Oct 252021
ವರ್ಣನೆ –
೧. ಅಹಲ್ಯೆ ಬಂದಾಗ ಗೌತಮನ ಯೋಚನೆ:
೨. ಇಷ್ಟದ ಮರ ಬೇರೆ ಬೇರೆ ಋತುಗಳಲ್ಲಿ
೩. ದೇವರಿಲ್ಲದ ಗುಡಿ
ಮಾಲಿನೀ ಛಂದಸ್ಸಿನ ಸಮಸ್ಯೆ:
ಕನ್ನಡ – ಪರಿದುಡುಗೆಯೆ ನಿತ್ಯಂ ರಾಣಿಗಂ ಚಂದಮಲ್ತೇ
ಸಂಸ್ಕೃತ – ವಿಲಸತಿ ನೃಪನಾರೀ ಛಿನ್ನವಸ್ತ್ರೇಣ ನಿತ್ಯಂ
ವರ್ಣನೆ –
೧. ಅಹಲ್ಯೆ ಬಂದಾಗ ಗೌತಮನ ಯೋಚನೆ:
೨. ಇಷ್ಟದ ಮರ ಬೇರೆ ಬೇರೆ ಋತುಗಳಲ್ಲಿ
೩. ದೇವರಿಲ್ಲದ ಗುಡಿ
ಮಾಲಿನೀ ಛಂದಸ್ಸಿನ ಸಮಸ್ಯೆ:
ಕನ್ನಡ – ಪರಿದುಡುಗೆಯೆ ನಿತ್ಯಂ ರಾಣಿಗಂ ಚಂದಮಲ್ತೇ
ಸಂಸ್ಕೃತ – ವಿಲಸತಿ ನೃಪನಾರೀ ಛಿನ್ನವಸ್ತ್ರೇಣ ನಿತ್ಯಂ
ದೇವರಿಲ್ಲದ ಗುಡಿಯು, ದ್ರವ್ಯಪೂಜೆಯದೆಂತು?
ನಾವು-ನೀವಿಂತೆಂದು ತೊರೆವೆವದನು|
ಸೇವೆಯನ್ನಾತ್ಮದಿಂ ಗೈವಾತನೆಲ್ಲೆಡೆಯು
ತೀವಿಹ ನಿರಾಕಾರವನೆ ಕಾಂಬುವಂ||
ಅಹಲ್ಯೆ ಬಂದಾಗ ಗೌತಮನ ಯೋಚನೆ:
ಕಲ್ಲಾಗಿಸೇನೀಕೆಯನಾಂ ಗಡೆಂದಿಗೋ
ಇಲ್ಲಿಂದಿಗಾರಿತ್ತನೊ ಜೀವಮಂ, ಮಿಗಿಲ್|
ಸೊಲ್ಲಾದುದೇನಾತನದೆನ್ನ ಶಾಪಕಿಂ
ಹೊಲ್ಲಾದುದೆನ್ನಂದಿನ ಭಾವಮೀಕೆಯೊಳ್|| (ಇಂದ್ರವಂಶ)
ಸಮಸ್ಯಾಪೂರಣ:
ಇರುವುವೆರಡೆ ವಸ್ತ್ರಂ ಮೈಯ ಮೇಲೊಂದು ಮತ್ತಂ
ಹರಡಿ ಗಳುವೊಳಿರ್ಕುಂ ನಿರ್ಧನರ್ಗಂತೆ ನೋಡಲ್|
ಪರಿದುಡುಗೆಯೆ ನಿತ್ಯಂ; ರಾಣಿಗಂ ಚಂದಮಲ್ತೇ
ಪರಿದವೊಲಿರುವೆಂತೋ ವೇಷಭೂಷಂಗಳೆಂಬೆಂ||
ಇಷ್ಟದ ಮರ ಬೇರೆ ಬೇರೆ ಋತುಗಳಲ್ಲಿ
ಎಷ್ಟು ಯೋಚಿಸಿದರೂ ಬೋಧದಾರಿದ್ರ್ಯಗಳ-
ನಿಷ್ಟವೇ ಕಾಡುತಿದೆ ಈ ವಿಷಯದೆ|
ಇಷ್ಟನ್ನು ನಾ ಬಲ್ಲೆ ಕಲ್ಪತರುವೀವುದೆನು-
ತಿಷ್ಟಪೇಯವನೆಲ್ಲ ಋತುಗಳೊಳ್ ತಾನ್||
ದೇವರಿಲ್ಲದ ಗುಡಿಯ ಜೀವಕೇಂದ್ರವು ಜಡವು
ನಾವಿಕನು ತೊರೆದಂತ ದೋಣಿಯಂತೆ|
ಭಾವಭಕ್ತಿಗಳಿರದ ಉತ್ಸವಗಳೆಷ್ಟು ದಿನ
ಕಾವನಿಲ್ಲದ ದಾವ ಕಾಡದಿರದೇ||
ಹೊಳ್ಳರು ದಾರಿತಪ್ಪಿ ಬಂದಂತಿದೆ! ಮರುನಲ್ಬರವು. ಪದ್ಯ ಚೆನ್ನಾಗಿದೆ. ಮತ್ತೆ ನೇಪಥ್ಯಕ್ಕೆ ಸರಿಯದಿರಿ.
ನಮಸ್ತೇ ಇನ್ನು ಸೇವೆ ತಪ್ಪಿಸುವುದಿಲ್ಲ
ಖಾರ’ಸೇವೆ’ಯದೇನು ಚೌಚೌ ಗಡೇನಯ್ಯ
ಖೀರು-ಬೋಂಡಗಳನೇನಾರೆ ತಿನ್ನು|
ವಾರವಾರಕೆ ಬಂದು ತಪ್ಪದೆಲೆ ನೀನಿಲ್ಲಿ
ಗೀರಿಹೋಗೊಂದೆರಡು ಪದ್ಯಗಳನು||
ಗುಡಿಯೇನು ಬಯಲೇನು ’ದೇವ’ರಿರದೆಡೆಯುಂಟೆ
ಅಡಿಗಡಿಗರೂಪರೂಪದಿನಿರುವನು|
ತೊಡಕೆಂತೊ ನಿನಗೆ ’ವಿಗ್ರಹ’ವಿಷಯದೊಳಗಕ್ಕು
ಕಡೆಯುತಿಹರಲ್ತೆ ಶಿಲ್ಪಿಗಳತ್ತ ಕಾಣ್||
ಅಹಲ್ಯೆ ಬಂದಾಗ ಗೌತಮನ ಯೋಚನೆ – ಪ್ರೊ|| ಅ. ರಾ. ಮಿತ್ರರ ಕಲ್ಪನೆಯನ್ನು ಆಧರಿಸಿ:
ಮಾಲಿನ್ಯಮಯ ನೀನು ನಿಲ್ಲಲ್ಲೆ ಒಳಬರದೆ
ಕಾಲೆತ್ತಿ ಹೊಯ್ದಿಹವೊ ಎನಿತು ನಾಯಿ|
ಆಲೇಪ ಗೈದಂಟುವಾಳ-ಸೀಗೆಗಳ ಮೀಯ್
ಕಾಲಾಂತರದೆ ಗಬ್ಬು ಕಳೆದೀತು ಕಾಣ್||
ಶಾಪವಿಮೋಚಿತಳಾದ ಅಹಲ್ಯೆ ಬಂದಾಗ ಗೌತಮನ ಯೋಚನೆ
ಕಾಂತೆಯ ಬರವಂ ಕಾಣಲ್
ಭ್ರಾಂತಿಯೆ ಮತ್ತಡರಿಕೊಂಬುದೆಂದು ಪರಿಕಿಸಲ್|
ಶ್ರಾಂತೆಯ ಕಳಂಕ ರಹಿತ ಸು-
ಕಾಂತಿಗೆ ಬೆರಗಾದನಲ್ತೆ ಗೌತಮನಾಗಳ್||
Fine
ಶೂನ್ಯವಾವೆಡೆಯೊಳಿದೆ ಲೋಕದೊಳ್, ದಿವ್ಯಚೈ-
ತನ್ಯವಿರದೆಡೆ ಶಾಠ್ಯವೇ ಮೆರೆವುದೈ|
ಅನ್ಯಾನ್ಯದುರ್ವೃತ್ತಿಯಿಲ್ಲಿಲ್ಲವೆಂದರಿಯೆ
ಧನ್ಯ ನೀ ದೈವವನ್ನಲ್ಲೆ ಕಂಡೆ||
ಪರಿದುಡುಗೆಯೆ ನಿತ್ಯಂ ರಾಣಿಗಂ ಚಂದಮಲ್ತೇ
===
ಮೆರೆದಿರೆ ದಮಯಂತಿ ಪ್ರೀತನೊಳ್ ಪ್ರಾಂತದೊಳ್ ಮೇ
ಣರಸಿಗೆ ವಿಧಿಚಿತ್ತಂ ಕಾಡಿರಲ್ ಕಾಡಿನೊಳ್ ತಾ
ನರಸುತೆ ಪತಿಯಂ ಲೋಭಂಗಳಂ ಜೈಸಿರಲ್ ಹಾ!
ಪರಿದುಡುಗೆಯೆ ನಿತ್ಯಂ ರಾಣಿಗಂ ಚಂದಮಲ್ತೇ
===
ಕಾಡಿನಲ್ಲಿ, ಯಾವ ಲೋಭಕ್ಕೂ ತುತ್ತಾಗದೆ ಪತಿಯನ್ನರಸುತ್ತಿರುವ ದಮಯಂತಿಗೆ (ಕಾಡಿನೊಳ್) ಪರಿದುಡುಗೆಯೆ ನಿತ್ಯಂ ಚಂದಮಲ್ತೇ
ಚಳಿಗಾಲಂ ಬಂದುದೀಗಳ್ ನಿರುಕಿಸೆಲವೊ ನೀಂ ಸಾಲುಸಾಲ್ ಮಾಮರಂಗಳ್
ತೊಳಗುತ್ತುಂ ಪರ್ಣಗುಚ್ಛಂ ಸುಖಮನೆನಿತೊ ಕಣ್ಗಿತ್ತಿರಲ್ ತಾಮ್ರವರ್ಣಂ|
ಬಿಳಿವೂಗಳ್ ಲಕ್ಷಲಕ್ಷಂ ಗಮಲು-ಬಿಳುಪದೇಂ ಬಿೞ್ದುಪೋಗುಂ ಗಡೆಂತೋ
ತಳೆಗುಂ ತಾಂ ಪಣ್ಣನಲ್ಪಂ ಬಿಸಿಲ ಋತುವೊಳೈ ನೂರುಪೂವಿಂಗಮೊಂದಂ|| ಮಹಾಸ್ರಗ್ಧರಾ
Super.
ತುಂಬಾ ಹೆಚ್ಚು ಚಳಿ ಇದ್ದಾಗ ಛಳಿ ಅಂತ ಅರ್ಥವೋ 🙂 ? ಪದ್ಯ ಚೆನ್ನಾಗಿದೆ!
ತಮ್ಮ ಹೆಸರಿಗಿಂತ ಪ್ರಮಾಣವೆ? 🙂 ತಪ್ಪನ್ನು ತೋರಿಸಿಕೊಟ್ಟುದಕ್ಕಾಗಿ ಧನ್ಯವಾದ. ಮೂಲದಲ್ಲಿಯೇ ತಿದ್ದಿದ್ದೇನೆ.
ವೃತನಿಷ್ಠಳಾದಳೌ ಚಳಿಗಾಲದಾದಿಯೊಳ್
ನುತವಸಂತದಿ ಪೂವ ಸುರಿದುಕೊಂಬಳ್|
ಸುತಫಲಂಗಳ ಹೊತ್ತು ಮಾಮರಳು ಮತ್ತೆ ತಾನ್
ಋತುಸ್ನಾತೆಯಾಗಿಹಳು ಮಳೆಗಾಲದೊಳ್||
correction:
ವ್ರತನಿಷ್ಠಳಾದಳೌ ಚಳಿಗಾಲದಾದಿಯೊಳ್
ನುತವಸಂತದಿ ಪೂವ ಸುರಿದುಕೊಂಬಳ್
ಸುತಫಲಂಗಳ ಹೊತ್ತು ಮಾಮರಳು ಮತ್ತಿದೋ
ಋತುಸ್ನಾತೆಯೌ ಚೆಲುವೆ ಮಳೆಗಾಲದೊಳ್
नृपतिवचनमद्द्धा पालयन् लीलया यो
विपिनमगमदिन्द्रो रामचन्द्रः सदारः
निजसुपतिसुकर्थं तद्वने त्यक्तसंम्पत्
विलसति नृपनारी छिन्नवस्त्रेण नित्यं
ಶ್ರೀಕರರಿಗೆ ಪದ್ಯಪಾನಕ್ಕೆ ಸ್ವಾಗತ. ಪದ್ಯಭಾವ ಸ್ಪಷ್ಟವಿದೆ, ಚೆನ್ನಾಗಿದೆ. ’ಸುಕರ್ಥಂ’ ಎಂಬುದೊಂದು ಅರ್ಥವಾಗಲಿಲ್ಲ. ಬಿಡದೆ ಸತತವಾಗಿ ಇಲ್ಲಿ ತೊಡಗಿಕೊಳ್ಳಿ. ಧನ್ಯವಾದ.
ಬಹಳ ಧನ್ಯವಾದಗಳು..
ಕ್ಷಮಿಸಬೇಕು ಅದು ‘ಸುಖಾರ್ಥಂ’
Very nice pUraNa.
ಸುಪತಿ ಬದಲು ರಮಣ ಅಂತ ಮಾಡಬಹುದು.
ಧನ್ಯವಾದಗಳು..ಒಳ್ಳೆ ಸಲಹೆ
धर्मार्थं या ब्रह्मणा मे प्रदत्ता
अर्थेऽनर्थे या स्थिता मत्-सहाया ।
कामार्ता या देवराजं सिषेवे
सैवेदानीम् मोक्षलक्ष्म्या चकास्ति ॥
ಧರ್ಮಕ್ಕೋಸ್ಕರ ಬ್ರಹ್ಮನಿಂದ ನನಗೆ ಕೊಡಲ್ಪಟ್ಟವಳು, ಸಂಪತ್ತಿದ್ದಾಗಲೂ ಇಲ್ಲದಿದ್ದಾಗಲೂ ನನ್ನೊಡನೆ ಇದ್ದವಳು, ಕಾಮಾರ್ತಳಾಗಿದೇವರಾಜನನ್ನು ಸೇವಿಸಿದವಳು – ಅವಳೇ ಈಗ ಮೋಕ್ಷದ ಸಂಪತ್ತಿನಿಂದ ಹೊಳೆಯುತ್ತಿದ್ದಾಳೆ (ಶ್ರೀರಾಮನ ಪಾದಸ್ಪರ್ಶದಿಂದ ಅವಳಿಗೆ ಮುಕ್ತಿ ದೊರೆಯಿತು ಎಂದು ಭಾವ)
Realised that there is a sandhi between the first and the second pādas, causing the chandas to break.
Therefore, modified it as below.
या धर्मार्थं ब्रह्मणा मे प्रदत्ता
यार्थेऽनर्थे च स्थिता मत्-सहाया ।
या कामार्ता देव्राजं सिषेवे
सैवेदानीम् मोक्षलक्ष्म्या चकास्ति ॥
Realised that there is a sandhi between the first and the second pādas, causing the chandas to break.
Therefore, modified it as below.
या धर्मार्थं ब्रह्मणा मे प्रदत्ता
यार्थेऽनर्थे च स्थिता मत्-सहाया ।
या कामार्ता देव्राजं सिषेवे
सैवेदानीम् मोक्षलक्ष्म्या चकास्ति ॥
Samasya:
परिजन-परिषेव्या दूरभाषा-निमग्ना
चरणधृत-शलाका चित्रकेशावतंसा ।
धृत-युतक-विशेषा शुद्ध-चर्मोरुकेयं
विलसति नृपनारी छिन्न-वस्त्रेण नित्यम् ॥
Served by her retinue, engrossed in her phone, wearing nails (pointed heels) on her feet, adorned with colourful hair (or colourful hair-ornament), wearing a beautiful shirt and trousers made of pure leather, this wife of a king (MLA /MP in modern context?) shines in torn clothes always.
A king can be a political leader in the modern context.
Ripped jeans are considered fashionable 🙂
The picture I had in mind was that of the young wife of a political leader doing her regular shopping in a mall. Not sure if that was conveyed!
Modern ರಾಣಿಗೆ ಸನಾತನ ಸಂಸ್ಕೃತದಲ್ಲಿ ನೀಡಿದ ಪರಿಹಾರ ಚೆನ್ನಾಗಿದೆ. 🙂
Very nice..
ಬಹಳ ಚೆನ್ನಾಗಿದೆ ತಮ್ಮ ಪೂರಣ..
ಧನ್ಯವಾದಗಳು