರುತ್ತೆ ನೋಯಿಪುದು ರಾಜರ ಕಿರೀಟವದು
ಶಿರದೊಳಗೆ, ಹಣೆಯೊಳಗೆ, ಕಿವಿಗಳೊಳು ಮೇಣ್|
ಭಾರಂ ಕಿರೀಟಮೊಂದೆಯೆ ನೋಡೆ, ಮೆತ್ತೆವೊಲ
ಭೂರಿಕೇಶವದಹುದು ಮತ್ತೊಂದು ದಲ್||
मार्गोपला न विविदन्ति विधोर्-विकाशं
काका न चूत-सुरुचिम् मरुर्-अभ्र-केलिम् ।
एत्वेत्वनार्य इति सान्त्वयति स्वचित्तं
न्यक्कार-तप्त-हृदया परिणीति-कामा ॥
“ದಾರಿಯಲ್ಲಿ ಬಿದ್ದ ಕಲ್ಲುಗಳಿಗೆ ಚಂದ್ರನ ಬೆಳಕನ್ನು ತಿಳಿಯಲು ಆಗುವುದಿಲ್ಲ. ಕಾಗೆಗಳಿಗೆ ಮಾವಿನ ಮರದ ರುಚಿ ತಿಳಿಯುವುದಿಲ್ಲ. ಮರುಭೂಮಿಗೆ ಮೋಡಗಳ ಆಟವು ತಿಳಿಯುವುದಿಲ್ಲ. ಈ ಅನಾರ್ಯನು ತೊಲಗಿಹೋಗಲಿ” ಎಂದು, ತಿರಸ್ಕಾರದ ದೆಸೆಯಿಂದ ಬೆಂದ, ಮದುವೆಯಾಗಲು ಆಸೆಯನ್ನುಳ್ಳ ಹುಡುಗಿಯು ತನ್ನನ್ನೇ ತಾನು ಸಮಾಧಾನ ಮಾಡಿಕೊಂಡಳು.
ರಾಜನ ಕಿರೀಟ:
ज्वलद्-रत्नौघ-युक्तस्य मुकुटस्य सुशोभिनः ।
चिन्ताराशिर्-वरीवर्ति दीपस्याधस्-तमो यथा ॥
ಹೊಳೆಯುವ ರತ್ನಗಳಿಂದ ಕೂಡಿದ, ಶೋಭಿಸುತ್ತಿರುವ ಮುಕುಟದ ಕೆಳಗೆ (ತಲೆಯ ಒಳಗಡೆ) ಯಾವಾಗಲೂ ಚಿಂತೆಯ ರಾಶಿಯೇ ಇರುತ್ತದೆ, ದೀಪದ ಕೆಳಗೆ ಕತ್ತಲಿರುವಂತೆ.