Oct 052021
 

ವರ್ಣನೆ:

೧. ತೈಲದಲ್ಲಿ ಬಿದ್ದ ನೀರಿನ ಹನಿ

೨. ಭಾವನೆಯ ಭಾರ

೩. ಕಳೆದು ಹೋದ ಕೀಲಿಕೈ ಸಿಕ್ಕಾಗ

ಶಿಖರಣಿಯ ಸಮಸ್ಯೆ:  

(ಕನ್ನಡ) ಜಲಂ ಸರ್ವಶ್ರೇಷ್ಠಂ ರುಚಿಯೆನಿಸಿತಯ್ ಪೇಯಚಯದೊಳ್

(ಸಂಸ್ಕೃತ) ಜಲಂ ಸರ್ವಶ್ರೇಷ್ಠಂ ರುಚಿಕರಮಭೂತ್ ಪೇಯನಿಕರೇ 

  4 Responses to “ಪದ್ಯಸಪ್ತಾಹ ೪೪೧”

  1. ವಿಲಾಸಗ್ರಸ್ತರ್ ತಾಂ ವ್ಯಸನ-ಗದಸಂತಪ್ತರಿಹರಯ್ (ಮಧುಮೇಹ)
    ಖಿಲಂ ಪಾಲಿದ್ದೇಂ ಮೇಣ್ ಚಹದೊಳು ಗುಡಂ ಕಾಫಿಯೊಳಗುಂ|
    ಲಲಾಟಾಲೇಖಂ ಧಿಕ್! ಎನುತೆ ಕುಡಿವರ್ ತಿಕ್ತರಸಮಂ
    ಜಲಂ ಸರ್ವಶ್ರೇಷ್ಠಂ ರುಚಿಯೆನಿಸಿತಯ್ ಪೇಯಚಯದೊಳ್||

  2. ಕರಗದವರಾರಾರ್ದ್ರತೆಗೆ ಹೇಳು ವಿಶ್ವದೊಳು
    ಚರ ಮೇಣಚರಕೆಲ್ಲ ಅನ್ವಯವಿದು|
    ನೊರಜುಗಲ್ಲಿನ ಮೇಲೆ ಗುಮ್ಮನಿಹ ನೀರ ಹನಿ
    ಹರಡುತಪ್ಪುವುದಲ್ತೆ ತೈಲಮುಖವ||

  3. ಭಾರವನು ಹೊರಲಿಹವು ಹಸ್ತ-ಭುಜ-ಶೀರ್ಷಗಳು
    ಹೇರಲಾಗದು ಹೃದಯಕೇನೇನನು|
    ಸೈರಿಸದು ಭಾವಗಳನದು ಭಾರವಿದ್ದರೂ
    ಕೋರಕದ ಲಾಘವದ ಹರ್ಷವನ್ನೂ||

  4. ಕಳೆದು ಹೋದ ಕೀಲಿಕೈ ಸಿಕ್ಕಾಗ

    ಮೂಡಣದ ಬಾಗಿಲಿನ ಕಳೆದಿರಲ್ ಕೀಲಿಕೈ
    ಓಡಾಡಲಾಯ್ತು ತೆಂಕಣದ ಕದವು|
    ಕೇಡೇನು ಕಾಡಿಲ್ಲ, ದಿಕ್ಕುಗಳ ಹಂಗಿನ್ನು
    ಬೇಡವೆಂಬೆನು ಕೀಲಿಕೈ ಸಿಕ್ಕಲೇನ್||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)